Saturday, December 21, 2024
Homeಸಂಸ್ಕೃತಿ೧೮ ಪುರಾಣ ಗ್ರಂಥ ರಚಿಸಿದ ವ್ಯಾಸ ಮಹರ್ಷಿ ಹುಟ್ಟಿದ ದಿನವೇ "ಗುರುಪೂರ್ಣಿಮೆ " "ಸರಿ ಮರ್ಗ...

೧೮ ಪುರಾಣ ಗ್ರಂಥ ರಚಿಸಿದ ವ್ಯಾಸ ಮಹರ್ಷಿ ಹುಟ್ಟಿದ ದಿನವೇ “ಗುರುಪೂರ್ಣಿಮೆ ” “ಸರಿ ಮರ್ಗ ತೋರುವವನೇ ನಿಜವಾದ ಗುರು : ಲೀಲಾಜಿ

ದಾವಣಗೆರೆ - ಜೂ - ೪.   ಋಣಾತ್ಮಕ ಬಂಧನದಿಂದ ಬಿಡಿಸಿ,ಸರಿಯಾದ ಮರ‍್ಗ ತೋರಿಸುವವನೇ" ಗುರು" ಅಂತಹ ಗುರುವನ್ನು ನಿತ್ಯವೂ ಸ್ಮರಿಸುವುದೇ ನಮ್ಮ ಉಸಿರಾಗಬೇಕೆಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿಕೆ ಲೀಲಾಜಿಯವರು  ಕರೆ ನೀಡಿದರು.
 ಅವರು ದೇವರಾಜ ಅರಸು ಬಡವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೀಶ್ವರ ಶಾಖಾಮಠದಲ್ಲಿ ಸಂಕಲ್ಪ ಸೇವಾ ಪೌಂಡೇಶನ್ ರವರು ರ‍್ಪಡಿಸಿದ್ದ "ಯೋಗ ಶಿಕ್ಷಕರುಗಳಿಗೆ "ಗುರು ವಂದನಾ ಕರ‍್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ , ೧೮ ಮಹಾಪುರಾಣ ಗ್ರಂಥಗಳನ್ನು ರಚಿಸಿದ ವ್ಯಾಸ ಮಹರ್ಷಿಗಳು  ಹುಟ್ಟಿದ ದಿನವೇ '"ಗುರುಪೂರ್ಣಿಮೆ "ಎನ್ನುತ್ತಾರೆ ಎಂದರು.
      ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಜನರ ಮಧ್ಯ ಹಾಡುತ್ತ ಕುಣಿದಾಡಿದ ಸಂತ ಶಿಶುನಾಳ ಶರೀಫ್ ರವರು ಹುಟ್ಟಿದ್ದು ಹುಣ್ಣಿಮೆಯಂದು ಎಂದು ನುಡಿದು, ಗುಣವಂತ ವ್ಯಕ್ತಿಗಳಿಂದ ಆರ‍್ಶಗಳನ್ನು ಕೇಳುತ್ತಾ , ಅನುಭವಿಸುತ್ತಾ ಸುಂದರ ಜೀವನ ನಡೆಸಬೇಕೆಂದರು ,
 " ಗುರುಗಳಲ್ಲಿ " ಅನೇಕ ವಿಧಗಳಿದ್ದು ಒಳ್ಳೆಯದಕ್ಕೂ ಇದ್ದರೆ. ಕೆಟ್ಟ ಕೆಲಸ ಮಾಡಲು ಗುರುಗಳಿದ್ದಾರೆ,ಜೀವನ ಶೈಲಿ ಬದಲಿಸುವ ಗುರುಗಳಿಂದ ಮಾತ್ರ ಸಮಾಜದಲ್ಲಿ ಒಳ್ಳೆ ಕೆಲಸಗಳಾಗಲು ಸಾಧ್ಯ , ಗುರುಗಳ ಗುರು ಮಹಾಗುರು ಅವನೇ ಯೋಗೇಶ್ವರ , ಅವನು ವಿಶ್ವ ವ್ಯಾಪಿಯಾಗಿದ್ದಾನೆಂದು ನುಡಿದು , ಆರೋಗ್ಯ ರಕ್ಷಣೆಗೆ ದಾರಿ ತೋರುವ ಯೋಗ ಗುರುಗಳ ಹಾಗೂ ವಿದ್ಯಾ ಗುರುಗಳ ಸ್ಮರಣೆ ಅಗತ್ಯವೆಂದರು.
 "ಇತ್ತೀಚೆಗೆ ಯುವಕರು ಮತ್ತು ಯುವತಿಯರು ಮೊಬೈಲ್ ದಾಸರಾಗುತ್ತಿದ್ದಾರೆ , ಇದರಿಂದ ಸಂತೃಪ್ತ ಜೀವನಕ್ಕೆ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ , ಅತ್ತೆ  - ಸೊಸೆ ತಾಯಿ  - ಮಗಳಂತೆ ಒಂದಾಗಿ ಜೀವನ ನಡೆಸಬೇಕೆಂದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂದೀಪ್ ರ‍್ಸಿಂಗ್ ಹೋಂನ  ಡಾ//  ಎಚ್ ಎನ್ ಮಲ್ಲಿಕರ‍್ಜುನಪ್ಪನವರು ಮಾತನಾಡಿ ಆಸ್ಪತ್ರೆಗಳ ವೈದ್ಯರು  ರೋಗಿಗಳಿಗೆ ತಪ್ಪುಮಾಹಿತಿ ನೀಡುತ್ತಿದ್ದಾರೆ , ಯೋಗಾಸನದಿಂದ ಮಕ್ಕಳ ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತಾ ಅವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಿಸುತ್ತಿದ್ದಾರೆ, ಆದ್ದರಿಂದ  ಯೋಗ ಶಿಕ್ಷಕರಿಗೆ ಧನ್ಯವಾದ ಹೇಳಬೇಕೆಂದರು .
        ದಾವಣಗೆರೆ ಜಿಲ್ಲಾ ಕರ‍್ಯನಿರತ ಪತ್ರರ‍್ತರ ಸಂಘದ ನಿಕಟ ಪರ‍್ವ ಅಧ್ಯಕ್ಷ ವೀರಪ್ಪ ಎಂ ಭಾವಿ ಇವರು ಮಾತನಾಡುತ್ತಾ  , "ವ್ಯಕ್ತಿ ಶಾಶ್ವತ ಅಲ್ಲ ವ್ಯಕ್ತಿ ಮಾಡಿದ ಕೆಲಸ ಶಾಶ್ವತವಾಗಿರುತ್ತದೆ  , ಆದ್ದರಿಂದ ಪ್ರತಿಯೊಬ್ಬರೂ ಸಮಾಜಕ್ಕೆ ಒಳ್ಳೆಯದನ್ನು ಬಯಸುವ   " ಗುರು " ಗಳ ಮರ‍್ಗರ‍್ಶನದಲ್ಲಿ ನಡೆಯಬೇಕು, ಗುರುಗಳೆಂದರೆ ಖಾವಿ ಧರಿಸಿದವರಷ್ಟೆ ಅಲ್ಲ ಒಳ್ಳೆಯ ಮರ‍್ಗರ‍್ಶ ನ ನೀಡುವರೇ ಗುರು ಎಂದರು.         ಸಂಕಲ್ಪ ಸೇವಾ ಪೌಂಡೇಶನ್ ನ ಅಧ್ಯಕ್ಷ ಜಿ ಮಹಾಂತೇಶ್ ಅಧ್ಯಕ್ಷತೆ ವಹಿಸಿದ್ದರು .
       ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕರ‍್ಯರ‍್ಶಿ ವಾಸುದೇವ ರಾಯ್ಕರ್ , ವನಿತ ಯೋಗ ಟ್ರಸ್ಟ್ ಮುಖ್ಯಸ್ಥ ಪ್ರಕಾಶ್ ಉತ್ತಂಗಿ ,  ಹಿರಿಯ ಯೋಗ ಶಿಕ್ಷಕ ಕೆ ಕರಿಬಸಪ್ಪ , ಶ್ರೀ ಅನ್ನದಾನೀಶ್ವರ ಮಠದ ಕರ‍್ಯರ‍್ಶಿ ಎನ್.  ಅಡಿವಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ,
       ಇದೇ ಸಂರ‍್ಭದಲ್ಲಿ ಸಂತೋಷ್ ಡಿ ವಿ , ಟಿ ಮಂಜುನಾಥ್, ಕೆ ಆರ್ ವೆಂಕಟೇಶ್, ಯೋಗ ಗುರುಗಳಾದ ಜಿ ವೀರಭದ್ರಪ್ಪ ,     ಡಾಟಟ ರಾಘವೇಂದ್ರ ನಾಯಕ್ , ಡಾ ಟಟ ಜೈ ರಾಮ , ನೀಲಪ್ಪ ಸೇರಿದಂತೆ ೬೦ಕ್ಕೂ ಹೆಚ್ಚು ಯೋಗ ಗುರುಗಳನ್ನು ಸನ್ಮಾನಿಸಿದರು.
       ಯೋಗ ರಾಷ್ಟ್ರೀಯ ಪಟುಗಳಾದ ಮಲ್ಲಿಕರ‍್ಜುನ ಯರಗಲ್ , ಶಿವರಾಜ್, ಕು ಟಟ ಸೃಷ್ಟಿ , ಕು ಟಟ ನಮ್ರತಾ ಇವರು ಯೋಗಾಸನದ ವಿವಿಧ ಭಂಗಿಗಳನ್ನು ಪ್ರರ‍್ಶಿಸಿದರು ,
         ಆರಂಭದಲ್ಲಿ ಸಾಮೂಹಿಕ ಪ್ರರ‍್ಥನೆ ,  ನಂತರ ಕೆ ಕರಿಬಸಪ್ಪ ಸ್ವಾಗತಿಸಿದರು ,  ಜಯಪ್ಪ ಇವರು ಕರ‍್ಯಕ್ರಮ ನಿರೂಪಿಸಿದರು.
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments