ದ್ವೇಷ ರಾಜಕಾರಣವನ್ನು, ತಾರ-ತಮ್ಯದ ರಾಜಕಾರಣವನ್ನು ಸೋಲಿಸಿರುವ ಜನತೆ ತಮ್ಮಲ್ಲಿ ವಿಶ್ವಾಸ ಇಟ್ಟು ಅಧಿಕಾರವನ್ನು ನೀಡಿರುವ ಈ ಸಂದರ್ಭದಲ್ಲಿ ತಮ್ಮನ್ನು ಸಿಪಿಐ [ಎಂ] ಪಕ್ಷ ಹಾಗೂ ಸಮಾನತೆಯ ಹಕ್ಕುಗಳಿಗಾಗಿ ದುಡಿಯುವ ಇನ್ಸಾಪ್ ಸಂಘಟೆಗಳ ಪರವಾಗಿ ಅಭಿನಂದಿಸುತ್ತೆವೆ. ದೇಶದ ಸಂವಿಧಾನವು ನಾಗರೀಕರಿಗೆ ಯಾವುದೆ ತಾರತಮ್ಯವಿಲ್ಲದೆ ಸಮಾನವಾಗಿ ನಡೆಸಿಕೊಳ್ಳುವ ಕರ್ತವ್ಯವನ್ನು ಹೊಂದಿದೆ. ಸರ್ವರಿಗೂ ಸಮಭಾವದಿಂದ ಅವರವರ ಪಾಲನ್ನು ನೀಡಬೇಕಾಗಿದೆ. ಅದರೆ ಹಿಂದಿನ ಬಿಜೆಪಿ ರಾಜ್ಯ ಸರ್ಕಾರವು ಅಲ್ವ ಸಂಖ್ಯಾತರ ಮೇಲೆ ದ್ವೇಷ ರಾಜಕಾರಣ ಮಾಡಿದೆ. ಅಲ್ಪ ಸಂಖ್ಯಾತರ ಜೊತೆಯಲ್ಲಿ ತಾರ-ತಮ್ಯದಿಂದ ನಡೆದುಕೊಂಡಿದೆ. ಇದರಿಂದ ಅಲ್ಪ ಸಂಖ್ಯಾತರಲ್ಲಿ ಭಯ-ಭಿತಿ ಮತ್ತು ಒಂದು ತರನಾದ ಹತಾಶಯದ ಮನಸ್ಥಿತಿ ನಿರ್ಮಾಣವಾಗಿತ್ತು, ಇತ್ತೀಚೆಗೆ ಅಲ್ಪ ಭರವಸೆಯು ಮೂಡಿದೆ. ಕರ್ನಾಟಕ ರಾಜ್ಯದ ಜನ ಸಂಖ್ಯೆಯಲ್ಲಿ ಸರಿ ಸುಮಾರು 14% ರಷ್ಟು ಮುಸ್ಲಿಂ ಅಲ್ಪ ಸಂಖ್ಯಾತರು ಇದ್ದಾರೆ. ಕರ್ನಾಟಕದ ಮುಸ್ಲಿಂರ ಅರ್ಥಿಕ, ಸಾಮಾಜಿಕ, ಔದ್ಯೋಗಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳು ತುಂಬಾ ಶೋಚನಿಯವಾಗಿದೆ ಈ ಬಗ್ಗೆ ಭಾರತ ಸರ್ಕಾರವು ಈ ಹಿಂದೆ ಅಲ್ವಸಂಖ್ಯಾತರ ಸ್ಥಿತಿ-ಗತಿಗಳನ್ನು ಅಧ್ಯಾಯನ ಮಾಡಲು ರೂಪಿಸಿದ ಡಾ.ರಾಜೆಂದ್ರ ಸಿಂಗ್ ಸಾಚರ್, ಹಾಗೂ ನ್ಯಾ. ರಂಗನಾಥ ಮಿಶ್ರ ಸಮಿತಿಗಳ ಶಿಫಾರಸ್ಸುಗಳನ್ನು ನೋಡಿದರೆ ಭಾರತ/ಕರ್ನಾಟಕದ ಅಲ್ಪ ಸಂಖ್ಯಾತ ಸಮುದಾಯಗಳ ಸ್ಥಿತಿ-ಗತಿಗಳ ಚಿತ್ರಣವು ಸ್ವಷ್ಟವಾಗುತ್ತದೆ. ಮಾನವ ಅಭಿವೃದ್ದಿ ಸೂಚ್ಯಂಕದ ಮಾನದಂಡಗಳಲ್ಲಿ ಕೂಡಾ ಹಿಂದೆ ಬಿದ್ದಿರುವುದು ಗೋಚರಿಸುತ್ತದೆ. ಮುಸ್ಲಿಂ ಅಲ್ಪ ಸಂಖ್ಯಾತರ ಉನ್ನತ ಶಿಕ್ಷಣದಲ್ಲಿ ಭಾಗೀದಾರಿಕೆಯು ತುಂಬಾ ಚಿಂತಾಜನಕವಾಗಿದೆ. ಇದಕ್ಕೆ ಹಲವು ಕಾರಣಗಳು ಇವೆ, ಇದರಲ್ಲಿ ಒಂದು ಮುಖ್ಯ ಕಾರಣ ವಿಧ್ಯಾರ್ಥಿಗಳಿಗೆ ಉತ್ತೇಜಿಸಲು ಈ ಹಿಂದೆ ಇದ್ದ ಶೈಕ್ಷಣಿಕ ಉತ್ನತಿಗಾಗಿ ಇರುವ ವಿಧ್ಯಾರ್ಥಿ ವೇತನಗಳನ್ನು ಸಹಾ ಕಡಿತ ಮಾಡಲಾಗಿದೆ. ರಾಜ್ಯದ ಒಟ್ಟಾರೆ ಅಭಿವೃದ್ಧಿಮಾಡಲು ಮುಸ್ಲಿಂ ಸಮುದಾಯವನ್ನು ಹೊರಗಿಟ್ಟು ಸಾಧಿಸಲಾಗದು, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕರ್ನಾಟಕದ 2023-24 ನೇ ಸಾಲಿನ ಆಯವ್ಯಯದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಸಮಗ್ರ ಅಭಿವೃದ್ದಿಗೆ ನ್ಯಾಯೋಚಿತವಾದ ಅನುಧಾನ ಬಿಡುಗಡೆಗೆ ಕ್ರಮ ವಹಿಸುವಂತೆ ತಮ್ಮಲ್ಲಿ ಈ ಮೂಲಕ ಒತ್ತಾಯಿಸುತ್ತೆವೆ. ರಾಜ್ಯದಲ್ಲಿ ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ-ದಬ್ಬಾಳಿಕೆಗಳಲ್ಲಿ ಸರ್ಕಾರ ಸಂವಿಧಾನ ರಕ್ಷಣೆ ಮತ್ತು ಅನ್ಯಾಯಕ್ಕೆ ಒಳಗಾದವರ ರಕ್ಷಣೆಗೆ ನಿಲ್ಲುವಂತೆ ಒತ್ತಾಯಿಸುತ್ತದೆ. ----: ಹಕ್ಕೋತ್ತಾಯಗಳು :---- 1] ದ್ವೇಷ ರಾಜಕಾರಣದ ಭಾಗವಾಗಿ ಅತೀ ಹಿಂದುಳಿದ ಸಮುದಾಯವಾಗಿರುವ ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ–ಉದ್ಯೋಗಗಳಲ್ಲಿ ಸಮಾಜಿಕ ನ್ಯಾಯದ ಭಾಗವಾಗಿ ಇದ್ದ 4% ಮಿಸಲಾತಿಯನ್ನು ಮರು ಸ್ಥಾಪಿಸಲು ಕ್ರಮ ವಹಿಸಬೇಕು. 2] ಅಲ್ವ ಸಂಖ್ಯಾತ ಸಮುದಾಯಗಳು ಅದರಲ್ಲೂ ಮುಸ್ಲಿಂ ಅಲ್ಪ ಸಂಖ್ಯಾತರ ಶೈಕ್ಷಣಿಕ ಅಭಿವೃದ್ದಿಗೆ ವಿಶೇಷ ಗಮನ ನೀಡುವುದು. ಸರ್ಕಾರ ಈ ಸಮುದಾಯದ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸಲು ವಿದ್ಯಾರ್ಥಿ ವೇತನ, ಜಿಲ್ಲಾ/ ತಾಲ್ಲುಕುಗಳಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯವನ್ನು ನೀಡುವುದು, ಉನ್ನತ ಶಿಕ್ಷಣದಲ್ಲಿ ಈ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು. ಕಡಿತ ಮಾಡಿರುವ ಸ್ನಾತಕೋತ್ತರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಬೇಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸಿ ಮತ್ತೆ ಜಾರಿಗೊಳಿಸುವುದು. 3] ಅಲ್ಪ ಸಂಖ್ಯಾತರಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಸ್ವಯಂ ಉದ್ಯೋಗಿಗಳು. ಸಣ್ಣ ವ್ಯಾಪಾರಿಗಳು. ಕುಶಲ ಕಾರ್ಮಿಕರಿಗೆ, ಪಾರಂಪರಿಕ ವೃತ್ತಿಗಳಿಗೆ ವಿಶೇಷ ಯೋಜನೆಗಳನ್ನು ರೂಪಿಸುವುದು. ಕುಶಲ ಕಾರ್ಮಿಕರಿಗೆ ಅನೌಪಚಾರಿಕ ವೃತ್ತಿ ಶಿಕ್ಷಣಗಳ ಅಲ್ಪವಾಧಿ ಕೋರ್ಸ್ ಗಳನ್ನು ಅರಂಭಿಸುವುದು. ಅದರ ಅಧಾರದಲ್ಲಿ ಬ್ಯಾಂಕ್ ಸಾಲಗಳನ್ನು ನೀಡುವ ಯೋಜನೆಯನ್ನು ಅರಂಭಿಸಬೇಕು. 4] ಅವರ ಮಾತೃಬಾಷೆಯಲ್ಲಿ ಶಿಕ್ಷಣಕ್ಕೆ ಅವಕಾಶ ಗಳನ್ನು ನೀಡುವುದಲ್ಲದೆ, ಈ ಪ್ರದೇಶಗಳಲ್ಲಿ ಶಿಕ್ಷಕರ ನೇಮಕ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸುವುದು. 5] ಅಲ್ಪ ಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಮೂಲ ಭೂತ ಸೌಕರ್ಯಗಳು, ಅಸ್ಪತ್ರೆ, ಶಾಲೆ, ರಸ್ತೆ, ಕುಡಿಯುವ ನೀರು, ಒದಗಿಸಲು, ವಸತಿ ಹೀನರಿಗೆ ವಸತಿ ಕಲ್ಪಿಸಲು ಸರ್ಕಾರ ಕ್ರಮ ವಹಿಸುವುದು. 6] ಕೋಮು ದ್ವೇಷ ಹರಡುವ ಶಕ್ತಿಗಳನ್ನು/ವ್ಯಕ್ತಿಗಳನ್ನು ನಿಗ್ರಹಿಸಬೇಕು. ಸಮಾಜದಲ್ಲಿ ಒಡಕು ಉಂಟುಮಾಡುವ ಸಂಘಟನೆಗಳನ್ನು ನಿಯಂತ್ರಿಸುವ–ಕೋಮುದಳ್ಳುರಿಯಲ್ಲಿ ಹಾನಿಗೆ ನೆಲೆ ಕಳೆದು ಕೊಳ್ಳುವ/ ಜೀವ ಹಾನಿ. ಅಸ್ತಿ-ಪಾಸ್ತಿಗಳ ನಷ್ಟಕ್ಕೆ ಒಳಗಾಗಿರುವವರ ಪರಿಹಾರ ನೀಡುವ ಕಾಯಿದೆ ಒಂದನ್ನು ರೂಪಿಸಬೇಕು. 7] ಡಾಕ್ಟರ್ ರಾಜೇಂದ್ರ ಸಿಂಗ್ ಸಾಚಾರ್ ಅವರ ಶಿಪಾರರ್ಸ್ಸುಗಳ ಅನ್ವಯ ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಿಶೇಷ ಯೋಜನೆಯನ್ನು ರಾಜ್ಯದಲ್ಲಿ ರೂಪಿಸಿ ಅದನ್ನು ಜಿಲ್ಲಾ/ತಾಲ್ಲೂಕು/ನಗರಗಳಲ್ಲಿನ ಸ್ಥಳೀಯ ಸಂಸ್ಥೆಗಳ ಮಟ್ಟದ ವರೆವಿಗೂ ಜಾರಿಗೆ ಕ್ರಮ ವಹಿಸಬೇಕು. ಎಂದು ಆನಂದರಾಜು ಕೆ.ಹೆಚ್. ಮೊಹಮ್ಮದ್ ಅಶ್ಫಕ್, ,ಕೆ.ಶ್ರೀನಿವಾಸಮೂರ್ತಿ ಮುಂತಾದವರು ಮನವಿ ಸಲ್ಲಿಸಿದ್ದಾರೆ.
ಅಲ್ಪ ಸಂಖ್ಯಾತರ ಸಾಮಾಜಿಕ ನ್ಯಾಯ,ಮತ್ತು ಸಂವಿಧಾನದ ಅಶಯಗಳಂತೆ ಅನುಧಾನ ನೀಡಲು ಕೋರಿ ಸಲ್ಲಿಸಿದಮನವಿ ಪತ್ರ.
RELATED ARTICLES