ದಾವಣಗೆರೆ :ಶ್ರಾವಣದ ಕುರಿತು ೨೦ ರಿಂದ ೨೫ ಸಾಲುಗಳಲ್ಲಿ ಕವನ ಬರೆದು ಸ್ಪರ್ಧಿಗಳು ಕನ್ನಡದಲ್ಲಿ ಪೂರ್ಣ ಪ್ರಮಾಣದ ವಿಳಾಸ ವ್ಯಾಟ್ಸಪ್ ಸಂಖ್ಯೆ ಇತ್ತೀಚಿನ ಆಕರ್ಷಕ ಭಾವಚಿತ್ರದೊಂದಿಗೆ “ಶ್ರಾವಣ ಶ್ರವಣ” ಕವನ ಸ್ಪರ್ಧೆ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, “ಕನ್ನಡ ಕೃಪಾ” ಕುವೆಂಪು ರಸ್ತೆ, ಕಸ್ತೂರ್ಬಾ ಬಡಾವಣೆ, ದಾವಣಗೆರೆ-೫೭೭೦೦೨ ಈ ವಿಳಾಸಕ್ಕೆ ಅಂಚೆ ಮೂಲಕ ೧೦-೦೮-೨೦೨೩ ರೊಳಗೆ ತಲಪುವಂತೆ ಕಳಿಸಬೇಕು. ಆಂಗ್ಲ ಭಾಷೆಯಲ್ಲಿ ವಿಳಾಸವಿದ್ದರೆ ಕವನ ಸ್ವೀಕರಿಸುವುದಿಲ್ಲ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ವಿಜೇತರಿಗೆ ಸದ್ಯದಲ್ಲೇ “ಕಾವ್ಯ ಕುಂಚ” ಮೂರನೇ ಭಾಗದ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಸ್ಪರ್ಧಿಗಳ ಭಾವಚಿತ್ರದೊಂದಿಗೆ ಪ್ರಮಾಣಪತ್ರ, ಸ್ಮರಣಿಕೆಯೊಂದಿಗೆ ಬಹುಮಾನ ವಿತರಿಸಲಾಗುವುದು ಎಂದು ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್, ತಿಳಿಸಿದ್ದಾರೆ.