ಮೊನ್ನೆ ಒಬ್ಬ ನಿರುದ್ಯೋಗಿ ಯುವಕ ಹೇಳಿದ ನಾನೂ ಕೂಡ ಓದೋದ್ ನಿಲ್ಸಿ ಭಜರಂಗದಳ, ಯುವ ಬ್ರಿಗೇಡ್ ಸೇರ್ತೀನಪ್ಪಾ...ಅಲ್ಲಿದ್ರೂ ಕೋಟಿ ಸತ್ರೂ ಕೋಟಿ..!ಮೊನ್ನೆ ಕೊಲೆಯಾಗಿರೋ ಟಿ.ನರಸೀಪುರದ ವೇಣುಗೋಪಾಲ್ ಎಂಬಾತನಿಗೆ ಸಿಎಂ ನಿಧಿಯಿಂದ 25 ಲಕ್ಷ ,ಸಮಾಜಕಲ್ಯಾಣ ಇಲಾಖೆಯಿಂದ 8.5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆಯಂತೆ..!ಕೊಲೆಯಾಗಿದ್ದು ಪುನೀತ್ ರಾಜ್ ಕುಮಾರ್ ರವರ ಫೋಟೋ ಇಡಬೇಕೋ ಇಡಬಾರದೋ ಎಂಬ ಸಣ್ಣ ಕಾರಣಕ್ಕೆ. ಕೊಂದದ್ದು ತಮ್ಮ ಜೊತೆಗೇ ಇದ್ದ ಸಂಘಿ ಸ್ನೇಹಿತರು. ಇಂತಹ ಕೊಲೆಗಳಿಗೂ 33.5 ಲಕ್ಷ ಪರಿಹಾರ ಕೊಡುವುದೆಂದರೆ ಪ್ರಶ್ನೆ ಹುಟ್ಟೋಲ್ವೆ? ಕೊಟ್ಟದ್ದು ಯಾವ ಕಾರಣಕ್ಕೆ ಮುಖ್ಯಮಂತ್ರಿಗಳ ಪ್ರಭಾವ ಇರೋ ಪಕ್ಕದ ಕ್ಷೇತ್ರ ಅಂತಲೋ? ಸಮಾಜ ಕಲ್ಯಾಣ ಇಲಾಖೆ ಮಂತ್ರಿಗಳ ಲ್ಷೇತ್ರ ಅಂತಲೋ..ದುಡ್ಡು ಸಾಮಾನ್ಯ ಜನರದ್ದು ಸ್ವಾಮಿ. ಇಂಥ ಕೋಮುವಾದಿಗಳನ್ನ ಈ ರೀತಿ ಮುಖ್ಯವಾಹಿನಿಗೆ ತಂದು ಯಾವ ಸಂದೇಶ ಕೊಡಲು ಹೊರಟಿದ್ದೀರಿ? ಒಂದೆಡೆ ೧೫೦೦೦ ಸಂಬಳದ ಕೆಲಸವೂ ಸಿಗ್ತಿಲ್ಲ. ಮತ್ತೊಂದೆಡೆ ಹಿಂದೂ ಕಾರ್ಯಕರ್ತನಾಗಿದ್ದುಕೊಂಡು ಕೊಲೆಯಾದರೂ 33.5 ಲಕ್ಷ ಪರಿಹಾರ. ಯುವಕರಿಗೆ ಏನನ್ನಿಸಬೇಕು? ಇದು ಹುಸಿ ಹಿಂದೂ ಕಾರ್ಯಕರ್ತರ ಸಂಖ್ಯೆ ಹೆಚ್ಚಿಸಲು ಪರೋಕ್ಷವಾಗಿ ಶ್ರಮಿಸಿದಂತೆ ಆಗುವದಿಲ್ವ..? ಈ ಮೃದು ಕೋಮುವಾದವನ್ನು ದಯಮಾಡಿ ಬಿಟ್ಟುಬಿಡಿ.. ಅದೇ ಹಣವನ್ನ ಸಾಲ ತೀರಿಸಲಾರದೆ ಪ್ರಾಣಬಿಟ್ಟ ರೈತನಿಗೆ ಕೊಡಿ, ತಂದೆ ತಾಯಿ ಇಲ್ಲದ ಮಕ್ಕಳ ಶಿಕ್ಷಣಕ್ಕೆ ಕೊಡಿ…(ಪ್ರದೀಪ್ ಮುಮ್ಮಡಿ ರವರ ಬರಹ.)(ಕೃಪೆ: ವೈಚಾರಿಕತೆ ಬೆಳೆಯಲಿ ಮೌಢ್ಯತೆ ಅಳಿಯಲಿ ಫೇಸ್ಬುಕ್)
ಇದು ಹುಸಿ ಹಿಂದೂ ಕಾರ್ಯಕರ್ತರ ಸಂಖ್ಯೆ ಹೆಚ್ಚಿಸಲು ಪರೋಕ್ಷವಾಗಿ ಶ್ರಮಿಸಿದಂತೆ ಆಗುವದಿಲ್ವ..?
RELATED ARTICLES