ಮೂಡಲಗಿ:ಜು,17-ಇಂದು ಇತ್ತೀಚೆಗೆ ಹತ್ಯೆಯಾದ, ಹಿರೇಕೊಡಿಯ ನಂದಿ ಪರ್ವತ ಆಶ್ರಮದ ಪರಮಪೂಜ್ಯ ಆಚಾರ್ಯ 108 ಶ್ರೀ ಕಾಮಕುಮಾರನಂದಿ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿ, ಜೈನ ಮುನಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಜೈನ ಮುಂಖಡರಿಗೆ ಸಾಂತ್ವನ ಹೇಳಿದರು. ಸಮಾಜಕ್ಕೆ ಸದಾ ಒಳಿತನ್ನೇ ಬಯಸುವ ಜೈನ ಮುನಿಗಳ ಹತ್ಯೆ ಖಂಡನೀಯ. ಆ ಸಮುದಾಯದ ಜೊತೆಗೆ ನಾವಿದ್ದೇವೆ, ಶೀಘ್ರವಾಗಿ ನ್ಯಾಯ ದೊರಕಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶ್ರೀ ದುಂಡಪ್ಪ ಬೆಂಡವಾಡೆ ಇನ್ನು ಅನೇಕ ರು ಸೇರಿಂದತೆ ಜೈನ ಸಮುದಾಯ ಮುಖಂಡರು ಉಪಸ್ಥಿತರಿದ್ದರು.