Thursday, August 21, 2025
Homeಸಾರ್ವಜನಿಕ ಧ್ವನಿಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ದ ದೇಶಾದ್ಯಾಂತ ಕಟ್ಟಡ ನಿರ್ಮಾಣ ಕಾರ್ಮಿಕರಿಂದ ಆಗಸ್ಟ್ 17 ರಿಂದ...

ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ದ ದೇಶಾದ್ಯಾಂತ ಕಟ್ಟಡ ನಿರ್ಮಾಣ ಕಾರ್ಮಿಕರಿಂದ ಆಗಸ್ಟ್ 17 ರಿಂದ 24 ರವರೆಗೆ ಪ್ರಚಾರಾಂದೋಲನ ‌

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕಾರ್ಮಿಕ ಕಾನೂನು ತಿದ್ದುಪಡಿ ಕಟ್ಟಡ ನಿರ್ಮಾಣ ವಲಯ ಹಾಗೂ ಕೋಟ್ಯಾಂತರ ಕಟ್ಟಡ ಕಾರ್ಮಿಕರ ಬದುಕಿನ‌ ಮೇಲೆ ಗಂಭೀರ ಪರಿಣಾಮ ಬೀರಲಿದ್ದು ಇದರ ವಿರುದ್ದ ದೇಶಾದ್ಯಾಂತ ಕಟ್ಟಡ ನಿರ್ಮಾಣ ಕಾರ್ಮಿಕರು ಆಗಸ್ಟ್ 17 ರಿಂದ 24 ರವರೆಗೆ ಪ್ರಚಾರಾಂದೋಲನ ‌ನಡೆಸಿ ಆಗಸ್ಟ್ 24 ರಂದು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ CWFI (construction Workers Federation of India) ರಾಷ್ಟ್ರೀಯ ಕಾರ್ಯದರ್ಶಿ ಕೆ.ಮಹಾಂತೇಶ ಹೇಳಿದರು.

ದಾವಣಗೆರೆಯ ಚನ್ನಗಿರಿ ವಿರುಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಜರುಗಿದ ದಾವಣಗೆರೆ ಜಿಲ್ಲಾ ಎರಡನೆ ಕಟ್ಟಡ ಕಾರ್ಮಿಕರ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು; ಸಮ್ಮೇಳನಕ್ಕೆ ಪೂರ್ವದಲ್ಲಿ ಶ್ರಿಜಯದೇವ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಕಾರ್ಮಿಕರು ಮೆರವಣಿಗೆ ನಡೆಸಿ ರೈಲ್ವೆ ‌ನಿಲ್ದಾಣದ‌ ಮುಂಭಾಗದ ಭಗತಸಿಂಗ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಮ್ಮೇಳನ ಸಭಾಂಗಣ ತಲುಪಿದರು.

ಈಗಾಗಲೇ ಬಾಕಿ ವಿದ್ಯಾರ್ಥಿ ವೇತನ, ಮನೆ ನಿರ್ಮಾಣಕ್ಕೆ 5 ಲಕ್ಷ ನಗದು ಸಹಾಯಧನ ನಗದು ರಹಿತ ವೈದ್ಯಕೀಯ ಸೌಲಭ್ಯ ಇತರೆ ಅರ್ಜಿಗಳ ಶೀಘ್ರ ವಿಲೇವಾರಿ ಕಲ್ಯಾಣ ಮಂಡಳಿಯಲ್ಲಿ ಸಂಘಕ್ಕೆ ಪ್ರಾತಿನಿಧ್ಯ ಮತ್ತು ಕಲ್ಯಾಣ‌ಮಂಡಳಿ ಖರೀದಿಗಳಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ, ಪಿಂಚಣಿ ಪಡೆಯಲು ವಯೋಮಿತಿ ಏರಿಕೆ, ಮುಂತಾದ ಬೇಡಿಕೆಗಳಿಗೆ ಒತ್ತಾಯಿಸಿ ಹಲವಾರು ಬಾರಿ ಪ್ರತಿಭಟನೆ ನಡೆಸಲಾಗಿದೆ ಆದರೂ ಹಲವಾರು ಸಮಸ್ಯೆಗಳು ಇತ್ಯರ್ಥವಾಗಿಲ್ಲ ರಾಜ್ಯದ ಕಾರ್ಮಿಕ ಸಚಿವರನ್ನು ಭೇಟಿಯಾಗಿ ಕಟ್ಟಡ ಕಾರ್ಮಿಕ ಸಂಘಗಳ ಸಭೆ ನಡೆಸಲು ಮನವಿ ಸಲ್ಲಿಸಲಾಗಿದ್ದರೂ ಅವರು ಕ್ರಮವಹಿಸದೇ ಕಟ್ಟಡ ಕಾರ್ಮಿಕ ವಿರೋಧಿ‌ನೀತಿಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ ‌ಎಂದು ಆರೋಪಿಸಿ ಈ ಎಲ್ಲ ಸಮಸ್ಯೆಗಳ ಈಡೇರಿಕೆಗಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಎಚ್ ಅರುಣಕುಮಾರ್ ಮಾತನಾಡಿ ದೇಶದಲ್ಲೇ ಅಸಂಘಟಿತ ವಲಯದಲ್ಲಿ‌ ದುಡಿಯುತ್ತಿರುವ ಕೋಟ್ಯಾಂತರ ಕಟ್ಟಡ ಕಾರ್ಮಿಕರಿಗೆ ಜೀವ ಹಾಗೂ ಜೀವನ ಭದ್ರತೆ ನೀಡುವಲ್ಲಿ ಆಳುವ ಸರ್ಕಾರಗಳು ವಿಫಲವಾಗಿವೆ ಹೀಗಾಗಿ ಮಂಡಳಿಯಲ್ಲಿ ಸಾವಿರಾರು ‌ಕೋಟಿ ನಿಧಿ ಇದ್ದರೂ‌ ಅದು‌ ನೈಜ ಕಾರ್ಮಿಕರಿಗೆ ತಲುಪದೇ ಪರದಾಡುವಂತಾಗಿದೆ. ಆದ್ದರಿಂದ ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕು ಹಾಗೂ ಸೌಲಭ್ಯಗಳಿಗಾಗಿ ಹೋರಾಡಬೇಕೆಂದು ಕರೆ ನೀಡಿದರು.

ಸಮ್ಮೇಳನಕ್ಕೆ ಅತಿಥಿಗಳಾಗಿ ಕರ್ನಾಟಕ ಗ್ರಾಮಪಂಚಾಯತ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಬಸವರಾಜ್ ವಿಮಾ ಏಜೆಂಟರ ಸಂಘದ ರಾಜ್ಯ. ಮುಖಂಡರಾದ ಬಿ.ಸಿ. ಶಿವಮೂರ್ತಿ, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ರೇಣುಕಮ್ಮ, ಆಟೋ ಚಾಲಕರ ಸಂಘದ ಮುಖಂಡರಾದ ಶ್ರೀನಿವಾಸ್ ಮೂರ್ತಿ ಶುಭ‌ಕೋರಿ ಮಾತನಾಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕರಾದ ಕೆ.ಎಚ್.ಆನಂದರಾಜು ವಹಿಸಿದ್ದರು. ನೇತ್ರಾವತಿ ಸ್ವಾಗತಿಸಿದರೆ, ಆಲೂರು ಮಂಜುನಾಥ್ ವಂದನಾರ್ಪಣೆ ನೆರವೇರಿಸಿದರು.

ನೂತನ ಜಿಲ್ಲಾ ಸಮಿತಿ ಆಯ್ಕೆ;
ಮಧ್ಯಾನ್ಹ ದ ಬಳಿಕಾ ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜು ಮಂಡಿಸಿದ ವರದಿ ಮೇಲೆ ದಾವಣಗೆರೆ,ಹೊನ್ನಾಳಿ, ಜಗಳೂರು,ಹರಿಹರ,ನ್ಯಾಮತಿ ತಾಲೂಕಿಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಮಾತನಾಡಿ ಕಾರ್ಮಿಕ ಇಲಾಖೆಯಲ್ಲಿ ಸೌಲಭ್ಯಗಳನ್ನು ನೀಡುವಲ್ಲಿ ಆಗುತ್ತಿರುವ ವಿಳಂಬ, ಭ್ರಷ್ಟಾಚಾರ ಇತ್ಯಾದಿ ಸಮಸ್ಯೆಗಳನ್ನು ಹೇಳುತ್ತಾ ಸಂಘಟನೆ ಬಲಪಡಿಸಲು ಹಲವಾರು ಅಭಿಪ್ರಾಯ ವ್ಯಕ್ತಪಡಿಸಿದರು ಬಳಿಕಾ ಜಿಲ್ಲಾ ಮಟ್ಟದ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು; ಕೆ.ಎಚ್. ಆನಂದರಾಜು,
ಪ್ರಧಾನ ಕಾರ್ಯದರ್ಶಿ ಆಲೂರು ಮಂಜುನಾಥ್,
ಖಜಾಂಚಿ ನೇತ್ರಾವತಿ
ಉಪಾಧ್ಯಕ್ಷರು;ಗಜೇಂದ್ರ, ತೀರ್ಥಪ್ಪ, ಕೀರ್ತಿರಾಜ್, ಶಾಂತಾಚಾರ್, ರುದ್ರೇಶ್, ಬಸವರಾಜು ಜಿ.ಎಸ್., ಮೊಹಮ್ಮದ್ ಹಯಾತ್
ಸಹ ಕಾರ್ಯದರ್ಶಿ; ಮುಜೀಬ್, ಇಮ್ರಾನ್, ಲೋಕೇಶ್, ಕಿರಣ್, ಮನ್ಸೂರ್ ಆಲಿ, ಜಬಿಉಲ್ಲಾ.
ಹಾಗೂ 24 ಜನರ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments