ವೀಕ್ಷಕರಿದ್ದಲ್ಲಿಗೆ ವಾಹಿನಿ ಬರೋದು ಹೊಸತೇನಲ್ಲ, ಆದ್ರೆ ಯಾವಾಗಲು ಹೊಸತನಕ್ಕೆ ಹಾತೊರೆಯುತ್ತ ತನ್ನ ವೀಕ್ಷಕರಿಗೆ ಹೊಸ ಬಗೆಯ ಕಾರ್ಯಕ್ರಮಗಳ ಮೂಲಕ ಮನೋರಂಜನೆ ನೀಡುತ್ತ ಬಂದಿರುವ ಜೀ ಕನ್ನಡ ವಾಹಿನಿಯು ಸದಾ ವೀಕ್ಷಕರ ನಾಡಿಮಿಡಿತವನ್ನ ಅರಿತು ಕಾರ್ಯಕ್ರಮವನ್ನ ರೂಪಿಸುತ್ತಾ ಬರುತ್ತಿದೆ.ಇದೀಗ ಆ ನಿಟ್ಟಿನಲ್ಲಿ ತನ್ನ ಜನಪ್ರಿಯ ಧಾರಾವಾಹಿಗಳಾದ ಶ್ರೀರಸ್ತು ಶುಭಮಸ್ತು,ಅಮೃತಧಾರೆ ಮತ್ತು ಪುಟ್ಟಕ್ಕನ ಮಕ್ಕಳು ಸೀರಿಯಲ್ ತಂಡದ ಕಲಾವಿದರ ಜೊತೆ ಬೆಣ್ಣೆನಗರಿ ದಾವಣಗೆರೆಗೆ ಬರಲು ಸಿದ್ದವಾಗಿದೆ.
ಪ್ರತಿ ದಿನ ಸಂಜೆಯಾಗುತ್ತಲೆ ವೀಕ್ಷಕರನ್ನ ಹಿಡಿದಿಟ್ಟುಕೊಳ್ಳುವ ಜೀ ಕನ್ನಡದ ಧಾರವಾಹಿಗಳು,ದಿನಕ್ಕೊಂದು ತಿರುವನ್ನ ಪಡೆದುಕೊಳ್ಳುತ್ತ ತನ್ನ ಕುತೂಹಲವನ್ನ ಹಾಗೆ ಉಳಿಸಿಕೊಂಡು ಬಂದಿರೋದು ವೀಕ್ಷಕರಿಗೆ ಗೊತ್ತಿರುವ ವಿಷಯ.ಪುಟ್ಟಕ್ಕನ ಮಕ್ಕಳನ್ನ ನೋಡಿ ಅದೆಷ್ಟು ಮಹಿಳೆಯರು ಸ್ವಾವಲಂಭಿಗಳಾಗಿ ಜೀವನ ಕಟ್ಟಿಕೊಂಡಿದ್ದಾರೆ,
ಅಮೃತಧಾರೆ ಧಾರವಾಹಿಯನ್ನ ನೋಡುವಾಗಲೆಲ್ಲ ಭೂಮಿ ತರ ಹುಡುಗಿ ನಮ್ಮ ಮಧ್ಯದಲ್ಲೆ ಇದ್ದಾಳೆ ಅನಿಸುತ್ತೆ ಗೌತಮ್ ದಿವಾನ್ ತರ ಅಣ್ಣ ನಮಗೂ ಬೇಕು ಅನಿಸದೆ ಇರೋದಿಲ್ಲ,ಶ್ರೀರಸ್ತು ಶುಭಮಸ್ತು ಧಾರಾವಾಹಿಯ ತುಳಸಿಯ ಮುಗ್ದತೆ ,ಮಾಧವನ ಮೆಚುರಿಟಿ ನೋಡಿ ಇವರಿಬ್ಬರು ಒಳ್ಳೆ ಜೋಡಿಯಾಗ್ತಾರೆ ಅನಿಸೋದು ಸಹಜ.
ಹೀಗೆ ಸಾಲು ಸಾಲು ಹಿಟ್ ಧಾರವಾಹಿಗಳನ್ನ ಕನ್ನಡಿಗರಿಗೆ ಕೊಡುತ್ತಾ ಬಂದಿರುವ ಜೀ ಕನ್ನಡ ವಾಹಿನಿ, ಇದೀಗ ತನ್ನ ಜನಪ್ರಿಯ ಪಾತ್ರಗಳನ್ನ ಜನರಿದ್ದ ಬಳಿಗೆ ಕರೆದೊಯ್ಯುವ ನಿಟ್ಟಿನಲ್ಲಿ ಜೀ ಜಾತ್ರೆಯನ್ನ ಮತ್ತೆ ಶುರುಮಾಡಿದೆ, ಕಳೆದ ವರ್ಷಗಳಲ್ಲಿ ಯಲಬುರ್ಗ,ಕುಕ್ಕನೂರು,
ಕೊಪ್ಪಳ,ಮದ್ದೂರು,ಆನೆಗುಂದಿ ಸೇರಿದಂತೆ ಕರ್ನಾಟಕದ ಮೂಲೆಮೂಲೆಗೆ ಕರುನಾಡು ಮೆಚ್ಚಿದ ಧಾರಾವಾಹಿಗಳಾದ ಗಟ್ಟಿಮೇಳ.ಪುಟ್ಟಕ್ಕನ ಮಕ್ಕಳು ತಂಡದೊಂದಿಗೆ ಭೇಟಿ ನೀಡಿ ಅಲ್ಲಿ ಅವರನ್ನ ನೇರವಾಗಿ ಮನೋರಂಜಿಸೋ ಕೆಲಸ ಮಾಡಿತ್ತು.
ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಮದುವೆ ಹಂತ ತಲುಪಿರುವ ಅಮೃತಧಾರೆ, ಶ್ರೀರಸ್ತು ಶುಭಮಸ್ತು ಹಾಗೆ ಮದುವೆಯ ನಂತರ ದೂರವಾಗಿ ಮತ್ತೆ ಒಂದಾಗಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯ ನಿಮ್ಮ ನೆಚ್ಚಿನ ಕಲಾವಿದರನ್ನ ಒಳಗೊಂಡ ಜೀ ಕುಟುಂಬ “ಜೀ ಜಾತ್ರೆ ಕಲ್ಯಾಣೋತ್ಸವ” ಕಾರ್ಯಕ್ರಮದ ಮುಖಾಂತರ ನಿಮ್ಮನ್ನ ಮನೋರಂಜಿಸೋಕೆ ಅಂತಾನೆ ಬೆಣ್ಣೆನಗರಿಗೆ ಆಗಮಿಸುತ್ತಿದ್ದಾರೆ.
ಮದುವೆ ಅಂದರೆ ಪ್ರತಿ ಮನೆಯಲ್ಲು ಹೇಳಲಾಗದ ಒಂದು ಸಂಭ್ರಮ ಯಾವಾಗಲು ಮನೆಮಾಡೋದು ಸಹಜ,ಮದುವೆ ಮನೆಯ ಓಡಾಟ,ಮದುವೆ ಮನೆಯ ಊಟ,ಮದುವೆ ಮನೆಯ ನೋಟ,ಮದುವೆ ಶಾಸ್ತ್ರ,ಮದುವೆಯ ತಯಾರಿ ಹೀಗೆ ಇವೆಲ್ಲ ನೋಡೋದೆ ಕಣ್ಣಿಗೆ ಒಂದು ಹಬ್ಬ ಇಂತಹ ಮದುವೆ ಹಬ್ಬದ ಸಂಭ್ರಮದಲ್ಲಿ ಮನೋರಂಜನೆಯ ರಸದೂಟ ನಿಮಗಾಗಿ ಕಾದಿದೆ, ಅಷ್ಟೆ ಅಲ್ಲದೆ ನಿಮ್ಮ ಎಲ್ಲಾ ಪ್ರಶ್ನೆಗಳಿಗು ಉತ್ತರ ಕೊಡೋಕೆ ನಿಮ್ಮ ನೆಚ್ಚಿನ ಕಲಾವಿದರು ಹಾಜರಿರುತ್ತಾರೆ ಹಾಗೆ ಜಗಮಗಿಸುವ ವೇದಿಕೆಯಲ್ಲಿ ಭರ್ಜರಿ ಪ್ರದರ್ಶನ ನೀಡುಲು ಕಲಾವಿದರು ತಯಾರಾಗಿದ್ದಾರೆ.
ಈ ಎಲ್ಲಾ ವಿಶೇಷತೆಯನ್ನ ನೀವು ನೋಡಬೇಕು ಅಂದ್ರೆ ಜೀ ಜಾತ್ರೆ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ನಿಮ್ಮ ಪ್ಯಾಮಿಲಿ ಸಮೇತ ಬರಲೇಬೇಕು.ಕಾರ್ಯಕ್ರಮ ಇಂದು ಸಂಜೆ, ಶ್ರೀ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪ,ಹದಡಿ ರಸ್ತೆ,ದಾವಣಗೆರೆಯಲ್ಲಿ ನಡೆಯಲಿದ್ದು ಸಮಯ ಸಂಜೆ
5.30ಕ್ಕೆ,ಸೀಮಿತ ಆಸನದ ವ್ಯವಸ್ಥೆಯಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆ.