ಬಸವನಗೌಡ ಪಾಟೀಲ್ ಯಾತ್ನಾಳ್ ಸಂಪೂರ್ಣ ಆರಾಮ ಇದ್ದಾರೆ , ನಾಡಿನ ಜನತೆ ಆತಂಕ ಪಡುವುದು ಬೇಡ…ಎಂದು ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ವಿಜಯಪುರ ಶಾಸಕರಾದ ಬಸವನಗೌಡ ಪಾಟೀಲ್ ಯಾತ್ನಾಳ್ ಇಂದು ವಿಧಾನಸಭೆ ಅಧಿವೇಶನದಲ್ಲಿ ಹೋರಾಟ ಮಾಡುವಾಗ ದಿಢೀರನೆ ಕುಸಿದು ಬಿದ್ದಿರುವ ಸುದ್ದಿ ತಿಳಿದು ಸಮಾಜ ಬಾಂಧವರು ಹಾಗೂ ಅಭಿಮಾನಿಗಳು ಆತಂಕಪಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣ ಹೈದ್ರಾಬಾದ್ ನಲ್ಲಿ ಇದ್ದ ನಾವುಗಳು , ಬೆಂಗಳೂರು ಪೋಟಿಸ್ ಆಸ್ಪತ್ರೆಯಲ್ಲಿ ಗೌಡರ ಆರೋಗ್ಯ ವಿಚಾರಿಸುತ್ತಿರುವ , ಪಂಚಸೇನಾ ಅಧ್ಯಕ್ಷ dr bs patil ದ್ರಾಕ್ಷಿ ನಿಗಮ ಮಾಜಿ ಅಧ್ಯಕ್ಷ ಎಂ ಎಸ್ ರುದ್ರಗೌಡರು , ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಅಶೋಕ್ ಗೋಪನಾಲ್ ರನ್ನು , ದೂರವಾಣಿ ಮೂಲಕ ಸಂಪರ್ಕಿಸಿದಾಗ , ಅವರುಗಳು ದೇವರ ಅನುಗ್ರಹದಿಂದ ಬಸವನಗೌಡರು ಆರಾಮವಾಗಿ ಇದ್ದಾರೆ ಎಂಬುದುನ್ನು ತಿಳಿಸಿದ್ದಾರೆ
ಆದ್ದರಿಂದ ಸಮಾಜ ಬಾಂಧವರು ಗಾಬರಿಪಡಬೇಕಿಲ್ಲ. ಬೇಗ ಗುಣಮುಖವಾಗಳೆಂದು ಸೃಷ್ಟಿಕರ್ತ ಪರಮಾತ್ಮನಲ್ಲಿ ಪ್ರಾರ್ಥಿಸೋಣ.
(✍️ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ)