ದಾವಣಗೆರೆ: ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಗಳಾದ ವಿನಯ್ ಕುಮಾರ್ ಜಿ ಬಿ ರವರು ಮಾನ್ಯ ಜನಪ್ರಿಯ ಶಾಸಕರಾದ ದೇವೇಂದ್ರಪ್ಪ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆ ಶಾಸಕರೊಟ್ಟಿಗೆ ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದರು.


ನಾನು ಸಹ ಲೋಕಸಭೆಗೆ ಆಕಾಂಕ್ಷಿಯಾಗಿದ್ದೇನೆ ನಾನು ಒಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನನ್ನ ಕೈಲಾದಷ್ಟು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ವರಿಷ್ಠರು ನನ್ನ ಮತ್ತು ನನ್ನ ಸಾಮಾಜಿಕ ಸೇವೆಗಳನ್ನು ಗುರುತಿಸಿ ಟಿಕೇಟ್ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಗೆದ್ದು ಬರುತ್ತೇನೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರು ಮಾತನಾಡಿ ಪಕ್ಷದ ವರಿಷ್ಠರು ನಿಮ್ಮ ಸಾರ್ವಜನಿಕ ಜನ ಸೇವೆಯನ್ನು ಗುರುತಿಸಿ ಟಿಕೇಟ್ ನೀಡಿದರೆ ನಾವು ಮತ್ತು ನಮ್ಮ ಪಕ್ಷದ ಕಾರ್ಯಕರ್ತರು ಹಗಲಿರುಳು ನಿಮ್ಮ ಗೆಲುವಿಗೆ ದುಡಿದು ನಿಮ್ಮನ್ನು ಗೆಲ್ಲಿಸಿ, ದೆಹಲಿಯ ಸಂಸತ್ ಗೆ ನಮ್ಮ ದಾವಣಗೆರೆ ಜಿಲ್ಲೆಯಿಂದ ನಿಮ್ಮನ್ನು ಹರಸಿ ಹಾರೈಸಿ ಕಳಿಸಿಕೊಡುತ್ತೇವೆ ಎಂದರು.


ಹಾಗೂ ಜಗಳೂರಿನ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ಎಲ್ಲರೂ ಸಹಮತದಿಂದ ಸ್ಪಂದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಸಂಶೀರ್ ಅಹಮದ್ ರವರು ಕೆಪಿಸಿಸಿ ಸದಸ್ಯರಾದ ಕಲ್ಲೇಶ್ ರಾಜ್ ಪಟೇಲ್ ರವರು ಮಾಜಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸುರೇಶ್ ಗೌಡ ಅವರು ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು,ತಾಲೂಕು ಪಂಚಾಯತ್ ಸದಸ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು.


