Saturday, December 21, 2024
Homeದೇಶವೀರ ಯೋಧ ನಾಗರಾಜ್ ರವರಿಗೆ ಹುಟ್ಟೂರಿನಲ್ಲಿ ಗೌರವ ಸನ್ಮಾನ

ವೀರ ಯೋಧ ನಾಗರಾಜ್ ರವರಿಗೆ ಹುಟ್ಟೂರಿನಲ್ಲಿ ಗೌರವ ಸನ್ಮಾನ

ದೇಶಸೇವೆ ಮಾಡಲು ಅವಕಾಶ ಸಿಕ್ಕಿದ್ದು ಪೂರ್ವ ಜನ್ಮಪುಣ್ಯ-

ದಾವಣಗೆರೆ ಆ ೧೧
ಈಗೀನ ಟ್ರೆಂಡ್ ಜನರೇಷನ್
ಎಂಜಿನಿಯರ್, ಸಾಫ್ಟ್ ವೇರ್,ಇತರೇ ನೌಕರಿ ಬಯಸಿದರೇ ದೇಶ ಕಾಯೋರು
ಯಾರು? ಯುವಜನತೆ ವೈಯಕ್ತಿಕ ಶಿಸ್ತು ಕಟ್ಟುನಿಟ್ಟಿನ ಜೀವನ ಕ್ರಮ ಅನುಸರಿಸಿ ದೇಶ ಸೇವೆ ಮಾಡಲು ಮುಂದೆ ಬರಬೇಕು ಎಂದು ಸತತ ೨೦ವರ್ಷಗಳ ಕಾಲ ಗಡಿಭದ್ರತಾ ಅದೇ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ ಬಳಿಕ
ಗ್ರಾಮಪಂಚಾಯಿತಿ, ಹಾಗೂ ಗ್ರಾಮಸ್ಥರ ಅದ್ಧೂರಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ನನ್ನ ತಂದೆ ತಾಯಿ ರೈತರು
ಅವರು ವಿಧ್ಯೆ ಕಲಿಯಲಿಲ್ಲ,ನನಗೇ ಕೂಲಿ ನಾಲಿ ಮಾಡಿ ಪದವಿ ಗಳಿಸಿ ಸೇನೆಯಲ್ಲಿ ಸೇವೆ ಮಾಡಬೇಕು
ದೇಶ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ಮಹಾದಾಸೇ ಯಿಂದ ೨೦೦೩ರಲ್ಲಿ ಸೇನೆಗೆ ಆಯ್ಕೆ ಆದ ನಂತರ ಸಿಕಂದರಾಬಾದ್
ಬಿಹಾರ್ ಜಾರ್ಖಂಡ್, ಪಂಜಾಬ್ ಪ್ರಾಂತ್ಯದಲ್ಲಿ
ಜಮ್ಮು ಕಾಶ್ಮೀರ ಅಸ್ಸಾಂ ಮಣಿಪುರದ ಇಂಪಾಲ್, ದೆಹಲಿ, ಹೈದರಾಬಾದ್ ಕರ್ನಾಟಕದ ಬೆಂಗಳೂರು
ಹೀಗೆ ದೇಶದ ಹಲವಾರು ರಾಜ್ಯಗಳಲ್ಲಿ ಉಗ್ರಗಾಮಿ ಗಳ ಹತೋಟಿ, ಗಡಿಯಲ್ಲಿ ವಿಚಿಧ್ರಾಕಾರಿ ಶಕ್ತಿಗಳ ವಿರುದ್ಧ ಬೀದಿಗಿಳಿದು ಯುಧ್ಧಕ್ಕಿಳಿದು ಹೋರಾಟ ಮಾಡುವ ಸಂದರ್ಭದಲ್ಲಿ ನನ್ನ ಜೊತೆ ಇಧ್ಧ ಹಲವು ಯೋಧರು ಗುಂಡೇಟು ಬಿದ್ದಾಗ ಎದೆ ಗುಂದದೇ ವೈರಿಗಳ ವಿರುದ್ಧ ಕಾದಾಡಿ ನಮ್ಮವರನ್ನು ಅವರು ದೇಹ ಹೊತ್ತು ಮುಖ್ಯ ಸೇನಾ ಕ್ಯಾಂಪ್ ಗೆ ಬಂದು ಘಟನೆ ಸನ್ನಿವೇಶ ಗಳನ್ನು ನಾಗರಾಜ್ ವಿವರಿಸಿದಾಗ ನೆರೆಧ ಗ್ರಾಮದ ಹಿರಿಯರು ಯುವಜನರು ಹೆಂಗಳೆಯರ ಕಣ್ಣಲ್ಲಿ ಅಚ್ಚರಿ ಮೆಚ್ಚುಗೆ ಯ ಆನಂದಭಾಷ್ಪ
ಕಂಡು ಬಂತು.


ಗ್ರಾಮಕ್ಕೆ ಆಗಮಿಸಿದ ಯೋಧ ನಾಗರಾಜ್ ರವರಿಗೆ
ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಶಿಲ್ಪಾ ಶಿವಮೂರ್ತಿ ಉಪಾಧ್ಯಕ್ಷೆ ಪಾರ್ವತಮ್ಮ ಅಡಿವೆಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅಶ್ವಿನಿ, ಕಾರ್ಯದರ್ಶಿ ಸುರೇಶ್
ಸದಸ್ಯ ರಾದ ಮೂರ್ತೆಪ್ಪ, ಅಭಿಷೇಕ್, ಓಬಳೇಶ್, ಉಮೇಶ್, ಶ್ರೀಮತಿ ನಾಗಮ್ಮ ನಿಜಲಿಂಗಪ್ಪ ಮಾಜಿ ಅಧ್ಯಕ್ಷ ಶಿವಮೂರ್ತಿ,ಎಸ್ ಎಸ್ ರವಿಕುಮಾರ್ , ಪೂಜಾರ ಆನಂದ್,ಚೌಟಗಿ ಹನುಮಂತಪ್ಪ,ಭೀಮಪ್ಪ, ರೇವಣ್ಣ,ಪರಸಪ್ಪ ಗ್ರಂಥಪಾಲಕ ಮಂಜಪ್ಪ, ಪತ್ರಕರ್ತ ಸೊಸೈಟಿ ಅಧ್ಯಕ್ಷ ಪುರಂದರ್ ಲೋಕಿಕೆರೆ,ಪಿ.ಓ.ಅಂಜಿನಪ್ಪ
ಕುಬೇರಪ್ಪ,ಕೆ ಎನ್ ತಿಪ್ಪೇಶ್, ಕೆ.ಎಸ್ ಮಂಜಪ್ಪ, ಸೇರಿದಂತೆ ನೂರಾರು ಗ್ರಾಮಸ್ಥರು ಸ್ತ್ರೀಶಕ್ತಿ ಸಂಘಗಳ ಸದಸ್ಯರು ಶಾಲಾ ಕಾಲೇಜುಗಳ ಮಕ್ಕಳು ಯೋಧ ನಾಗರಾಜ್ ರವರ ಕುಟುಂಬ ಬಂಧುಗಳು ಪಾಲ್ಗೊಂಡಿದ್ದರು
ಅದ್ಧೂರಿ ಸ್ವಾಗತ ನಂತರ
ಪ್ರಮುಖ ವೃತ್ತಗಳಲ್ಲಿ, ಮೆರವಣಿಗೆ ಮೂಲಕ ಅವರನ್ನು
ಐತಿಹಾಸಿಕ ಈಶ್ವರ ದೇವಾಲಯ ಮುಂಬಾಗದಲ್ಲಿ
ಅವರಣದಲ್ಲಿ ಗೌರವಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments