Saturday, December 21, 2024
Homeಆಯ್ಕೆ/ನೇಮಕದ.ಸಂ.ಸ. ಭೀಮವಾದದ ನೂತನ ರಾಜ್ಯ ಸಂಚಾಲಕರಾಗಿ ಎಂ.ಸಿ.ನಾರಾಯಣ್ ಆಯ್ಕೆ

ದ.ಸಂ.ಸ. ಭೀಮವಾದದ ನೂತನ ರಾಜ್ಯ ಸಂಚಾಲಕರಾಗಿ ಎಂ.ಸಿ.ನಾರಾಯಣ್ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ), ಭೀಮವಾದ, ಸಂಘಟನೆ ವತಿಯಿಂದ, ದಿನಾಂಕ;೯-೮-೨೩ ರ ಬುಧವಾರದಂದು, ಕುಂದಾನಗರಿ ಬೆಳಗಾವಿಯ ಬುದ್ದವಿಹಾರದಲ್ಲಿ ರಾಜ್ಯ ಮತ್ತು ಜಿಲ್ಲಾ ಹಂತದ ಪದಾದಿಕಾರಿಗಳ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಲಾಗಿತ್ತು. ರಾಜ್ಯ ಸಮಿತಿಯ ನಿಕಟಪೂರ್ವ ಸಂಚಾಲಕರಾದ ಮತ್ತು ದ.ಸಂ.ಸ. ಭೀಮವಾದದ ಸ್ಥಾಪಕರಾದ ಆಯುಷ್ಮಾನ್ ಪರಶುರಾಮ್ ನೀಲನಾಯಕ್ ರವರು ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ:ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪುಷ್ಪ ನಮನ ಸಲ್ಲಿಸುವ ಮೂಲಕ ಕರ‍್ಯಕ್ರಮಕ್ಕೆ ಚಾಲನೆ ನೀಡಲಾಯಿತು..  ಕಳೆದ ಮೂರು ವರ್ಷಗಳ ಅವಧಿಯನ್ನು ಸಂಪೂರ್ಣವಾಗಿ ಪೂರೈಸಿ, ಸಂಘಟನೆಯ ಮುಂಚೂಣಿಯಲ್ಲಿ ಯಶಸ್ವಿಯಾಗಿ, ಕರ‍್ಯನಿರ್ವಹಿಸಿ, ಚಳುವಳಿಯಲ್ಲಿ ತೊಡಗಿಕೊಂಡಿದ್ದ, ಪರಶುರಾಮ್ ನೀಲನಾಯಕ್ ರವರನ್ನು ಅಭಿನಂದಿಸಿದ ಸಂಘಟನೆಯ ರಾಜ್ಯ ಹಾಗೂ ಜಿಲ್ಲಾ ಹಂತದ ಎಲ್ಲ ಪದಾದಿಕಾರಿಗಳು ಅವರ ನಾಯಕತ್ವದ ವೈಖರಿಯನ್ನು ಮೈಗೂಡಿಸಿಕೊಂಡು ಚಳುವಳಿಯನ್ನು ಮುನ್ನಡೆಸಬೇಕಾಗಿದೆ.. ಈ ಸಂದರ್ಭದಲ್ಲಿ ಮಾತನಾಡಿದ ಪರಶುರಾಮ್ ನೀಲನಾಯಕ್ ರವರು, ದ.ಸಂ.ಸ. ಸಂಘಟನೆಯ ಹೋರಾಟಕ್ಕೆ ಹಲವಾರು ಕರ‍್ಯಕರ್ತರು ಬೆನ್ನುಲುಬಾಗಿ ನಿಂತು ದುಡಿದಿದ್ದಾರೆ. ಅದಕ್ಕೆ ನಾನೇ ನಾಯಕ, ನನ್ನಿಂದಲೇ ಸಂಘಟನೆ ಎಂಬುದು ಅವರ ವೈಯಕ್ತಿಕ ಬಲಹೀನತೆಯನ್ನೇ ಪ್ರಶ್ನಿಸುವಂತಿದೆ. ಪ್ರಸ್ತುತವಾಗಿ ಚಳುವಳಿಯ ಸಂಘಟನೆಗಳಿಗೆ ಒಬ್ಬರೇ ನಾಯಕರರಾಗದೇ, ಸಂವಿಧಾನದ ಬದ್ದವಾಗಿ, ನಾಯಕತ್ವ ಹಂಚಿಕೆಯಾಗಬೇಕು. ಆ ಮೂಲಕ ಪ್ರಜಾಪ್ರಭುತ್ವದ ಹಾದಿಯಲ್ಲಿ ಚಳುವಳಿ ಸಾಗಬೇಕಿದೆ. ನಾವು ಯಾರ ಅಡಿಯಾಗದೇ, ಬಾಬಾ ಸಾಹೇಬರ ಮಾರ್ಗದಲ್ಲಿ  ಮುನ್ನಡೆಯೋಣ ಎಂದು ಕರೆ ನೀಡಿದರು. ದ.ಸಂಸ. ಭೀಮವಾದದ ಪದಾದಿಕಾರಿಗಳ ಆಯ್ಕೆ: ದ.ಸಂಸ. ಭೀಮವಾದದ ಮುಂದಿನ ಮೂರು ವರ್ಷಗಳವರೆಗೆ ಬೆಂಗಳೂರಿನ ದ.ಸಂ.ಸ. ಚಳುವಳಿಯಲ್ಲಿ ಸುಮಾರು ೨೫ ವರ್ಷಗಳಿಂದ ದುಡಿದ ಅನುಭವ ಇರುವ ಆಯುಷ್ಮಾನ್ ಎಂ.ಸಿ.ನಾರಾಯಣ್ ರವರನ್ನು ರಾಜ್ಯ ಸಂಚಾಲಕರನ್ನಾಗಿ ಎಲ್ಲ ರಾಜ್ಯ ಹಾಗೂ ಜಿಲ್ಲಾ ಸಮಿತಿಯ ಸರ್ವ ಸದಸ್ಯರ ಅಭಿಪ್ರಾಯದ ಮೇರೆಗೆ ಸಭೆಯಲ್ಲಿ ಒಕ್ಕೊರಲಿನಿಂದ ಆಯ್ಕೆ ಮಾಡಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ, ಎಂ.ಸಿ.ನಾರಾಯಣ್ ರವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಮ್ಮ ಭೀಮವಾದ ಸಂಘಟನೆಯ ಸಿದ್ದಾಂತಗಳನ್ನು ಒಪ್ಪಿ, ಡಾ: ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಚಿಂತನೆಯ ಮಾರ್ಗದಲ್ಲಿ ಸಂಘಟಿಸುವ ಶೋಷಿತ ಸಮುದಾಯದ ದನಿಯಾಗಿ ಕರ‍್ಯನಿರ್ವಹಿಸುವ ಎಲ್ಲರಿಗೂ ಈ ಸಂಘಟನೆಯಲ್ಲಿ ಮುಕ್ತ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಕರ‍್ಯನಿರ್ವಹಿಸುವ ಮೂಲಕ ಸಂಘಟನೆಯನ್ನು ಬಲಗೊಳಿಸೋಣ. ರಾಜ್ಯದ, ದೇಶದ ಯಾವುದೇ ಪ್ರದೇಶದಲ್ಲಿ ಶೊಷಿತರ ದನಿಯಾಗಿ ಕರ‍್ಯ ನಿರ್ವಹಿಸಲು ಸನ್ನದ್ದರಾಗೋಣ. ಮತ್ತು ಯಾವುದೇ ಸಂದರ್ಭದಲ್ಲಿ ನಿಮ್ಮೊಡನೆ ನಾನಿರುತ್ತೇನೆ. ಸಂಘಟನೆಗೆ ಶಕ್ತಿ ತುಂಬಲು ನಾವೆಲ್ಲರೂ ಒಟ್ಟಾಗಿ ಕರ‍್ಯಪ್ರವೃತ್ತರಾಗೋಣ. ಎಂದರು. ರಾಜ್ಯ ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕಿಯರನ್ನಾಗಿ ಶ್ರೀಮತಿ ಸುಧಾರಾಣಿ, ಸವಿತಾ ಅಸೂದೆ, ಹಾಗೂ ರಾಜ್ಯ ಮಹಿಳಾ ಒಕ್ಕೂಟದ ಸದಸ್ಯರನ್ನಾಗಿ ಪ್ರಿಯದರ್ಶಿನಿ ರವರನ್ನು ನೇಮಿಸಲಾಯಿತು.  ರಾಜ್ಯ ಸಮಿತಿಯ ಸಂಘಟನಾ ಸಂಚಾಲಕರುಗಳನ್ನಾಗಿ, ಸಂಜೀವ್ ಕಾಂಬ್ಳೆ, ನೌಕರರ ಒಕ್ಕೂಟದ ಡಿ.ಸಿದ್ದರಾಜು, ಮತ್ತು ಬಿ.ಎನ್ ವೆಂಕಟೇಶ್, ಯಲ್ಲಪ್ಪ ಹಳೇಮನಿ, ಡಿ.ನಾರಾಯಣ್, ಎಂ.ಚAದ್ರಶೇಖರ್, ಶ್ಯಾಮ್ ಕಾಳೆ, ಓಂಕಾರಪ್ಪ ಕಪ್ಪಗಲ್ಲು, ರವರು, ಖಜಾಂಚಿ ಯನ್ನಾಗಿ ಕೆ.ನಾಗರಾಜು ರವರನ್ನು, ಆಯ್ಕೆ ಮಾಡಲಾಯಿತು. ರಾಜ್ಯ ಸಮಿತಿಯ ಸದಸ್ಯರನ್ನಾಗಿ, ಕೆ.ಬೈರಪ್ಪ, ಹೆಚ್.ಮಂಜುನಾಥ್, ಸಿದ್ದಾರ್ಥ ಆರ್ ಸಿಂಘೆ, ಪಡಿಯಪ್ಪ ಕಳ್ಳೀಮನಿ, ಚಿದಾನಂದ ತಳಕೇರಿ, ಕೆ.ಕುಮಾರ್, ಜಯಶೀಲನ್, ಕೆಂಪಣ್ಣ ಶಿರಹಟ್ಟಿ ರವರು ನೂತನವಾಗಿ ನೇಮಕಗೊಂಡರು.  ಬೆಳಗಾವಿ ವಿಭಾಗೀಯ ಸಂಚಾಲಕರನ್ನಾಗಿ, ಕಲ್ಲಪ್ಪ ನಾಗಪ್ಪ ಸಂಚಾಲಕರನ್ನಾಗಿ ಯಮನಪ್ಪ ಗುಣಕಿ ರವರನ್ನು ನೇಮಿಸಲಾಯಿತು.  ಚನ್ನವರ, ಬಿಜಾಪುರ ವಿಭಾಗಕ್ಕೆ ರಾಜ್ಯ ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕಿಯರನ್ನಾಗಿ ಶ್ರೀಮತಿ ಸುಧಾರಾಣಿ, ಸವಿತಾ ಅಸೂದೆ, ಹಾಗೂ ರಾಜ್ಯ ಮಹಿಳಾ ಒಕ್ಕೂಟದ ಸದಸ್ಯರನ್ನಾಗಿ ಪ್ರಿಯದರ್ಶಿನಿ ರವರನ್ನು ನೇಮಿಸಲಾಯಿತು.  ರಾಜ್ಯ ಸಮಿತಿಯ ನೂತನ ಪದಾದಿಕಾರಿಗಳ ಪದಗ್ರಹಣ ಸಂದರ್ಭದ ಈ ಸಭೆಯಲ್ಲಿ ದ.ಸಂ.ಸ. ಪದಾದಿಕಾರಿಳಾದ ಸಂಜೀವ್ ಕಾಂಬ್ಳೆ, ನೌಕರರ ಒಕ್ಕೂಟದ ಡಿ.ಸಿದ್ದರಾಜು, ಮತ್ತು ಬಿ.ಎನ್ ವೆಂಕಟೇಶ್, ಯಲ್ಲಪ್ಪ ಹಳೇಮನಿ, ಡಿ.ನಾರಾಯಣ್, ಎಂ.ಚAದ್ರಶೇಖರ್, ಶ್ಯಾಮ್ ಕಾಳೆ, ಓಂಕಾರಪ್ಪ ಕಪ್ಪಗಲ್ಲು, ಕೆ.ನಾಗರಾಜು, ಕೆ.ಬೈರಪ್ಪ, ಹೆಚ್.ಮಂಜುನಾಥ್, ಸಿದ್ದಾರ್ಥ ಆರ್ ಸಿಂಘೆ, ಪಡಿಯಪ್ಪ ಕಳ್ಳೀಮನಿ, ಚಿದಾನಂದ ತಳಕೇರಿ, ಕೆ.ಕುಮಾರ್, ಜಯಶೀಲನ್, ಕೆಂಪಣ್ಣ ಶಿರಹಟ್ಟಿ, ಕಲ್ಲಪ್ಪ ನಾಗಪ್ಪ ಚನ್ನವರ, ಯಮನಪ್ಪ ಗುಣಕಿ, ಶ್ರೀಮತಿ ಸುಧಾರಾಣಿ, ಸವಿತಾ ಅಸೂದೆ, ಪ್ರಿಯದರ್ಶಿನಿ, ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳ ಪದಾದಿಕಾರಿಗಳು ಭಾಗವಹಿಸಿದ್ದರು.
ಅಭಿನಂದನೆಗಳನ್ನು ಸಲ್ಲಿಸಿರುವವರು. ರಾಮನಗರ ಜಿಲ್ಲಾ ಸಂಚಾಲಕರಾದ ಹೊಂ ಬಯ್ಯನ ದೊಡ್ಡಿ  ಶಿವಶಂಕರ್,ಕ್ಯೆಲಂಚ ಸಿದ್ದರಾಜು, ಕೃಷ್ಣಪ್ಪ, ಅನಿಲ್, ಸಿದ್ದರಾಜು, ಸುನಿಲ್ ಚಾಮರಾಜನಗರ ಜಿಲ್ಲಾ  ಸಂಚಾಲಕರಾದ ಪಿ. ಜಯರಾಮ್, ಕೊಳ್ಳೇಗಾಲದ ಅಂಬೇಡ್ಕರ್ ಅನುಯಾಯಿ ಗಳಾದ ನಾಗೇಂದ್ರ, ರಾಜು ಮೌರ್ಯ ಹಾಸನ ಜಿಲ್ಲೆಯ ಶೇಖರ್, ಜಯರಾಜ್, ಮೈಸೂರು ಜಿಲ್ಲೆಯ ಮಹ ದೇವ್, ಜಯಶಂಕರ್, ಗಂಗಾಧರಪ್ಪ, ಮಧು, ಲೋಕೇಶ್, ಶ್ರೀನಿವಾಸ್, ತುಮಕೂರು ಜಿಲ್ಲೆಯ  ಧರ್ಮರಾಜ್, ರಂಗನಾಥ್,ಚಿಕ್ಕಮಗಳೂರು ಜಿಲ್ಲೆಯ ದರ್ಶನ್, ರಾಮಾಂ ಜಿನಪ್ಪ ಮುಂತಾದವರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments