ಕೊಲ್ಹಾರ: ಅ.12- ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ನಾಗರದಿನ್ನಿ ಗ್ರಾಮದ ಶ್ರೀ ಸದ್ಗುರು ಸದಾನಂದ ಶಿವಯೋಗಾಶ್ರಮದ ಪ.ಪೂ ತಫೋನಿಷ್ಠ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಧಿಕ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಅಂಜನಾದ್ರಿ ಬೆಟ್ಟ ಹನುಮನಹಳ್ಳಿಯ ತುಂಗಭದ್ರ ನದಿಯ ತೀರದ ಋಷಿ ಪರ್ವತ ಗುಹೆಯಲ್ಲಿ ಮೌನ ಅನುಷ್ಠಾನ ಕೈಗೊಂಡಿದ್ದರು. 18-07-2023ರಿಂದ ಪ್ರಾರಂಭಗೊಂಡು 15-08-2023ರಂದು ಮಂಗಳವಾರ ಮುಕ್ತಾಯಗೊಳ್ಳಲಿದೆ ಅಂಜನಾದ್ರಿ ಬೆಟ್ಟದ ಹನುಮನಹಳ್ಳಿಗೆ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಭಜನಾ ಮತ್ತು ಅನ್ನದಾಸೋಹ ಕಾರ್ಯಕ್ರಮ ನೆರವೇರಲಿದೆ ಎಂದು ನಾಗರದಿನ್ನಿ ಗ್ರಾಮದ ದೈವ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದರು.
ವರದಿ :ಕಾಂತು ಹಡಪದ