ದಾವಣಗೆರೆ: ನಗರದ ಬಸವರಾಜಪೇಟೆ ನಿವಾಸಿ ಹಾಗೂ ದಾವಣಗೆರೆ ಟೈಮ್ಸ್ ಸಂಸ್ಥಾಪಕ ಸಂಪಾದಕರಾದ ದಿ.ಜೆ.ಬಿ.ಶಿವಲಿಂಗಪ್ಪನವರ ದ್ವಿತೀಯ ಪುತ್ರ ಜೆ.ಎಸ್.ಪ್ರಶಾಂತ್ (42) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಸಹೋದರ ದಾವಣಗೆರೆ ಟೈಮ್ಸ್ ಸಂಪಾದಕ ಜೆ.ಎಸ್.ವೀರೇಶ್, ಇಬ್ಬರು ಸಹೋದರಿಯರು, ಮಾವನವರಾದ ಇಂದಿನಸುದ್ದಿ ಸಂಪಾದಕರಾದ ವೀರಪ್ಪ ಭಾವಿ, ಅಳಿಯಂದಿರು
ಹಾಗೂ ಬಂಧು ಮಿತ್ರರು ಇದ್ದಾರೆ. ಕೊಂಡಜ್ಜಿ ರಸ್ತೆಯ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನ ಎದುರಿರುವ ಸಹೋದರ ಜೆ.ಎಸ್.ವೀರೇಶ್ ನಿವಾಸದಲ್ಲಿ ಮೃತರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆಇರಿಸಿದ್ದು, ಆ.14ರಂದು ಬೆಳಗ್ಗೆ 10 ಗಂಟೆಗೆ ಹಿಂದೂ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ.ಎಂದು ಕುಟುಂಬಸ್ತರು ತಿಳಿದದ್ದಾರೆ.