ದಾವಣಗೆರೆ ಹಳೇ ಪೇಟೆ ಯ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸಡಗರ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು, ಧ್ವಜಾರೋಹಣ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕಣ್ಣ ಮಾಗೋಡ್ರ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಬೀದಿಗಿಳಿದು, ಭೂಗತರಾಗಿ ಹೋರಾಟ ಮಾಡಿದ್ದಾರೆ, ಸಾವಿರಾರು ಜನರು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿ ಹುತಾತ್ಮರಾಗಿದ್ದಾರೆ, ಸಾವಿರಾರು ಜನ ಸ್ವಾತಂತ್ರ್ಯ ಯೋದರು ಜೈಲು ಸೇರಿ ಕಠಿಣ ಶಿಕ್ಷೆಗೆ ಒಳಗಾಗಿದ್ದಾರೆ, ಇಂತಹ ತ್ಯಾಗ, ಬಲಿದಾನಗಳಿಂದ ಲಭಿಸಿದ ಸ್ವಾತಂತ್ರ್ಯವನ್ನು , ದೇಶವನ್ನು ರಕ್ಷಿಸಲು ಕಟಿಬದ್ಧರಾಗಿ ಸದಾ ಸಿದ್ದರಾಗಿರಬೇಕು ಎಂದು ಕರೆ ನೀಡಿದರು. ದಾವಣಗೆರೆ ಜಿಲ್ಲಾ ಶಾಲಾಭಿವೃದ್ದಿ ಮತ್ತು ಉಸ್ತುವಾರಿ ಸಮಿತಿಗಳ ಒಕ್ಕೂಟದ(ಎಸ್.ಡಿ.ಎಂ.ಸಿ) ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ ದಾಸರ್ ಮಾತನಾಡಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಪಡೆದರೂ ಇಂದು ನಮ್ಮನ್ನು ಆಳುವ ಸರ್ಕಾರಗಳು ಬಂಡವಾಳ ಶಾಹಿಗಳ ಕಪಿ ಮುಷ್ಟಿಯಲ್ಲಿ ಸಿಲುಕಿ ದೇಶಕ್ಕಾಗಿ ದುಡಿಯುವ ರೈತರು, ಕಾರ್ಮಿಕರು, ಬಡವರು, ದುಡಿಯುವ ವರ್ಗದ ಹಿತವನ್ನು ಬಯಸದೆ ಸಂಕಷ್ಟಗಳಿಗೆ ಗುರಿ ಮಾಡುತ್ತಿವೆ, ಈ ನಿಟ್ಟಿನಲ್ಲಿ ಬಂಡವಾಳ ಶಾಹಿಗಳ ಅನ್ಯಾಯದ ವಿರುದ್ಧ ಮತ್ತು ಸರ್ಕಾರಿ ಸ್ವಾಧೀನದ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವ ಸರ್ಕಾರದ ಜನವಿರೋದಿ ನೀತಿಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಮತ್ತು ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಂದ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ, ದಾರ್ಶನಿಕ ವೇಷಭೂಷಣ ಧರಿಸಿ ಆಕರ್ಷಣೆ ಮಾಡಿದರು. ಶಾಲೆಯ ವಿವಿಧ ತರಬೇತಿಗಳ ಮಕ್ಕಳು ದೇಶಭಕ್ತಿಯ ಹಾಡುಗಳ ಅಭಿನಯ ನೃತ್ಯಗಳನ್ನು ಮಾಡಿದರು ಮತ್ತು ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಭಾಷಣ ಮಾತನಾಡಿದರು. ಈ ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕಣ್ಣ ಮಾಗೋಡ್ರ, ದಾವಣಗೆರೆ ಜಿಲ್ಲಾ ಶಾಲಾಭಿವೃದ್ದಿ ಮತ್ತು ಉಸ್ತುವಾರಿ ಸಮಿತಿಗಳ ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿಯಾದ ರಮೇಶ್ ಸಿ ದಾಸರ್, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಕೋಡಬಾಳು ಚನ್ನಬಸಪ್ಪ, ಶಾಲೆಯ ಶಿಕ್ಷಕಿಯರಾದ ನಮಿತಾ ಎಂ.ಎನ್,(ಇಂಗ್ಲಿಷ್ ಶಿಕ್ಷಕಿ) ಆರ್.ಸಿ.ಅನಸೂಯಮ್ಮ, ವಿಜಯಕುಮಾರಿ, ಜಯಶ್ರೀ, ದೈಹಿಕ ಶಿಕ್ಷಕಿ ಸುಜಾತ, ಶಾಲೆಯ ಅಡುಗೆ ಸಿಬ್ಬಂದಿ, ಪೋಷಕರು ಇದ್ದರು. ಆರಂಭದಲ್ಲಿ ಕೋಡಬಾಳು ಚನ್ನಬಸಪ್ಪ ಶಾಲೆಯ ಧ್ವಜಾರೋಹಣ ನೆರವೇರಿಸಿದರು, ಶಿಕ್ಷಕಿ ವಿಜಯಕುಮಾರಿ ಪ್ರಾರ್ಥನೆ ಮಾಡಿದರು, ಶಿಕ್ಷಕಿ ಆರ್.ಸಿ.ಅನಸೂಯಮ್ಮ ಕಾರ್ಯಕ್ರಮದ ನಿರೂಪಣೆ ಮಾಡಿದರು ಕೊನೆಯಲ್ಲಿ ಇಂಗ್ಲಿಷ್ ಶಿಕ್ಷಕಿ ನಮಿತಾ ಎಂ.ಎನ್ ವಂದನಾರ್ಪಣೆ ಸಲ್ಲಿಸಿದರು.ಎಂದು ದಾವಣಗೆರೆ ಜಿಲ್ಲಾ ಎಸ್.ಡಿ.ಎಂ.ಸಿ. ಸಮಿತಿಗಳ ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ,ರಮೇಶ್ ಸಿ ದಾಸರ್, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.