ಮೂಡಲಗಿ:ಆ, 15-ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ 2000 -01 ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಶಾಲೆಗೆ ಟ್ರೇಝರಿ ಕಾಣಿಕೆಯಾಗಿ ನೀಡಿದ್ದಾರೆ ಎಂದು ಶಾಲೆಯ ಪ್ರಧಾನ ಗುರುಗಳಾದ ಬಿ.ಬಿ.ಸಸಾಲಟ್ಟಿ ಹೇಳಿದ್ದಾರೆ. ಈರಯ್ಯ ಹಿರೇಮಠ. ಲಕ್ಷಣ ಪಾಟೀಲ. ಗೈಬು ಫೀರಜಾದೆ. ಲಕ್ಷಣ ಯಡ್ರಾಂವಿ. ಬಸವರಾಜ ಬೆಳಕೂಡ . ಮ್ಯಾಗಡೆ ಸಿದ್ಧ ಮಲ್ಲ ಗಡಸನವರ ಈ ಎಲ್ಲ ವಿದ್ಯಾರ್ಥಿಗಳು (ಗೆಳೆಯರ ಬಳಗ) ತಾವು ಕಲಿತ ಶಾಲೆಗೆ 77 ನೆಯ ಸ್ವಾತಂತ್ರ್ಯದ ಸವಿ ನೆನಪಿಗಾಗಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಾಗನೂರಗೆ ಟ್ರೇಝರಿ ಉಡುಗೊರೆ ನೀಡಿದ್ದಾರೆ. ಹಿಂತ ವಿದ್ಯಾರ್ಥಿಗಳಿಗೆ ನನ್ನ ಅಭಿನಂದನೆಗಳು.ತಾವು ಕಲಿತ ಶಾಲೆಗೆ ತಮಗೆ ಸಾಧ್ಯವಾದಷ್ಟು ಕಾಣಿಕೆ ಕೊಟ್ಟಿದ್ದಾರೆ.ಈ ಶಾಲೆಯಲ್ಲಿ ಕಲಿತವರು ಉನ್ನತ ಸ್ಥಾನದಲ್ಲಿದ್ದಾರೆ/ಎಲ್ಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಅದು ಶಿಕ್ಷಕರಿಗೆ ಒಂದು ಹೆಮ್ಮೆ.ಹೆಚ್ಚಾಗಿ ಬಡ ಮಕ್ಕಳು ಓದುವ ಸರ್ಕಾರಿ ಶಾಲೆಗೆ ಒಳ್ಳೆಯ ಸ್ಥಿತಿವಂತರು ಶಾಲೆಗೆ ಪ್ರೋತ್ಸಾಹ ನೀಡಿದರೆ ಉತ್ತೇಜನ ಕೊಟ್ಟಂತೆ ಎಂದು ಪ್ರಧಾನ ಗುರುಗಳಾದ ಬಿ.ಬಿ. ಸಸಾಲಟ್ಟಿ ಮಾತನಾಡಿದರು.