ಅಕ್ಕನೆಂಬ ಅಮ್ಮ…, ತಂಗಿಎಂಬ ಕಂದ… ನನ್ನೆಲ್ಲಾ ಅಕ್ಕ – ತಂಗಿಯರಿಗೆ ರಕ್ಷಾ ಬಂಧನದ ಶುಭಾಶಯಗಳು. ಅಕ್ಕ ಎನ್ನುವ ಪದವೇ ಹಾಗೇ, ಅಕ್ಕನನ್ನು ಪಡೆದಿರುವ
ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದು ಪ್ರಮುಖ ಸ್ಥಾನ ಪಡೆದಿದೆ. ಅಕ್ಕ ಎಂಬ ಎರಡಕ್ಷರವು ಅಕ್ಕರೆ ಎಂಬ
ಮೂರಕ್ಷರದ ಅನ್ವರ್ಥ ಎಂದೇ ಹೇಳಬಹುದು.
ಒಬ್ಬ ತಾಯಿ ತನ್ನ ಮಗುವನ್ನು ಹೇಗೇ ಪ್ರೀತಿಸುತ್ತಾಳೋ
ಅಷ್ಟೇ ಪ್ರೀತಿ ಅಕ್ಕನಾದವಳು ತನ್ನ ತಮ್ಮನ ಮೇಲೂ ತಂಗಿಯ ಮೇಲೂ ತೋರಿಸುತ್ತಾಳೆ.ಅಕ್ಕ ಎನ್ನುವ ಸಂಬಂಧ ಹೀಗೆ ಇರಬೇಕೆಂದೇನು ಇಲ್ಲ.
ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದರೆ ಮಾತ್ರ ಅಕ್ಕ ತಮ್ಮನೋ, ಅಣ್ಣಾ ತಂಗಿ ಅಲ್ಲ. ದೊಡ್ಡಪ ದೊಡ್ಡಮನ ಮಗಳಿರಬಹುದು, ದೂರದ ಸಂಬಂಧದಿಂದ ಇರಬಹುದು ಅಥವಾ ಆತ್ಮೀಯರಾಗಿ ವಯಸ್ಸಿನಲ್ಲಿ ಅಕ್ಕನ ಸ್ಥಾನದಲ್ಲಿರುವರಿರಬಹುದು. ಎಲ್ಲರೂ ತಮ್ಮಾ ಅಥವಾ ತಂಗಿ ಮೇಲೆ ತೋರುವ ಪ್ರೀತಿಮಾತ್ರ
ನಿಸ್ವಾರ್ಥತತೆಯಿಂದ ಕೂಡಿರುತ್ತದ್ದೆ.
ಅಕ್ಕ – ತಮ್ಮ ಅಥವಾ ಅಕ್ಕ – ತಂಗಿ ಇವರಲ್ಲಿ ಜಗಳಗಳು
ನಡೆಯುವುದಿಲ್ಲ ಎಂದೇನಿಲ್ಲ. ಜಗಳಗಳು ಖಂಡಿತ ಆದರೆ ಕ್ಷಣಿಕವಷ್ಟೇ . ಒಮ್ಮೆ ಎಲ್ಲಿಯಾದರೂ
ಜಗಳವಾಯಿತೆಂದರೆ ಅಕ್ಕನಲಿ ತಮ್ಮನಲಿ ಅಥವಾ ತಂಗಿಯಲ್ಲಿ ಏನು ಒಂದು ತಳಮಳ. ಹೆಚ್ಚು ಸಮಯ ಮುನಿಸಿಕೊಂಡಿರುವುದಿಲ್ಲ. ಮನಸ್ಸು ರೆಕ್ಕೆ ಮುರಿದ ಹಕ್ಕಿಯಂತಾಗಿ ಎಂದು ಸರಿ ಹೋಗಿ ಮತ್ತೆ ಮೊದಲಿನ ತರ ಆಗುತ್ತೇವೆಯೋ ಎಂದು ಕ್ಷಣ ಕ್ಷಣಕೂ ಚಟಪಟಿಕೆ ಉಂಟಾಗುವುದು ಸುಳ್ಳಲ್ಲ. ಅಕ್ಕನಾದವಳು ತಮ್ಮನಾದವನು ಸ್ವಲ್ಪ ಬೇಗ ಜೊತೆಯಾದರೆ ಆದರೆ ತಂಗಿಯಾದವಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾಳೆ ಅನಿಸುತ್ತೆ.
ಅಕ್ಕನಿದಾಗ ಸ್ನೇಹಿತೆಯರು ಬೇಕೆಂದೇನಿಸುವುದಿಲ್ಲ.ಒಬ್ಬ ಸ್ನೇಹಿತೆಯ ಜೊತೆಗೆ ಎಷ್ಟು ಆತ್ಮೀಯವಾಗಿ ಇರಬಹುದು ಅಷ್ಟೇ ಆತ್ಮೀಯವಾಗಿ ಅಕ್ಕ ಬೇರೆಯಬಲ್ಲಳು.
ಕೆಲವೊಮ್ಮೆ ಅಮ್ಮನಿಗೂ ಗೆಳತಿಯರಷ್ಟು ಆತ್ಮೀಯರಾಗಲು ಸಾಧ್ಯವಿಲ್ಲ ಆದರೆ ಅಕ್ಕನಾಗಿ, ಗೆಳತಿಯಾಗಿ ಇರಲು ಸಾಧ್ಯ.
ಅಕ್ಕ ಎಂಬ ಪದವೇ ಬೆಚ್ಚಗೆ, ಮುನ್ನಿಸಿಕೊಳ್ಳುವುದಕ್ಕೆ ಜೊತೆಯಾಗಿ ಓಡಾಡುವುದಕ್ಕೆ, ಕೀಟಲೆ ಮಾಡಲು ನೋವಾದಾಗ ತಬ್ಬಿಕೊಂಡು ಅಳಲು ಸಮಾಧಾನ ಮಾಡಲು, ಸ್ನೇಹಿತೆಯಂತೆ ಮನದ ಮಾತನ್ನು ಹೇಳಲು ಎಲ್ಲದಕ್ಕೂ ಅಕ್ಕ ಬೇಕೇ ಬೇಕು ಅನಿಸುತ್ತೆ. ಇವೆಲವು ಅನುಭವವಾಗುವುದು ಅಕ್ಕನನ್ನು ಅತಿಯಾಗಿ ಪ್ರೀತಿಸಿದವರಿಗೆ ಮತ್ತು ಅಕ್ಕನಿಲದ ಕೊರಗನ್ನು ಅನುಭವಿಸಿದವರಿಗೆ ಮಾತ್ರ. ಅಕ್ಕ ಇಲ್ಲದವರು ಇದಕ್ಕೆ ಹೊರತಾದವರು, ಜೀವನದಲ್ಲಿ ಅಕ್ಕ ಎಂಬ ಅಕ್ಕರೆಯ,ಪಾತ್ರದ ಜೊತೆಗಿರುವರಲ್ಲ ಅದೃಷ್ಟವಂತರು. ಅದಕೆ ನಾ ಹೊರತಲ ಒಡ ಹುಟ್ಟಿದ ಅಕ್ಕನಿರಬಹುದು,
ಆತ್ಮೀಯತೆಯ ಅಕ್ಕನಿರಬಹುದು ಸಂಬಂಧದಲ್ಲಿ ಅಕ್ಕನ ಸ್ಥಾನದಲ್ಲಿರುವರಿರಬಹುದು. ಇವರನ್ನು ಪಡೆದ ನಾನು ಧನ್ಯ ಅನ್ಸುತ್ತೆ! ಇವರು ತೋರುವ ಮಮತೆ,ಪ್ರೀತಿ, ವಾತ್ಸಲ್ಯ ಕಾಳಜಿಗೆ ನಾ ಚಿರಋಣಿ.
ಆದರೇ ನನಗೆ ಒಡ ಹುಟ್ಟಿದ ಅಕ್ಕ ಇಲ್ಲ.. ಆದರೆ ಕೆಲವೊಮ್ಮೆ ನನಗೂ ಕೂಡ ಸ್ವಂತ ಅಕ್ಕ ಇದ್ದಿದರೆ ಚೆನಾಗಿತ್ತು ಅಂತ…ಆದರೇ ಈಗಲೂ ಒಡ ಹುಟ್ಟಿದ ಅಕ್ಕನಕ್ಕಿಂತ ಮಿಗಿಲಾಗಿ ಅನೇಕ ಜನ “ಪುಷ್ಪದಂತೆ” ಇರುವ ಸಹೋದರಿಯರನ್ನು ಹೊಂದಿ ಒಬ್ಬಳೇ ಸ್ವಂತ ತಂಗಿಯನ್ನು ಹೊಂದಿ ಚನ್ನಾಗಿದ್ದೇನೆ..!
ಅಕ್ಕನಿಲ್ಲದ ಕೊರಗನು ಮರೆಸಿ ಅಕ್ಕನ ಸ್ಥಾನ ತುಂಬಿ ನನ್ನ ಜೀವನದಲ್ಲಿ ನಿಂತ ಸಹೋದರಿಯ ಕುರಿತು.
ಪ್ರವೀಣ್ ಬಿರಾದಾರ್