Monday, December 23, 2024
Homeಸಂಸ್ಕೃತಿಪ್ರತಿಷ್ಠಿತ ಯುರೋಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ದಾವಣಗೆರೆ ನಗರದ ಪ್ರತಿಷ್ಠಿತ ಯುರೋಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

ಪ್ರತಿಷ್ಠಿತ ಯುರೋಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ದಾವಣಗೆರೆ ನಗರದ ಪ್ರತಿಷ್ಠಿತ ಯುರೋಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

ದಾವಣಗೆರೆ :ನಗರದ ಪ್ರತಿಷ್ಠಿತ ಯುರೋಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ದಿನಾಂಕ: 09-09-2023 ರಂದು ‘ಶ್ರೀ ಕೃಷ್ಣವೇಷಭೂಷಣ ಸ್ಪರ್ಧೆ'( ಕೃಷ್ಣ ಕಾಸ್ಟ್ಯೂಮ್ ಕಾರ್ಣಿವಲ್) ಕಾರ್ಯಕ್ರಮವನ್ನು ಯೂರೋ ಶಾಲೆಯ ಕಾರ್ಯದರ್ಶಿಗಳಾದ ಶ್ರೀಯುತ ಡಿ ವಿ ನಾಗರಾಜ ಶೆಟ್ಟಿಯವರು ಆಯೋಜಿಸಿದ್ದರು. ಈ ಕಾರ್ಯಕ್ರಮವು ಅತ್ಯಂತ ವೈಭವದಿಂದ ನಡೆಯಿತು ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳು ವಿಶೇಷವಾಗಿ ಕೃಷ್ಣನ ವೇಷ ಧರಿಸಿ ಭಾಗವಹಿಸಿದ್ದು ಎಲ್ಲರ ಕಣ್ಮನವನ್ನು ಸೆಳೆಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಕಾರ್ಯದರ್ಶಿಗಳಾದ ಶ್ರೀಯುತ ನಾಗರಾಜ ಶೆಟ್ಟಿ, ಅಧ್ಯಕ್ಷರಾದ ಶ್ರೀಮತಿ ರೂಪ ನಾಗರಾಜ್ ಶೆಟ್ಟಿ, ಗೌರವಾಧ್ಯಕ್ಷರಾದ ಡಾ. ಕೆ ನಾಗರಾಜ್ ರಾವ್, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಜಯಶ್ರೀ ಗುಜ್ಜರ್ ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಸವಿತಾ ಬಾಯಿ ಮಲ್ಲೇಶ್ ನಾಯಕ್ ಹಾಗೂ ತೀರ್ಪುಗಾರರಾಗಿ  ಶ್ರೀಮತಿ ಶುಭದ ಹಾಗೂ ಕುಮಾರಿ ನೇಹಾ ಚನ್ನಗಿರಿ ಮತ್ತು ಬೋಧಕ ಬೋಧಕೇತರ ವರ್ಗದವರು ಮಕ್ಕಳು,ಪೋಷಕರು ಪಾಲ್ಗೊಂಡಿದ್ದರು. 

ಈ ಕಾರ್ಯಕ್ರಮ ಸಂಜೆ 5:00 ಗಂಟೆಗೆ ಯೂರೋ ಶಾಲೆಯ ಆವರಣದಲ್ಲಿ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಈ  ಸ್ಪರ್ಧೆಯು  ೨ ರಿಂದ ೫ ವರ್ಷ ಮಕ್ಕಳ ಜೂನಿಯರ್ ಹಂತ ಹಾಗೂ ೬ ರಿಂದ ೮ ವರ್ಷ ಮಕ್ಕಳ ಸೀನಿಯರ್ ಹಂತ ಎಂಬುದಾಗಿ ಎರಡು ಹಂತದಲ್ಲಿ ನಡೆಯಿತು. ಈ ಸ್ಪರ್ಧೆ ಗೆದ್ದ ಮಕ್ಕಳಿಗೆ ನಗದು ಬಹುಮಾನವಾಗಿ ಪ್ರಥಮ Rs.4000 ದ್ವಿತೀಯ Rs. 3000., ತೃತೀಯ Rs.2000 ಹಾಗೂ ಐದು ವಿಶೇಷ ಬಹುಮಾನಗಳನ್ನು ನೀಡಲಾಯಿತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.ಪುಟ್ಟ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪೋಷಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಮಕ್ಕಳನ್ನು ಹುರಿದುಂಬಿಸಿದರು. ಇದೇ ರೀತಿಯಾಗಿ ಇನ್ನೂ ಹಲವಾರು ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದು ಯೂರೋ ಶಾಲೆಯ ಕಾರ್ಯದರ್ಶಿಗಳಾದ ಶ್ರೀಯುತ ಡಿ ವಿ ನಾಗರಾಜ ಶೆಟ್ಟಿಯವರು ಹೇಳಿದರು. ಒಟ್ಟಾರೆ ಈ ಕಾರ್ಯಕ್ರಮವು ನೆರೆದಿರುವ ಎಲ್ಲರಿಗೂ ಸಂಜೆಯ ರಸದೌತಣವಾಗಿ ಯಶಸ್ವಿಯಾಗಿ ನೆರವೇರಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಯೂರೋ ಶಾಲೆಯ ಮಕ್ಕಳು ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments