ದಾವಣಗೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ,)ಬಸವಾಪಟ್ಟಣ ಯೋಜನಾ ವ್ಯಾಪ್ತಿಯ ಯಕ್ಕನಹಳ್ಳಿ ಗ್ರಾಮದ ಹಿರಿದೇವಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹೊನ್ನಾಳಿ, ನ್ಯಾಮತಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಯುತ ಎಂ, ಪಿ, ರೇಣುಕಾಚಾರ್ಯವರು ಉದ್ಘಾಟಿಸಿ ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸಲು ,ಹಾಗೂ ಶಿಸ್ತಿನ ವ್ಯವಹಾರವನ್ನು ಅತ್ಯಂತ ಪ್ರಾಮಾಣಿಕ ರೀತಿಯಲ್ಲಿ ಗುರುತಿಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ಅದ್ಬುತ ಸಾಧನೆ ಮಾಡುತ್ತಿರುವುದು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯಕ್ಕೆ ಒಳ್ಳೆಯ ದಾರಿಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೀಪಾ ಜಗದೀಶ ಭಾಗವಹಿಸಿ ಶುಭ ಹಾರೈಸಿದರು,ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ವಕೀಲರಾದ ಮಲ್ಲಿಕಾರ್ಜುನ ,ಬಿ ಕಲಾಲ್,ಕಾನೂನಿನ ಅರಿವು ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಬಸವಾಪಟ್ಟಣ ಯೋಜನಾಧಿಕಾರಿ ನವೀನ್ ಎನ್ ರವರು, ಮೇಲ್ವಿಚಾರಕರಾದ ವಿಠೋಭಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ನಾಗವೇಣಿ,ಸೇವಾಪ್ರತಿನಿಧಿ ಯಶೋದಾ, ಹಾಗೂ ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು