ಮೂಡಲಗಿ: ‘ಪಂಚಮಸಾಲಿ ಸಮಾಜದ ಮುಖಂಡರ ಮತ್ತು ಯುವಕರಿಗೆ ಪೊಲೀಸ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದು, ಕೂಡಲೇ ಬೆಳಗಾವಿ ಎಸ್‌ಪಿ ಅವರು ಸಭೆ ಆಯೋಜನೆ ಮಾಡಿ ಕುಂದುಕೊರತೆಗಳನ್ನು ಅಲಿಸಬೇಕು’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಮೂಡಲಗಿ ಮತ್ತು ಗೋಕಾಕ್ ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಸುವ ಮೂಲಕ ಮೀಸಲಾತಿಗಾಗಿ ಹೋರಾಟ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರ ಮತ್ತು ಯುವಕರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದು ಬಗ್ಗೆ ಸಮಾಜದವರು ನಮ್ಮ ಗಮನಕ್ಕೆ ತಂದಿದ್ದಾರೆ. ಯಾವುದೇ ತಪ್ಪು ಮಾಡದ ಅವರ ಮೇಲೆ ಕೇಸ್ ದಾಖಲಿಸುವುದು ಕಿರುಕುಳ ನೀಡುವುದು ಸರಿಯಲ್ಲ ಎಂದರು.
‘ಗೋಕಾಕನಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದು ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ವಹಿಸಲು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಪ್ರತಿಭಟನೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಾಗಿದೆ . ಪ್ರತಿಭಟನೆ ನಡೆಯುವ ಮುನ್ನವೇ ಪಂಚಮಸಾಲಿಗಳ ಸಭೆ ಕರೆದು ಎಸ್ ಪಿ ಅವರು ಸೂಕ್ತ ಕೈಗೊಳ್ಳಬೇಕು ‘ ಎಂದು ಶ್ರೀಗಳು ತಿಳಿಸಿದ್ದಾರೆ