Thursday, August 21, 2025
Homeಸಂಸ್ಕೃತಿವಿನಾಯಕ ಮಹೋತ್ಸವವಾಸವಿ ಯುವಜನ ಸಂಘದಿಂದಕ್ಷೀರ ಸಾಗರ ಮಂಥನ ಪ್ರದರ್ಶನ

ವಿನಾಯಕ ಮಹೋತ್ಸವವಾಸವಿ ಯುವಜನ ಸಂಘದಿಂದಕ್ಷೀರ ಸಾಗರ ಮಂಥನ ಪ್ರದರ್ಶನ

ದಾವಣಗೆರೆಯ ಎಸ್.ಕೆ.ಪಿ.ದೇವಸ್ಥಾನ ರಸ್ತೆಯ ವಾಸವಿ ಯುವಜನ ಸಂಘದಿಂದ 42ನೇ ವಿನಾಯಕ ಮಹೋತ್ಸವದ ಪ್ರಯುಕ್ತ ಈ ಬಾರಿ ಕ್ಷೀರ ಸಾಗರ ಮಂಥನ (ಸಮುದ್ರ ಮಂಥನ) ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಸುನೀಲ್ ತಿಳಿಸಿದ್ದಾರೆ.
ದಿನಾಂಕ 19-9-23ರ ಸೋಮವಾರ ಮಧ್ಯಾಹ್ನ 12.30ಕ್ಕೆ ಎಸ್.ಕೆ.ಪಿ.ದೇವಸ್ಥಾನ ರಸ್ತೆಯ ಶ್ರೀ ಕಾಸಲ್ ವಿಠ್ಠಲ್ ಶ್ರೀಮತಿ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ವಿಘ್ನೇಶ್ವರ ಸ್ವಾಮಿಯ ಪ್ರತಿಷ್ಠಾಪನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ, ಕ್ಷೀರ ಸಾಗರ ಮಂಥನದ ಪ್ರದರ್ಶನವು ದಿನಾಂಕ : 19-9-23 ರಿಂದ 24-9-23ರವರೆಗೆ ಪ್ರತಿದಿನ ಸಂಜೆ 5-30 ರಿಂದ 9-00 ರವರೆಗೆ ಶ್ರೀ ಕಾಸಲ್ ವಿಠ್ಠಲ್ ಶ್ರೀಮತಿ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಹಿರಿಯ ಪತ್ರಕರ್ತರಾದ ಹೆಚ್.ಬಿ.ಮಂಜುನಾಥರವರು ಕ್ಷೀರಸಾಗರ ಮಂಥನದ ಸಾಹಿತ್ಯವನ್ನ ರಚಿಸಿ ಧ್ವನಿ ನೀಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.


ಸಾರ್ವಜನಿಕ ವೀಕ್ಷಣೆಗೆ ದಿನಾಂಕ : 24-9-23ರ ಭಾನುವಾರ ಕೊನೆಯ ದಿನವಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ವಿನಾಯಕನ ಹಾಗೂ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಲು ಸಂಘದ ಕಾರ್ಯದರ್ಶಿ ಆರ್.ಎನ್.ಅಜಿತ್ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments