ದಾವಣಗೆರೆ(ಹರಿಹರ)ಸೆ .೧೮:ಹನಗವಾಡಿ ಕ್ರಾಸ್ ಬಳಿ ಇರುವ ಪ್ರೋ ಬಿ ಕೃಷ್ಣಪ್ಪ ಭವನ ಮೈತ್ರಿ ವನ ದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಮಾನವಬಂಧುತ್ವ ವೇದಿಕೆ ಆಶ್ರಯದಲ್ಲಿ ನಡೆಯುತ್ತಿರುವ ಕಲಾ ಕಲರವ ರಂಗ ಅಭಿನಯ ಗಾಯನ ಸಂಗೀತ ವಾದ್ಯಗಳು ಡ್ರಾಮಾ ತರಬೇತಿ ಶಿಬಿರ ಇದೇ ೧೫-೨೪ ರವರೆಗೇ ನಡೆಯಲಿದೆ,
ನಮ್ಮ ದಾವಣಗೆರೆ ಇಪ್ಟಾ ಕಲಾ ತಂಡದ ಅಧ್ಯಕ್ಷರಾಗಿದ್ದ ಕ್ರಿಯಾಶೀಲ , ಗ್ರಾಮೀಣ ಪ್ರತಿಭೆ, ಅಂಜಿನಪ್ಪ ಲೋಕಿಕೆರೆ ತರಬೇತಿ ಶಿಬಿರ ಉಸ್ತುವಾರಿ ವಹಿಸಿರುವ ಈ ಶಿಬಿರ ರಂಗ ನಿರ್ದೇಶಕ ಯುವ ಉತ್ಸಾಹಿ ಡಿಂಗ್ರಿ ನರೇಶ್,ಬುದ್ದ ಬಸವ ಅಂಬೇಡ್ಕರ್ ಆಶಯ ಕುರಿತ ಬುದ್ದ ಬೆಳಕು ನಾಟಕ ಕೈಗೆತ್ತಿಕೊಂಡು ತಾಲೀಮು ಆರಂಭಿಸಿದ್ದಾರೆ
ಹೋರಾಟ ಜಾಗೃತಿ ಗೀತೆಗಳ ತರಬೇತಿ ಪ್ರಕಾಶ್ ಸಾಲಾಪುರ್ ರಾಮದುರ್ಗ, ಸಂಗೀತ ಶಿಕ್ಷಕ ಕೃಷ್ಣ
ಹುಬ್ಬಳ್ಳಿ, ನೀಡುತ್ತಿರುವ ಈ ಶಿಬಿರ ನೇತೃತ್ವ ರಾಜ್ಯ ಮಾನವ ಬಂಧುತ್ವ ವೇದಿಕೆ ಸಂಚಾಲಕ ಎ ಬಿ, ರಾಮಚಂದ್ರಪ್ಪ ರಾಘವೇಂದ್ರ ದೊಡ್ಡ ಮನಿ,ವಹಿಸಿದ್ದು ರಾಜ್ಯದ ಬೆಳಗಾಂ ಬಳ್ಳಾರಿ ಬಾಗಲಕೋಟೆ ರಾಯಚೂರು ಕೊಪ್ಪಳ ದಾವಣಗೆರೆ ಬಿಜಾಪುರ, ಉಡುಪಿ, ಸೇರಿದಂತೆ ಹಲವು ಆಸಕ್ತಿ ಇರುವ ಯುವ ಉತ್ಸಾಹಿ ಯುವತಿಯರ ಆಯ್ದಾ ೩೦ ಜನರ ತಂಡ ಈ ಶಿಬಿರದಲ್ಲಿ ಪಾಲ್ಗೊಂಡಿದೆ,
ಸತೀಶ್ ಜಾರಕಿಹೊಳಿ ರವರ ಕನಸಿನ ಕೂಸು ಬುದ್ದ ಬಸವ ಅಂಬೇಡ್ಕರ್ ವಿಚಾರಧಾರೆ ಮುಂದಿಟ್ಟು ಕೊಂಡು ಇಡೀ ವ್ಯವಸ್ಥೆ ಸಾಮಾಜಿಕ ನ್ಯಾಯ, ಮೌಢ್ಯ,ತೇ ಶೋಷಿತರ ಪರವಾಗಿ ಧ್ವನಿ ಗೂಡಿಸಲ ಈಗೀನ ಯುವ ಜನರಲ್ಲಿ ಸಾಂಸ್ಕೃತಿಕವಾಗಿ ಸಾಹಿತ್ಯಿಕವಾಗಿ ವೈಚಾರಿಕ ಪ್ರಜ್ಞೆ ಮೂಡಲು ಮಾನವ ಬಂಧುತ್ವ ವೇದಿಕೆ ಕಟ್ಟಿ ಇಡೀ ರಾಜ್ಯದ ಹಲವು ಭಾಗಗಳಲ್ಲಿ ಕಲೆ ಸಂಸ್ಕೃತಿ ಸಾಹಿತ್ಯ ಮೂಲಕ ಅರಿವು ಜಾಗೃತಿ ಮೂಡಿಸುವ ಸಮಸಮಾಜದ ನಿರ್ಮಾಣ ಮಾಡಲು ಗುರಿ ಹೊಂದಿರುವ ಸೈದ್ಧಾಂತಿಕ ಬದ್ಧತೆಯ ರಾಜಕಾರಣಿ ಸತೀಶ್ ಜಾರಕಿಹೊಳಿ ರವರು ತಮ್ಮ ಫೌಂಡೇಶನ್ ಮಾನವಬಂಧುತ್ವ ವೇದಿಕೆ ಆಶ್ರಯದಲ್ಲಿ
ಸರ್ಕಾರದ ಉನ್ನತ ಸ್ಥಾನದಲ್ಲಿ ಸಚಿವರಾಗಿದ್ದು ಕೊಂಡು ತುಳು ಸಮುದಾಯ, ಜನರಲ್ಲಿ ಪ್ರಜ್ಞೆ ಮೂಡಲು. ತಮ್ಮದೇ ವಿಶಿಷ್ಟ ವಿಭಿನ್ನ ಆರೋಗ್ಯ ಕರ ಸಮಾಜ ಸೇವೆ ಮಾಡಲು ಇಂಥ ಶಿಬಿರ ಹಮ್ಮಿಕೊಂಡಿರುವುದು ಉಳಿದೆಲ್ಲ ರಾಜಕಾರಣಿ ಉದ್ಯಮಿಗಳಿಗೆ ಸತೀಶ್ ಜಾರಕಿಹೊಳಿ ರವರಂತವರು
ರೋಲ್ ಮಾಡಲ್ ಎಂಧೇ ಹೇಳಬಹುದು.
ದಾವಣಗೆರೆ ಹಿರಿಯ ಮಾಧ್ಯಮ ವರದಿಗಾರ ಪುರಂದರ್ ಲೋಕಿಕೆರೆ, ಕಲಾವಿದರ ಜೊತೆ ಆತ್ಮೀಯ ಸಂವಾದ ನೆಡೆಸಿ ಪ್ರಸ್ತುತ ಬುದ್ದ ಬಸವ ಅಂಬೇಡ್ಕರ್ ಕನಕ ಪೆರಿಯಾರ್, ಬಾಪುಲೇ ಗಾಂಧಿ ಸಂವಿಧಾನ ನಮ್ಮ ಆಶಯಗಳ ಬಗ್ಗೆ ಚರ್ಚಿಸಿದರು.ಇಪ್ಟಾ ಹಿರಿಯರ ಸಂಗಾತಿ ಗಳು ಭೇಟಿ ನೀಡಿದ್ದರು