ಹುಣಸಗಿ: ಪಟ್ಟಣದ ಆರಾಧ್ಯ ದೇವ ಶ್ರೀ ನೀಲಕಂಠೇಶ್ವರ ಜಾತ್ರೆಯು ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ೧೦.೦೦ ಗಂಟೆಗೆ ದೇವಸ್ಥಾನದಿಂದ ಊರ ಹೀರೆ ಹಳ್ಳದವರೆಗೆ ಬಾಜಿ. ಭಜನೆ,ಯೊಂದಿಗೆ ತೆರಳಿ, ನೀಲಕಂಠೇಶ್ವರ ದೇವದರಿಗೆ ಗಂಗಸ್ಥಳದಲ್ಲು ಪೂಜೆ ಹಾಗೂ ಅಭಿಷೇಕ ಮಾಡಿಕೊಂಡು ಅಲ್ಲಿ ಮುಖ್ಯ ಬೀದಿಯ ಮೂಲಕ ಪಟ್ಟಣದ ಹೊರ ಅಗಸಿಯ ಮೂಲಕ ಊರ ಒಳಗೆ ಇರುವ ದೇವಸ್ಥಾನದವರೆಗೆ ಬಾಜಾ ಭಜಂತ್ರಿ, ಡೊಳ್ಳು ಕುಣಿತ,
ಜೋಗತಿಯರ ನೃತ್ಯ, ಶಾಲಾ ವಿದ್ಯಾರ್ಥಿಗಳಿಂದ ಲೈಜಿಮ್ ಕುಣಿತದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಮಧ್ಯಾಹ್ನ 12.45 ನಿಮಿಷಕ್ಜೆ ಪೂಜೆ, ಅಭಿಷೇಕ ಸಲ್ಲಿಸಲಾಯಿತು. ನಂತರ 2.00 ಗಂಟೆಯಿಂದ ಭಕ್ತರಿಗೆ ಅನ್ನ ಪ್ರಸಾದವನ್ನು ಏರ್ಪಡಿಸಲಾಗಿತ್ತು. ಜಾತ್ರೆಯ ನಿಮಿತ್ಯ ದೇವಸ್ಥಾನಕ್ಕೆ ಭಕ್ತರು ತಂಡೋಪ ತಂಡವಾಗಿ ಆಗಮಿಸಿ ನೀಲಕಂಠೇಶ್ವರ ದೇವರ ಕೃಪೆಗೆ ಪಾತ್ರರಾದರು.
ಈ ಒಂದು ಜಾತ್ರೆಯಲ್ಲಿ ಊರಿನ ಗಣ್ಯವ್ಯಕ್ತಿಗಳು, ಮುಖಂಡರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ಕೂಡಾ ಭಾಗವಹಿಸಿ ನೀಲಕಂಠೇಶ್ವರ ಹಾಗೂ ಗಜಾಜನನ ಉತ್ಸವದಲ್ಲಿ ಭಾಗಿಯಾಗಿದ್ದರು.