Saturday, December 21, 2024
Homeಸಂಸ್ಕೃತಿದಸರಾ ಆಚರಣೆಯ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಉತ್ತಮ ಸಂದೇಶ ನೀಡುವಂತೆ ಇರಬೇಕು -

ದಸರಾ ಆಚರಣೆಯ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಉತ್ತಮ ಸಂದೇಶ ನೀಡುವಂತೆ ಇರಬೇಕು –

ಮೈಸೂರು ಸೆಪ್ಟೆಂಬರ್ 23 ದಸರಾ ಆಚರಣೆಯಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮವು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಇರಬೇಕು. ಈ ಬಾರಿ ಅದ್ಧೂರಿಯಲ್ಲದ ಹಾಗೂ ಸರಳವೂ ಅಲ್ಲದ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ತಿಳಿಸಿದರು.

ಇಂದು ಮೈಸೂರು ಅರಮನೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಆಚರಣೆಯ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಪರಂಪರೆಯನ್ನು ಬಿಂಬಿಸುವ ರೀತಿ ಇರಬೇಕು. ಕವಿಗೋಷ್ಠಿಯಲ್ಲಿ ಸಂವಿಧಾನ, ಗಣರಾಜ್ಯ, ಕರ್ನಾಟಕ ಏಕೀಕರಣ, ಮೈಸೂರು ಅರಸರ ಬಗ್ಗೆ ಮಾಹಿತಿ ನೀಡುವ ಜೊತೆಗೆ ಹಾಸ್ಯ ಬರಿತವಾಗಿ ಇರಬೇಕು. ಆಹಾರ ಮೇಳದಲ್ಲಿ ದೇಶೀಯ ಆಹಾರ ಪದ್ಧತಿಯ ಆಹಾರಗಳನ್ನು ನೀಡಬೇಕು ಅಲ್ಲದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆ ಮಾಡಬೇಕು. ದಸರಾ ಚಲನ ಚಿತ್ರೋತ್ಸವದಲ್ಲಿ ಸಾಮಾಜಿಕ ಸಂದೇಶ ಸಾರುವ ಚಿತ್ರಗಳನ್ನು ಪ್ರದರ್ಶನ ಮಾಡಬೇಕು. ಯುವ ನಿರ್ದೇಶಕರಿಗೆ ಉತ್ತೇಜನ ನೀಡುವಂತೆ ಇರಬೇಕು. ಕಿರು ಚಿತ್ರಗಳ ಸ್ಪರ್ದೆ ಏರ್ಪಡಿಸೇಕು ಎಂದು ತಿಳಿಸಿದರು.

ಫಲಪುಷ್ಪ ಪ್ರದರ್ಶನ ಆಕರ್ಷಣೀಯವಾಗಿ ಇರಬೇಕು. ಹಣ್ಣು ಮೇಳದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬೆಳೆಯುವ ಹಣ್ಣುಗಳ ಪ್ರದರ್ಶನ ಆಗಬೇಕು. ರೈತರಿಂದ ನೇರವಾಗಿ ಹಣ್ಣುಗಳ ಖರೀದಿ ಅಗಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ ವಿವಿಧ ಜಿಲ್ಲೆಗಳಿಂದ ಸ್ಥಬ್ದ ಚಿತ್ರಗಳು ಬರುತ್ತವೆ. ದಸರಾ ಆಚರಣೆಯ ಮೊದಲ ದಿನವೇ ಎಲ್ಲಾ ಸ್ಟಾಲ್ ಗಳು ತೆರೆಯಬೇಕು. ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿ ಇರಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಗಾಯತ್ರಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಬಿ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಶಿವರಾಜ್, ದಸರಾ ಉಪಸಮಿತಿಗಳ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments