ಮೂಡಲಗಿ: ಸ,23-ತಾಲೂಕಿನ ಶಿವಾಪೂರ (ಹ) ಗ್ರಾಮದ ಪ್ರತಿಭಾವಂತ ಚುಟುಕು ಸಾಹಿತಿ ಮತ್ತು ಶಿಕ್ಷಕರಾದ ಚಿದಾನಂದ ಹೂಗಾರ ಅವರನ್ನು ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಶೋಧಕರಾದ ಡಾllಮಹಾದೇವ ಪೋತರಾಜ ಕಾರ್ಯಾಧ್ಯಕ್ಷರು,ಪ್ರಕಾಶ ಮೇತ್ರಿ ಪ್ರಧಾನ ಕಾರ್ಯದರ್ಶಿ, ದುರ್ಗಪ್ಪ ದಾಸನ್ನವರ ಖಜಾಂಚಿ, ಕಾರ್ಯಕಾರಣಿ ಸದಸ್ಯರು ಯಾದವಾಡದ ಬಸಪ್ಪ ಇಟ್ಟನ್ನವರ,ವಾಯ್.ಬಿ.ಕಳ್ಳಿಗುದ್ದಿ,ಹಳ್ಳೂರು ಸಿದ್ದು ಮಹಾರಾಜ,ರಾಜಾಪೂರದ ಸದಾಶಿವ ಯಕ್ಸಂಬಿ,ಶಿವಕುಮಾರ ಕೋಡಿಹಾಳ,ಮೈಬೂಬ ಶೇಖಬಡೆ,ಬಾಲಪ್ಪ ನಂದಿ,ಶಿವರಾಜ ಕಾಂಬಳೆ,ಬಸಪ್ಪ ಹೆಬ್ಬಾಳ, ಶ್ರೀಮತಿ ಸವಿತಾ ದ್ಯಾಗಾನಟ್ಟಿ,ಶ್ರೀ ಮತಿ ರಾಜಶ್ರೀ ಹಳ್ಳೂರು, ಆಯ್ಕೆಯಾಗಿದ್ದಾರೆ.ಈ ಮಹಿನಿಯರು ನಮ್ಮ ತಾಲೂಕಿನ ಹೆಮ್ಮೆಯ ಯುವ ಸಾಹಿತ್ಯಗಳು.ನಾಟಕ,ಕವನ,ಕಥೆ, ಧ್ವನಿ ಸುರಳಿ (ಕ್ಯಾಸೆಟ್) ಹೀಗೆ ತಮ್ಮ ತಮ್ಮ ನೆಚ್ಚಿನ ಕ್ಷೇತ್ರದಲ್ಲಿ ಬರವಣಿಗೆ ಮೂಲಕ ಸಾಮಾಜಿಕ ಕಳಕಳಿ ಹೊಂದಿರುವರು. ಚುಟುಕು ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಎಲ್ಲ್.ಎಸ್.ಶಾಸ್ತ್ರೀ ಮತ್ತು ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ ಅವರು ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದರು.
ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿದ್ದಾರೆ,ಚಿದಾನಂದ ಹೂಗಾರ
RELATED ARTICLES