ಜಗಳೂರು:ಕಾವೇರಿ ನೀರು ತಮಿಳ ನಾಡಿಗೆ ಹರಿಸಿರುವುದನ್ನು ಖಂಡಿಸಿ ಜಗಳೂರು ಪಟ್ಟಣದ ತಾಲ್ಲೂಕು ಕಚೇರಿ ಬಳಿ ಕರ್ನಾಟಕ ರಕ್ಷಾಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿದರು.
ಇದೇ ವೇಳೆ ಕರವೇ ಕಾರ್ಯಕರ್ತರು ತಾಲ್ಲೂಕು ಕಚೇರಿ ಬಳಿ ಜಮಾಯೀಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ತಹಶಿಲ್ದಾರರ ಅರುಣ್ ಕುಮಾರ್ ಕಾರಗಿ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಕರವೇ ತಾಲೂಕು ಅಧ್ಯಕ್ಷ ಎಂ ವೈ ಮಹಾಂತೇಶ್ ಮಾತನಾಡಿದ ಅವರು ಕೆಆರ್‌ಎಸ್ ಅಣೆಕಟ್ಟಿನಿಂದ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ನೀಡಿರುವ ತೀರ್ಪಿನ ಪುನರ್ ಪರಿಶೀಲನೆ ಮಾಡಬೇಕು. ರಾಜ್ಯದಲ್ಲಿ ಈ ಬಾರಿ ತೀವ್ರತರದ ಬರದ ಛಾಯೆಯಿದ್ದು ಕಾವೇರಿ ನದಿ ಪಾತ್ರದ ತೀರದಲ್ಲಿ ಸಾಕಷ್ಟು ಮಳೆಯ ಕೊರತೆಯಾಗಿದ್ದು ಕೆಆರ್‌ಎಸ್ ಅಣೆಕಟ್ಟಿನಲ್ಲಿ ನೀರಿನ ಅಲಭ್ಯತೆ ಇರುವುದರಿಂದ ಹಳೆ ಮೈಸೂರು ಭಾಗದ ಜನರಿಗೆ ಕುಡಿಯುವ ನೀರಿಗೆ ಮತ್ತು ರೈತಾಪಿ ವರ್ಗಕ್ಕೆ ಅನಾನುಕೂಲವಾಗಿರುವುದರಿಂದ ಮತ್ತು ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಈಗಾಗಲೇ ಸಾಕಷ್ಟು ನೀರಿನ ಸಂಗ್ರಹಣೆ ಇರುವುದರಿಂದ ತಾವು ನೀಡಿದ ತೀರ್ಪನ್ನು ಪುನರ್ ಪರಿಶೀಲಿಸಿ ಕನ್ನಡದ ನಾಡಿನ ಜನತೆಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ
ಕರವೇ ಗೌರವಾಧ್ಯಕ್ಷ ಸುರೇಶ್ ಸಂಗೋಳ್ಳಿ, ಜಿಲ್ಲಾ ಸಂಚಾಲಕ ಲೂಕ್ಮನ್ ಉಲ್ಲಾ ಖಾನ್, ಉಪಾಧ್ಯಕ್ಷ ಹಫೀಸ್, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಶಂಭುಲಿಂಗಪ್ಪ, ಗೌರವ ಅಧ್ಯಕ್ಷೆ ತಿಪ್ಪಮ್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಎಂ.ಡಿ ಅಬ್ದುಲ್ ರಖೀಬ್, ಐಟಿ ಘಟಕದಜಿಲ್ಲಾ ಸಂಚಾಲಕರಾದ ಲಿಂಗರಾಜು ಬಿ ಎಂ. ಪದಾಧಿಕಾರಿಗಳಾದ ಪ.ಪಂ. ಸದಸ್ಯರು ನವೀನ್ ಕುಮಾರ್, ಮುನ್ನ, ಗೊಲ್ಲರಟ್ಟಿ ತಿಪ್ಪೇಸ್ವಾಮಿ, ವೇದಾವತಿ , ಬಂಗಾರಕ್ಕನಗುಡ್ಡ ಶಿವಣ್ಣ , ಎಲೆ ವಿಜಯ್, ಸೊಕ್ಕೆ ಹೋಬಳಿ ಘಟಕದ ಅಧ್ಯಕ್ಷರಾದ ದೇವರಾಜ್, ಉಜ್ಜಪ್ಪ ಒಡೆಯರಹಳ್ಳಿ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಸೇರಿದಂತೆ ಮತ್ತಿತರರಿದ್ದರು ಭಾಗವಹಿಸಿದ್ದರು.(ವರದಿ:ರಕೀಬ್)