ಮೂಡಲಗಿ: ಸ,30-ತಾಲೂಕಿನ ಯಾದವಾಡ ಗ್ರಾಮದಲ್ಲಿ ಕನ್ನಡ ಸಂಘಟನೆ,ಯುವಕರು ಮತ್ತು ರೈತರು ಬೈಕ್ ಮುಖಾಂತರ ಗ್ರಾಮದ ತುಂಬೆಲ್ಲಾ ರಾಲಿ ಮಾಡಿದ್ದಾರೆ. ನಮ್ಮ ನಾಡಿನ ರೈತರಿಗೆ ಆದ ಅನ್ಯಾಯ ಕೇಳಲು ಯಾರು ಇಲ್ಲ.ಮೊದಲಿಂದಲು ನಮ್ಮ ನಾಡಿಗೆ ನೀರಿಗಾಗಿ ಸೋಲುತ್ತಿದ್ದೇವೆ.ಈ ಸೋಲು ನಮ್ಮ ರೈತರ ಬಾಳಿಗೆ ಬೆಂಕಿ ಹಚ್ಚುತ್ತಿರುವುದು.ಈ ಸೋಲಿಗೆ ನೆರ ಹೊಣೆ ಸರ್ಕಾರ ಕಾರಣವಾಗುತ್ತದೆ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರಾದ ಕಲ್ಮೇಶ ಗಾಣಿಗ ಆಕ್ರೋಶ ಹೊರ ಹಾಕಿದರು.
ಸುನೀಲ ನ್ಯಾಮಗೌಡ,ಅಜಯ ಜನ ಅದವ,ರಮೇಶ ಉದಪುಡಿ,ಬಸವರಾಜ ಕೇರಿ,ಸುನೀಲ ಕೆಂಜೋಳ,ಚರಂತಯ್ಯ ಮಳ್ಳಿಮಠ,ಕಲ್ಲಪ್ಪ ಮಾಲಮನಿ,ಚೇತನ ಅಂಬಲಜೇರಿ ಇನ್ನು ಅನೇಕರು ಬೈಕ್ ರಾಲಿಯಲ್ಲಿ ಭಾಗಿಯಾಗಿ ನಂತರ ಆರಕ್ಷಕರಿಗೆ ಮನವಿ ಸಲ್ಲಿಸಿದರು.