ಇಂಡಿ: ತಾಲೂಕಿನಲ್ಲಿ ತೊಗರಿ ಬೆಳೆ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬಾರದೆ ಹಾಗೂ ಮಂಜಿನ ವಾತಾವರಣದಿಂದ ತೊಗರಿ ಬೆಳೆ ಸಂಪೂರ್ಣ ಕೈ ಕೊಟ್ಟಿದೆ. ಅದಲ್ಲದೇ ಈ ಬಾರಿ ಕಳಪೆ ಬೀಜ ವಿತರಣೆ ಮಾಡಿದ್ದರಿಂದ ಇಳುವರಿ ಕುಂಠಿತವಾಗಿದ್ದು,ಅಂತಹ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಹರಿಸಬೇಕು.19ರ ಕಾಲುವೆ( ನಾದ ಕೆಡಿ) ಮರುಸ್ಥಾಪಿಸಿ ನೀರು ಹರಿಸಬೇಕು ಎಂದು ಕರವೇ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ರೈತರು -ಗ್ರಾಮಸ್ಥರು ಸೇರಿಕೊಂಡು ನಾದ ಕೆಡಿ ಬಸ್ ನಿಲ್ದಾಣದ ಸಮೀಪ ಶಾಂತಿಯುತವಾಗಿ ಬೃಹತ್ ಪ್ರತಿಭಟನೆ ಮಾಡಿದರು.ನಂತರ ತಾಲೂಕಿನ ಉಪತಹಸೀಲ್ದಾರ್ ರಾದ ಆರ್ ಬಿ ಮೋಗಿಯವರ ಮುಖಾಂತರ ರಾಜ್ಯ ಸಕಾ೯ರಕ್ಕೆ ಮನವಿಯನ್ನು ಸಲ್ಲೀಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ರಾಜಕುಮಾರ ಪಾಟೀಲ .ಅನೀಲಗೌಡ ಅಳ್ಳಗಿ.ಕಿರಣಕುಮಾರ ಕೆರುಟಗಿ .ಆಸೀಫ್ ನದಾಫ.ಸಿದ್ಧಾರಾಮ ತಳವಾರ.ಪೈಗಂಬರ ದೇಸಾಯಿ.ಅಜೀಜ್ ದೇಸಾಯಿ ಬಸವರಾಜ ಲಾಳಸಂಗಿ.ಎಮ್.ಎಸ್.ಮುಲ್ಲಾ.ಶರಣಗೌಡ ಬಂಡಿ.ಅಂಬುರಾಯ ಕೌಟಗಿ.ದಾದು ಮುಲ್ಲಾ.ರಫೀಕ ವಾಲಿಕಾರ.ರಾಜು ನದಾಫ.ಇತರರು ಉಪಸ್ಥಿತರಿದ್ದರು.