ದಾವಣಗೆರೆ: ಜಯದೇವ ಸರ್ಕಲ್ ನಿಂದ ಪ್ರತಿಭಟನೆ ಮೆರವಣಿಗೆ ಮೂಲಕ ಎಸಿ ಕಚೇರಿಗೆ ತೆರಳಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು ರೈತ ಕಾರ್ಮಿಕರ ದುಡಿಯುವ ಎಲ್ಲಾ ಜನರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಜನಾಗ್ರಹ ಜನಂದೋಲನದ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ಸಹಕಾರ್ಯದರ್ಶಿಗಳಾದ ಕಾಂ ಹೆಚ್ ಜಿ ಉಮೇಶ್ ಆವರಗೆರೆ ವಾಸು, ಜಗಳೂರು ಮಹಮ್ಮದ್ ಭಾಷಾ ಮತ್ತು ಮುಖಂಡರಾದ ಐರಣಿ ಚಂದ್ರು ನರೇಗಾ ರಂಗನಾಥ್ ಸಿದ್ದೇಶ್ ಮಾತನಾಡಿದರು. ಜನಗೃಹ ಜನಾಂದೋಲನದ ನೇತೃತ್ವವನ್ನು ಮುಖಂಡರುಗಳಾದ ಟಿಎಸ್ ನಾಗರಾಜ್, ಹರಿಹರದ ಟಿಎಚ್ ನಾಗರಾಜ್, ಸಿ ರಮೇಶ್, ಗದಿಗೆಶ ಜಯ್ಯಪ್ಪ, ಸರೋಜಾ ,ಜ್ಯೋತಿ ಲಕ್ಷ್ಮಿ, ಪದ್ಮ ,ನಿಟ್ವಳ್ಳಿ ಬಸವರಾಜ್, ಕೆಜಿ ಶಿವಮೂರ್ತಿ, ಕುಮಾರ ನಾಯಕ, ವಿ ಲಕ್ಷ್ಮಣ , ಬೆಳಲಗೆರೆ ರುದ್ರಮ್ಮ ಸೇರಿದಂತೆ ಇತರರು ವಹಿಸಿದ್ದರು, ಜನಾಗ್ರಹ ಜನಾಂದೋಲನದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.