ದಾವಣಗೆರೆ:ಲೋಕಿಕೆರೆ ಗ್ರಾಮದ ಪಂಚಾಯತ್ ಯಲ್ಲಿ ಗ್ರಾಮದ ಎಲ್ಲಾ ವಾರ್ಡ್ ಗಳಲ್ಲಿಯೂ ಕುಡಿಯುವ ನೀರು ಶುಧ್ಧವೇ ಅಶುದ್ಧವೇ ಎಂದು ಜಿಲ್ಲಾ ಪಂಚಾಯತ್ ನೀರು ಪರೀಕ್ಷಾ ತಜ್ಞ ಆರಿಫ್ ವುಲ್ ರವರು
ಗ್ರಾಮದ ಜನರು ಈಗಾಗಲೇ ಕುಡಿಯಲು ಬಳಸುತ್ತಿದ್ದ ನೀರನ್ನು ಪ್ರಾಯೋಗಿಕ ಪರೀಕ್ಷೆ ನಡೆಸಿ
ಪ್ರತ್ಯಕ್ಷ ತೋರಿಸಿ ಜನರಲ್ಲಿ ಆತಂಕ ದೂರ ಮಾಡಿದರು.
ಶುಧ್ಧ ನೀರು ಪಿಚ್ -6.0-6.5 ವರೆಗೆ ಇದ್ದರೆ
ಗಡಸು ನೀರು 200-400 ವರೆಗೇ ಇದ್ದರೇ ಫ್ಲೋರೈಡ್ ಅಂಶ 200ರೊಳಗೇ ಇದ್ದರೆ ಯಾವುದೇ ಹಾನಿಕಾರಕ ಅಲ್ಲ ಎಂದು ಸರಳ ವಿಧಾನ ತೋರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಪಿಡಿಒ ಅಶ್ವಿನಿ ಕಾರ್ಯದರ್ಶಿ ಸುರೇಶ್ ಬಿಲ್ ಕಲೆಕ್ಟರ್ ಶೇಖರಪ್ಪ, ಶುಧ್ಧ ನೀರು ಘಟಕ ಉಸ್ತುವಾರಿ ಮಂಜುನಾಥ್ , ನೀರು ಸರಬರಾಜು ನೀರು ಗಂಟಿ
ಪರಮೇಶ್ವರಪ್ಪ ಇನ್ನಿತರರು ಉಪಸ್ಥಿತರಿದ್ದರು
ಈ ಹಿಂದೆ ಗ್ರಾಮದಲ್ಲಿ ಕುಡಿಯಲು ನೀರು ಯೋಗ್ಯ ವಲ್ಲ, ಕೊಳಕು ನೀರು ನಲ್ಲಿಯಲ್ಲಿ ಬರುತ್ತಾ ಇದೆ ಎಂದು ಪಂಚಾಯತ್ ಗೆ ಪದೆ ಪದೇ ಅಹವಾಲು ಹೇಳುತ್ತಿದ್ದರು.
ಈ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಯವರು ಜಿಲ್ಲಾ ಪಂಚಾಯತ್ ಪಿ ಆರ್ ಇ ವಿಭಾಗಕ್ಕೆ ಪತ್ರ ಬರೆದು ನೀರು ಪರಿಕ್ಷೆ ಮಾಡಿ ಶುಧ್ಧವೇ ಅಶುದ್ಧವೇ ಎಂದು ವರದಿ ನೀಡುವಂತೆ ಕೋರಿಕೆ ಮೇರೆಗೆ
ಗ್ರಾಮದಲ್ಲಿ ಎಲ್ಲಾ ವಾರ್ಡ್ ಗಳ ಕುಡಿವ ನೀರು ಬೋರ್ ವೆಲ್,ಬಹು ಗ್ರಾಮ ಕುಡಿಯುವ ನೀರು ಯೋಜನೆ ನೀರನ್ನು ಪರೀಕ್ಷೆ ನಡೆಸಿ ಕುಡಿಯಲು ನೀರು ಯೋಗ್ಯ ಎಂದು ವರದಿ ಹೇಳಿದೆ(ವರದಿ:ಪುರಂದರ ಲೋಕಿಕೆರೆ)