Tuesday, December 24, 2024
Homeಆರೋಗ್ಯಇದ್ದೂ ಇಲ್ಲದಂತಿರುವ ಕೊಟ್ಟೂರಿನ ನಮ್ಮ ಕ್ಲಿನಿಕ್

ಇದ್ದೂ ಇಲ್ಲದಂತಿರುವ ಕೊಟ್ಟೂರಿನ ನಮ್ಮ ಕ್ಲಿನಿಕ್

(ವರದಿ, ದಾದಾಪೀರ್
ಪವಿತ್ರ ಪ್ರಜಾ ವಾರ್ತಾ)

ಕೊಟ್ಟೂರು:ಇತ್ತೀಚೆಗೆ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆರಂಭಿಸಿರುವ ನಮ್ಮ ಕ್ಲಿನಿಕ್ ಕೊಟ್ಟೂರಿನಲ್ಲಿ ಪ್ರಾರಂಭಿಸಿದ್ದರೂ ಸಹ ಇದ್ದೂ ಇಲ್ಲದಂತಾಗಿದೆ. ಮೊದಲನೆಯದಾಗಿ ಊರಿನಿಂದ ಕೊಟ್ಟೂರು ಪಟ್ಟಣದ ಮಧ್ಯಭಾಗದಲ್ಲಿ ಈ ಕ್ಲಿನಿಕ್ ತೆರೆದಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು ಆದರೆ ಊರಿನಿಂದ ದೂರ ಇರುವ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಹಿಂಭಾಗದಲ್ಲಿ ಇರುವ ಈ  ಕ್ಲಿನಿಕ್ ತೆರೆದಿರುವುದರಿಂದ ಕ್ಲಿನಿಕ್‌ಗೆ ಬರಲು ಸಾರ್ವಜನಿಕರು ಉತ್ಸಾಹ ತೋರುತ್ತಿಲ್ಲ. ಸರ್ಕಾರದ ಮಹತ್ವಾಕಾಂಕ್ಷೆಯಾದ ಯೋಜನೆಗಳು ಯಶಸ್ಸಿನ ದಾರಿಯನ್ನು ತುಳಿಯದೇ ಇರಲು ಇಂತಹ ಹಲವಾರು ತೊಡಕುಗಳು ಕಾರಣವಾಗಿವೆ. ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳ ೧೨ ಸೇವೆಗಳನ್ನು ಈ ಕ್ಲಿನಿಕ್‌ನಲ್ಲಿ ಲಭ್ಯವಾಗುತ್ತಿದ್ದು, ಜನರು ಇಲ್ಲಿಗೆ ಬರಬೇಕೆಂದರೆ ಆಟೋ ಹತ್ತಿಯೇ ಬರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಗರಿಷ್ಟ ಮಟ್ಟದಲ್ಲಿ ಸಾರ್ವಜನಿಕರು ಕ್ಲಿನಿಕ್‌ಗೆ ಬರುತ್ತಿಲ್ಲ.ಬೆರಳೆಣಿಕೆಯ ಸಾರ್ವಜನಿಕರು ಬಂದು ಸೇವೆ ಪಡೆಯುತ್ತಿದ್ದಾರೆಯೇ
ಇಲ್ಲಿಗೆ ಬರುವ ರೋಗಿಗಳ ಮೊಬೈಲ್ ನಂಬರ್ ಆಧಾರ್ ನಂಬರ್  ಯಾವುದನ್ನು ತೆಗೆದುಕೊಳ್ಳದೆ.
ಇರುವುದನ್ನು ಸಾರ್ವಜನಿಕರಾದ ಪ್ರಕಾಶ್ , ರಮೇಶ್,  ಆರೋಪಿಸಿದರು.

ಕೋಟ್ -1
ನಮ್ಮ ಕ್ಲಿನಿಕ್ ಊರಿನಿಂದ ಸುಮಾರು ೨ ಕಿ.ಮೀ. ದೂರದಲ್ಲಿರುವುದರಿಂದ ಜನರಿಗೆ ಇದು ಅನುಕೂಲವಾಗುತ್ತಿಲ್ಲ. ಇದರ ಬದಲು ಊರೊಳಗೆ ಇದನ್ನು ಪ್ರಾರಂಭಿಸಿದ್ದರೆ ಚೆನ್ನಾಗಿತ್ತು. ಜನರು ಬರದೇ ಇದ್ದರೂ ಸಹ ಅಲ್ಲಿರುವ ಸಿಬ್ಬಂದಿಗಳೇ ಜನರ ಹಾಜರಾತಿಯಲ್ಲಿ ತಾವೇ ಹೆಸರು ತುಂಬಿಕೊಳ್ಳುತ್ತಿದ್ದಾರೆ. ಈ  ಹೆಸರಿನ ಔಷಧಿ ಎಲ್ಲಿ ಹೋಗುತ್ತೆ.ಎಬುದು ಪ್ರಶ್ನೆಯಾಗಿ ಉಳಿದಿದೆ ಎಂದು ಆರ್ ಟಿ ಐ ಕಾರ್ಯಕರ್ತ ಮಧುನಾಯ್ಕ ,ಆರೋಪ ಮಾಡುತ್ತಿದ್ದಾರೆ

ಕೊಟ್ -2
ನಮ್ಮ ಕ್ಲಿನಿಕ್ ವೈದ್ಯರ ನೇಮಕಾತಿಯಾಗಿರುವುದಿಲ್ಲ. ಅರೆವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ವೈದ್ಯರನ್ನು ಕೂಡಲೇ ನೇಮಕ ಮಾಡಲಾಗುವುದು.ಮತ್ತು ಸುಳ್ಳು ರೋಗಿಗಳ ಮಾಹಿತಿ ಬರದಲ್ಲಿ ಹಾಗೂ ಔಷಧಿ ಬೇರೆ ಕಡೆ ಮಾರಾಟವಾದರೆ ಅಂತಹ ಸಿಬ್ಬಂದಿ  ವಿರುದ್ಧ.ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರದೀಪ್ ತಿಳಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments