ಜಗಳೂರು ತಾಲೂಕಿನಾಧ್ಯಂತ ಭೀಕರ ಬರಗಾಲ ನೇಗಿಲಯೋಗಿ ಜೀವ ಹಿಂಡುತ್ತಿದೆ.ಈ ನಡುವೆ ಬೆಸ್ಕಾಂ ಕೆಲವು ದಿನಗಳಿಗೆ 3 ಫೇಸ್ ವಿದ್ಯುತ್ ಸಂಪರ್ಕವನ್ನು ಕಟ್ಟು ಮಾಡಿ ರೈತರಿಗೆ ಶಾಕ್ ನೀಡಿದೆ.
ಸಾಕಷ್ಟು ಬಾರಿ ಬೆಸ್ಕಾಂ ಅಧಿಕಾರಿಗಳು, ತಾಲೂಕಾಡಳಿತಕ್ಕೆ ಮನವಿ ಮಾಡಿದರೂ, ಡೋಂಟ್ ಕೇರ್ ಎಂದಿದ್ದಾರೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗುರುವಾರ ಜಗಳೂರು ಪಟ್ಟಣದಲ್ಲಿ ಮುಖ್ಯ ರಸ್ತೆ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೈತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿತು.
ಇಲ್ಲಿನ ಹಳೇ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರೂಪಿಸಿದ ರೈತರು ಕೆಲ ನಿಮಿಷ ರಸ್ತೆ ತಡೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ನಂತರ ಬೆಸ್ಕಾಂ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಭೀಕರ ಬರ ತಾಂವಾಡುತ್ತಿದೆ. ಬಿತ್ತಿ ಬೆಳೆದ ಬೆಳೆಗಳು ಬಿಸಿಲಿನವತಾಪಕ್ಕೆ ಒಣಗಿವೆ. ಈ ನಡುವೆ ಅಷ್ಟೊ ಇಷ್ಟೊ ನೀರಾವರಿ ಮಾಡಿ ಬದುಕು ಕಟ್ಟಿಕೊಳ್ಳಬೇಕು ಅಂದುಕೊಂಡ ರೈತರಿಗೆ ತ್ರಿಫೇಸ್ ಲೋಡ್ ಶೆಡ್ಡಿಂಗ್ ನಿಂದ ಕಂಗಲಾಗಿದ್ದಾರೆ. ದಿನಕ್ಕೆ ಏಳು ತಾಸು ವಿದ್ಯುತ್ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.(ವರದಿ: ಎಂ.ಡಿ. ಅಬ್ದುಲ್ ರಖೀಬ್ ಜಗಳೂರು.)