ಮೂಡಲಗಿ:ಅ,25-ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ದಸರಾದಲ್ಲಿ ಅಂಬಾ ಭವಾನಿಗೆ ವಿಶೇಷವಾಗಿ ಪ್ರತಿ ವರ್ಷದಂತೆ 10 ದಿನಗಳು ಕಾರ್ಯಕ್ರಮ ನಡೆದುಕೊಂಡು ಬಂದಿರುತ್ತದೆ ಎಂದು ಶರಣ ನಾರಾಯಣ ಗುರುಜಿ ಪೀಠಾಧ್ಯಕ್ಷರು ಶ್ರೀ ಅಂಬಾ ದರ್ಶನ ವಡೇರಹಟ್ಟಿ ಹೇಳಿದ್ದಾರೆ.
ವಿಶೇಷ ಪಾರಾಯಣ,ಮಹಾಭಿಷೇಕ,ಮಹಾಮಹಾಮಾತೆಯ ಭವ್ಯ ಪಲ್ಲಕ್ಕಿ ಉತ್ಸವ,ಬಾಲಕಿಯರಿಗೆ ಉಡಿ ತುಂಬುವುದು ಹಾಗೂ ಭನ್ನಿ ವೃಕ್ಷಕ್ಕೆ (ಮರ) ಪೂಜೆ. ನವರಾತ್ರಿ ಉತ್ಸವ ನಿಮಿತ್ತವಾಗಿ ಸಾಂಪ್ರದಾಯಿಕ ಕಾರ್ಯಕ್ರಮ ಜರುಗುವವು. ಶ್ರೀ ಅಂಬಾಭವಾನಿ ದೇವಸ್ಥಾನಕ್ಕೆ ದಿನ ನಿತ್ಯ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ ಮತ್ತು ಸಾಧಕರಿಗೆ ಸನ್ಮಾನ ಮಾಡುತ್ತಾರೆ.