ಮೂಡಲಗಿ:ಅ,24-ತಾಲೂಕಿನ ಸುಕ್ಷೇತ್ರ ಹುಣಶ್ಯಾಳ (ಪಿಜಿ) ಗ್ರಾಮದ ಶ್ರೀಲಕ್ಷ್ಮೀದೇವಿ ದೇವಸ್ಥಾನದಲ್ಲಿ ದಸರಾ ಹಬ್ಬದ ಪ್ರಯುಕ್ತವಾಗಿ ಹಮ್ಮಿಕೊಂಡ ಸತ್ಸಂಗ ಕಾರ್ಯಕ್ರಮದಲ್ಲಿ ರಾಯಬಾಗ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಹಿಡಕಲ್ಲ ಗ್ರಾಮದಸಾಹಿತಿಗಳಾದ ಟಿ.ಎಸ್.ವಂಟಗೂಡಿ ಅವರನ್ನು ಸತ್ಕರಿಸಿದರು.
ಗ್ರಾಮದ ಮಲ್ಲಯ್ಯ ಸ್ವಾಮೀಜಿ, ಹಿರಿಯರಾದ ಚಂದ್ರಗೌಡ ಪಾಟೀಲ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಮಹಾಂತೇಶ ರೊಡ್ಡನವರ,ತಮ್ಮಣ್ಣ ಬಡವಣಿ,ಪಿಕೆಪಿಎಸ್ ಮುಖ್ಯ ವ್ಯವಸ್ಥಾಪಕ ಮಹಾದೇವ ಕಡಿ,ಮಹಾದೇವ ಹುದಲಿ,ಪಾಂಡು ಪಾಟೀಲ, ದೈಹಿಕ ಶಿಕ್ಷಕರಾದ ಎಲ್ಲ.ಎಸ್.ಪಾಟೀಲ,ಜ್ಞಾನೇಶ್ವರ ಬಂಗೇರ,ರಾಮನಾಯಿಕ ನಾಯಿಕ ಮತ್ತು ಇನ್ನು ಅನೇಕರು ಉಪಸ್ಥಿತರಿದ್ದರು.