ಮೂಡಲಗಿ:ನ,10-ಪಟ್ಟಣದ ತಾಲೂಕಾ ಪಂಚಾಯತ ಕಛೇರಿಗೆ ತಾಲೂಕಿನ ಪಿಡಿಒಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಸಹಕಾರ ಚಳುವಳಿಯ ಮನವಿ ನೀಡಿದರು. ರಾಜ್ಯದ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಬೇಡಿಕೆಗಳಾದ ಪಿಡಿಒ ಅವರ ರಾಜ್ಯ ಮಟ್ಟದ ಜ್ಯೇಷ್ಠತಾ ಪ್ರಕಟಿಸಬೇಕು.ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಮೂಡಲಗಿ ತಾಲೂಕಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಂಘದ ಪದಾಧಿಕಾರಿಗಳು ರಾಜ್ಯ ಸಂಘದ ನಿರ್ದೇಶನದಂತೆ ಅಸಹಾಕರ ಚಳವಳಿಯನ್ನು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಎಸ್.ಚಿನ್ನನವರ ಅವರಿಗೆ ಮನವಿ ನೀಡಿದರು.
ರಾಜ್ಯದ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಏಕಕಾಲದಲ್ಲಿ ‘ಬಿ’ ವೃಂದಕ್ಕೆ ಮೇಲ್ದರ್ಜೆಗೇರಿಸದೆ ಇರುವುದು ಹಾಗೂ ಅರ್ಹ ಪಿಡಿಒ ಅವರಿಗೆ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಬಡ್ತಿ ನೀಡದಿರುವುದು ಬಗ್ಗೆ ಇಲಾಖೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಇನ್ನುವರೆಗೆ ಕಾರ್ಯರೂಪಕ್ಕೆ ಬಂದಿರುವುದಿಲ್ಲ.ಪಿಡಿಒಗಳ ಮೂರು ಪ್ರಮುಖ ಬೇಡಿಕೆಗಳನ್ನು ತೀವ್ರವಾಗಿ ಈಡೇರಿಸಬೇಕು ಎಂದು ಮನವಿಯಲ್ಲಿ ಬೇಡಿಕೆಯಿಟ್ಟಿದ್ದೇವೆ/ ತಿಳಿಸಲಾಗಿದೆ.
ಇಲಾಖೆಯ ತುರ್ತು ಕೆಲಸಗಳನ್ನು ಹೊರತು ಪಡಿಸಿ ಉಳಿದ ಕೆಲಸಗಳಿಗೆ ಅಸಹಕಾರ ಚಳುವಳಿಯ ಮೂಡಲಗಿ ಮೊದಲ ಹಂತದ ಮುಷ್ಕರವಾಗಿದ್ದು,ಮುಂದಿನ ಹಂತವಾಗಿ ಆಯಾ ಜಿಲ್ಲಾ ಪಂಚಾಯತಿ ಕಛೇರಿಗಳ ಮುಂದೆ ನಂತರ ಹಂತವಾಗಿ ಬೆಂಗಳೂರಿನ ಪ್ರೀಡಂ ಪಾರ್ಕದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಇದ್ದನ್ನು ಸಹ ಮನವಿಯಲ್ಲಿ ತಿಲಿಸಿದ್ದೇವೆ.
ತಾಲೂಕಾ ಪಿಡಿಒ ಸಂಘದ ಅಧ್ಯಕ್ಷ ಸತ್ಯಪ್ಪ ಬಬಲಿ,ಪ್ರಧಾನ ಕಾರ್ಯದರ್ಶಿ ಶ್ರೀಶೈಲ ತಡಸನವರ,ಗಂಗಾಧರ ಮಲ್ಹಾರಿ,ಶಿವಾನಂದ ಗುಡಸಿ,ಹಣಮಂತ ಬಸಳಿಗುಂದಿ,ಅಂಜನಾ ಗಚ್ಚಿ,ಉದಯಕುಮಾರ ಬೆಳ್ಳುಂಡಗಿ,ರವಿ ಮರೆನ್ನವರ,ಅನುರಧಾ ಭಜೇಂತ್ರಿ ಮತ್ತು ಪುಂಡಲೀಕ ಬಾರ್ಕಿ ಉಪಸ್ಥಿತರಿದ್ದರು.
ತುರ್ತು ಕೆಲಸಗಳನ್ನು ಹೊರತು ಪಡಿಸಿ ಉಳಿದ ಕೆಲಸಗಳಿಗೆ ಪಿ.ಡಿ.ಓ ಗಳ ಅಸಹಕಾರ ಚಳುವಳಿ
RELATED ARTICLES

