Wednesday, August 20, 2025
Homeರಾಜಕೀಯದಾವಣಗೆರೆಯಿಂದ  ಲೋಕಸಭೆಗೆ "ಲಾಭಿ ಸೂತ್ರ ಅನುಸರಿಸದ" ವಿನಯ್ ಕುಮಾರ್ ಸೂಕ್ತ ಅಭ್ಯರ್ಥಿ ಮತದಾರರ ಅಪೇಕ್ಷೆಗೆ ವರಿಷ್ಠರು...

ದಾವಣಗೆರೆಯಿಂದ  ಲೋಕಸಭೆಗೆ “ಲಾಭಿ ಸೂತ್ರ ಅನುಸರಿಸದ” ವಿನಯ್ ಕುಮಾರ್ ಸೂಕ್ತ ಅಭ್ಯರ್ಥಿ ಮತದಾರರ ಅಪೇಕ್ಷೆಗೆ ವರಿಷ್ಠರು ಗೌರವಿಸಬೇಕು:ಆಪ್ತರ ಕೂಗು

ದಾವಣಗೆರೆ:ದಾವಣಗೆರೆ ಲೋಕಸಭೆಯಲ್ಲಿ ಸತತ ಮೂರುಬಾರಿ ಕಾಂಗ್ರೆಸ್ ಅಭ್ಯರ್ಥಿ ಚನ್ನಯ್ಯ ಒಡೆಯರ್ ರವರ ಗೆಲುವು ಗಮನಿಸಿದಾಗ ದಾವಣಗೆರೆ ಲೋಕಸಭೆ ಕ್ಷೇತ್ರವು ಅಹಿಂದ ವರ್ಗದ ಭದ್ರಕೋಟೆ ಎಂಬುವುದರಲ್ಲಿ ಎರಡು ಮಾತಿಲ್ಲಾ.
ತದನಂತರ ರಾಜಕೀಯ ತಂತ್ರ,ಜಾತಿಗಳ ಒಳಲಾಟ,ಸಂಭಂದಗಳ ಸುಳಿಯಲ್ಲಿ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟು ಸ್ವಾರ್ಥಕ್ಕಾಗಿ ಸೆಣಸಾಡಿ ಕಾಣದ ಕೈಗಳ ಒಳಚಳಕಕ್ಕೆ ಬಲಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲವು ಹಲವಾರು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಮುಖಭಂಗ ಅನುಭವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ದಾವಣಗೆರೆ ಲೋಕ ಸಭೆ ಚುನಾವಣೆಯಲ್ಲಿ ಶಾಮನೂರು ಕುಟಂಬವೂ ಕೂಡಾ ಸೋಲುಂಡು ಸುಸ್ತಾಗಿದ್ದರ ಪರಿನಾಮದಿಂದಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಅಹಿಂದ ವರ್ಗಕ್ಕೆ ಕಾಂಗ್ರೆಸ್ ಪಕ್ಷ ಕೊನೆಗಳಿಗೆಯಲ್ಲಿ ಟಿಕೇಟ್ ನೀಡಿ ಕೈಚಲ್ಲಿ ಕುಳಿತರೂ ಸಹ ಅಲ್ಪ ಸಮಯದಲ್ಲಿ ಅಭ್ಯರ್ಥಿಯನ್ನೂ ಲೆಕ್ಕಿಸದೆ ಕಾಂಗ್ರೆಸ್ ಕಾರ್ಯಕರ್ತರು ತನು,ಮನ,ಧನ,ಶ್ರಮಗಳಿಂದ ಹೋರಾಡಿ ಹೆಚ್ಚು ಮತ ಗಳಿಸುವಲ್ಲಿ ಯಶಸ್ವಿಯಾಗಿ ಗೆಲುವಿನ ಹತ್ತಿರಕ್ಕೆ ಸಮಿಪಿಸಿತು. ಅದನ್ನೇ ಹೈಕಮಾಂಡ್ ಟಿಕೇಟ್ ನೀಡುವಲ್ಲಿ ವಿಳಂಬನೀತಿ ಅನುಸರಿಸದೆ ಸೂಕ್ತಸಮಯದಲ್ಲಿ ಟಿಕೇಟ್ ನೀಡಿದ್ದರೆ ಕಾಂಗ್ರೆಸ್ ಗೆಲುವು ಖಂಡಿತ ಇತ್ತು. ಅದು ಮಿಂಚಿಹೋದ ಕಾಲ ಚಿಂತಿಸಿ ಫಲವಿಲ್ಲಾ. ಈಗ ಪ್ರಸ್ತುತ 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಸ್ಪರ್ಧೆಬಯಸಿರುವ ಹಲವಾರು ಉಮೇದುವಾರರು ಅತ್ಯಂತ ಉತ್ತಮರ ಹೆಸರುಗಳು ಕೇಳಿಬರುತ್ತಿವೆ. ಅವರಲ್ಲಿ ವಿನಯ್ ಕುಮಾರ್ ಜಿ.ಬಿ. ಯವರ ಹೆಸರು ಮತದಾರರ ಮನತಟ್ಟುವಲ್ಲಿ ಪ್ರಮುಖವಾಗಿದೆ ಎಂದೇ ಹೇಳ ಬೇಕಾಗುತ್ತದೆ.
ಕಾರಣ ಜಿಬಿ.ವಿನಯ್ ಕುಮಾರ್ ಅತ್ಯಂತ ಕ್ರಿಯಾಶೀಲ,ಸರಳ,ವಿದ್ಯಾವಂತ,ಕಾನೂನು ಸಂವಿಧಾನಗಳ ಕುರಿತು ಹೆಚ್ಚು ತಿಳಿದುಕೊಂಡಿರುವುದು ಒಂದು ಕಡೆಯಾದರೆ ಅಷ್ಟೇ ಜನಹಿತ ಬಯಸುವ ಕಳಕಳಿಯನ್ನಿಟ್ಟುಕೊಂಡು ತನ್ನ ಬಾಲ್ಯದ ಕಷ್ಟದ ದಿನಗಳು ಮುಂದಿನ ಪೀಳಿಗೆಗಳು ಯಾವುದೇ ಸಮುದಾಯದ ಬಡವರು ಅನುಭವಿಸಬಾರದೆಂಬ ಕಳಕಳಿ ಹೊಂದಿರುವ ವ್ಯಕ್ತಿ. ಮತ್ತು ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿಯು ಕೇವಲ ಉಪಜೀವನಕ್ಕಾಗಿ ನೌಕರಿಮಾಡುವಷ್ಟಕ್ಕೇ ಸೀಮಿತ ವಾಗಿರದೇ ಉನ್ನತ ಹುದ್ದೆಯನ್ನು ಅಲಂಕರಿಸಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವ ಅವಕಾಶಪಡೆದು ಭಾರತರತ್ನ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನಾತ್ಮಕವಾದ ಕಾರ್ಯ ನಿರ್ವಹಿಸಿ ಸಾಮಾನ್ಯ ದೀನದಲಿತ ಬಡ ಸಮುದಾಯಗಳಿಗೆ ಶೋಷಿತರ ಧ್ವಿನಿಯಾಗಿ ಸಧೃಡ ನಿರ್ಧಾರದಿಂದ ಕಾರ್ಯನಿರ್ವಹಿಸುವಂಥ ಐ ಎ ಎಸ್.ನಂತ ಹುದ್ದೆಗಳಲ್ಲಿ ಬೆಳೆಯಲೆಂಬ ಮಹಾದಾಶೆಯನ್ನು ಹೊಂದಿ ಇವತ್ತಿನ ಪೀಳಿಗೆಗಾಗಿ ಇನ್ ಸೈಟ್ಸ್ ಐಎಎಸ್.ಎಂಬ ಸಂಸ್ಥೆಯನ್ನು ತೆರೆದು ಇವತ್ತು ನೂರಾರು ವಿದ್ಯಾರ್ಥಿಗಳು ಐಎಎಸ್ ನಂಥ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವಂಥಾ ಶಕ್ತಿಯನ್ನು ನೀಡಿದ್ದಾರೆ. ಅದೇ ರೀತಿ ಮುಂದಿನ ಯುವಕರೂ ಹೆಚ್ಚು ಹೆಚ್ಚಾಗಿ ದೇಶದ ಉದ್ದಗಲಕ್ಕೂ ಕನ್ನಡಿಗರು ಉನ್ನತ ಹುದ್ದೆಗಳಲ್ಲಿರಬೇಕೆಂಬ ಆಶಾಭಾವನೆ ಹೊಂದಿದ್ದಾರೆ. ಅಷ್ಟೆ ಅಲ್ಲಾ ಜನಹಿತಕ್ಕಾಗಿ,ಕ್ಷೇತ್ರದ ಅಭಿವೃದ್ದಿಗಾಗಿ, ಪ್ರಗತಿಪ ವಿಚಾರಧಾರೆಗಳ ಕುರಿತು ಅನೇಕ ಕನಸ್ಸುಗಳನ್ನು ಹೊತ್ತು ರಾಜಕೀಯ ಪ್ರವೇಶ ಮಾಡಿದ್ದಾರೆ. ಅವರಿಗೆ ಹಣ ಅಧಿಕಾರಕಿಂತ ಹೆಚ್ಚಾಗಿ ಸಧೃಡ ಸುಂದರ ಸಮಾಜನಿರ್ಮಾಣ ಮಾಡಿ ಸ್ವಾತಂತ್ರ್ಯ ಹೋರಾಟಗಾರರು ಕನಸು ಕಂಡ ಸೌಭಾಗ್ಯ ಭಾರತ ನಿರ್ಮಾಣ ಮಾಡಿ ಸರ್ವರಿಗೂ ಸಮಬಾಳು ಸಮಪಾಲು ಎಂಬ ದಿಟ್ಟ ನಿಲುವು ಹೊಂದಿರುವ ಅಹಿಂದ ವರ್ಗದ ಆಶಾ ಕಿರಣ ವಾಗಿದ್ದಾರೆ, ಯುವಜನರ ಶಕ್ತಿಯಾಗಿದ್ದಾರೆ,ಬಡವ ಬಲ್ಲಿದ ದೀನ ದಲಿತ ಶೋಷಿತ ಸಮುದಾಯಗಳ ಚಿಂತೆಮರೆಸುವ ಸಂಚಲನಿರ್ಮಿಸಿ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಗಟ್ಟಿತನ ಬೆಳಸಿಕೊಂಡಿದ್ದಾರೆ ಅಷ್ಟೆ ಅಲ್ಲಾ ರಾಜಕೀಯಕಿಂತ ಮಿಗಿಲಾಗಿ ಈ ಕ್ಷೇತ್ರದ ಶಾಸ್ವತ ಸಕ್ರೀಯ ಸಮಾಜ ಸುಧಾರಣಾ ಸೇವೆಗಾಗಿ ಸದಾ ಮೀಸಲಾಗಿದ್ದಾರೆ.ಚುನಾವಣೆ ಅವಕಾಶವಷ್ಟೆ ಆಷೆ ಇದೆ ಆದರೆ ಚುನಾವಣೆ ಚಟ ಕ್ಕಾಗಿ ಸಂದರ್ಭಕ್ಕಾಗಿ ಬಂದಿಲ್ಲಾ. ಚುನಾವಣೆ ಇರಲಿ ಬಿಡಲಿ ಸ್ಪರ್ಧೆ ಮಾಡಲಿ ಬಿಡಲಿ ಅದು ನಂತರದ ಮಾತು. ಸದಾ ಕ್ಷೇತ್ರದ ಜನರ ಮಧ್ಯದಲ್ಲಿದ್ದು ತನ್ನ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುಲು ಸಂಪೂರ್ಣ ಸಿದ್ದರಾಗಿಯೇ ಬಂದಿದ್ದಾರೆ. ಹೀಗಾಗಿ ಈ ಗಾಗಲೇ ಕ್ಷೇತ್ರದ ಪ್ರತಿ ಗ್ರಾಮ ಮಟ್ಟದ ಎಲ್ಲ ಜಾತಿವರ್ಗದ ಜನರ ಮನತಲುಪವಲ್ಲಿ ಯಶಸ್ಸು ಕಂಡಿದ್ದಾರೆ.ಮತದಾರರೆಂಬ ದೇವರುಗಳು ವರನೀಡುತಿದ್ದಾರೆ ಆದರೆ ಹೈಕಮಾಂಡ್ ಎಂಬ ಪೂಜಾರಿಗಳು ಮನಸ್ಸು ಮಾಡಬೇಕಷ್ಟೆ.
ಶ್ರೀ ಜಿಬಿ.ವಿನಯ್ ಕುಮಾರ್ರವರು ಪ್ರತಿನಿತ್ಯ ಪ್ರತಿ ಗ್ರಾಮದಲ್ಲಿ ಸಂಚಲನಮೂಡಿಸಿದ್ದಾರೆ.ಅದಕ್ಕೆ ಬಹುದೊಡ್ಡ ಕಾರಣ ವಿದೆ ಅವರು ಟಿಕೇಟ್ ಪಡೆಯಬೇಕೆಂಬ ಏಕೈಕ ಉದ್ದೇಶ ವಿದ್ದಿದ್ದರೆ ಅವರಿಗೆ ಇರುವ ವರ್ಚಸ್ಸು ಅಧಿಕಾರಿ ರಾಜಕಾರಣಿಗಳ ಒಡನಾಟ ಕಡಿಮೆ ಏನಿಲ್ಲಾ ರಾಜ್ಯದ ಹೈಕಾಂಡ್ ನಿಂದ ಹಿಡಿದು ದೇಹಲಿಯ ಹೈಕಮಾಂಡ್ ವರೆಗೂ ಅವರ ಆಪ್ತವಲಯದವರು ಅಧಿಕಾರಮಟ್ಟದಲ್ಲಿ ಮತ್ತು ರಾಜಕಾರಣಿಗಳಮಟ್ಟದಲ್ಲೂ ಸಾಕಷ್ಟು ಜನರಿದ್ದಾರೆ ಆದರೆ ಅವರು ಹಿಂಬಾಗಿಲಿನಿಂದ ಲಾಭಿಸೂತ್ರದಿಂದ ಬಂದು ಸ್ವಾರ್ಥ ಅಧಿಕ್ಕಾರಕ್ಕಾಗಿ ರಾಜಕೀಯಕ್ಕೆ ಬರುವ ಇರಾದೆ ಅವರಿಗಿಲ್ಲಾ.ಅವರು ಪ್ರತಿಗ್ರಾಮದ ಪ್ರತಿ ಮನೆಯ ನೈಜ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅವರೊಂದಿಗೆ ಬೆರೆತು ಅವರ ಕಷ್ಟ ಕಾರ್ಪಣ್ಯಗಳಿಗೆ ಮುಕ್ತಿಹಾಕುವ ಮಾರ್ಗೋಪಾಯಗಳನ್ನು ಕಂಡು ತನ್ನ ಅಧಿಕಾರಾವಧಿಯಲ್ಲಿ ಯಾವ ಮಧ್ಯಸ್ತಿಕೆದಾರಣ ವಸೂಲಿ ಇಲ್ಲದೆ ನೇರವಾಗಿ ಪರಿಹರಿಸಿ ನ್ಯಾಯೊದಗಿಸಿ ಕೊಡು ನಿಸ್ವಾರ್ಥ ಸಮಾಜಸೇವೆಗೈದು ಅಧಿಕಾರ ಮಾತನಾಡಬಾರದು ತಾನು ಮಾಡಿದ ಸಮಾಜಪರ ಕೆಲಸಗಳು ಮಾತನಾಡಿ ಭಾರತದ ಲೋಕಸಭೆಯಲ್ಲಿ ದಾವಣಗೆರೆ ಕ್ಷೇತ್ರದ ಹೆಸರು ಮಾದರಿ ಯಾಗಬೇಕೆಂಬ ಯದ್ದೇಶ ಹೊಂದಿದ್ದಾರೆ. ಎಲ್ಲೋ ಕುಳಿತು ಯಾರೊಂದಿಗೋ ಲಾಭಿ ನಡೆಸಿ ಇನ್ನಾರಿಗೋ ಹಣನೀಡಿ ಮುಖಕ್ಕೆ ಮುಖವಾಡಧರಿಸಿ ಚುನಾವಣೆಯ ಸಂದರ್ಭದಲ್ಲಿ ಮಿಂಚಿ ಮಾಯವಾಗಬಹುದಾದ ಮನಸ್ಸು ವಿನಯ್ ಕುಮಾರದ್ದು ಅಲ್ಲಾ.ಎಂಬುದನ್ನು ಈಗಾಗಲೇ ಈ ಕ್ಷೇತ್ರದ ಮತದಾರರು ಕಂಡುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments