ದಾವಣಗೆರೆ ನ.೧೬:ನಂದಿಬಸಪ್ಪನ ವಿಶಾಲ ಅಂಗಳದಲ್ಲಿ ಸರಳ ಸಜ್ಜನಿಕೆಯ
ತೆರೆದ ರಂಗ ವೇದಿಕೆ.. ಅತ್ತಿಗೆರೆಯ ರೈತಾಪಿ ವರ್ಗ ದೈನಂದಿನ ತೋಟ ಗದ್ದೆ ದನಕರುಗಳ ಚಾಕ್ರಿ ಮಾಡಿ
ದಿಗ್ಗನೇಯ ಬೆಳಗಿದ ಸ್ಪಾಟ್ ಲೈಟ್ ಗಳಲ್ಲಿ ಸ್ವಾತಂತ್ರ್ಯ ಪೂರ್ವದ ಮುಸ್ಲಿಂ ಕುಟುಂಬದ
ಬಡ ಬಡೇಮಿಯ ಐಕ್ಯತೆ ಮದುವೆಗೆ ಬಂದ ಮೂರು ಅರೆಯದ ಹೆಣ್ಣು ಮಕ್ಕಳ ತಾಕಾಲಾಟ…ಟೀ ಮಾರುವ, ಪೇಪರ್ ಯೂಸುಫ್, ಕಣ್ ಕಾಣದ ಕುರುಡ, ಬಡೇಮಿಯ ಪತ್ನಿ ಮುನೀರ್ ಜಾನ್ ಳ ಹೆಣ್ಣು ಮಕ್ಕಳ ಸೆರಗಲ್ಲಿ ಕಟ್ಟಿಕೊಂಡು
ಯಾರು ಮನೆಗೆ ನಿಖ ಮಾಡಿ ಕೈತೊಳೆದು ಹಗರರಾಗುವ ಧಆವಂತಗಳ ನಡುವೆ ಸಡನ್ ಆಗಿ ದೇಶ ವಿಭಜನೆ ಹುನ್ನಾರ
ಇಡೀ ಈ ನೆಲದಲ್ಲಿ ಕಟ್ಟಿಕೊಂಡ ಬದುಕನ್ನು ಬಿಟ್ಟು
ಪ್ರತೈಕ ದೇಶಕ್ಕೆ ವಲಸೆ ಹೋಗುವ ಸ್ಥಿತಿ ನಡುವೆ ಮೂರು ಮಕ್ಕಳ ಅಂತರ್ಜಾತಿ.
ಮದುವೆ ಗಳನ್ನು ಸಹಿಸಿ ನಮ್ ದೇಶ ನಮ್ ಧರ್ಮ, ಬೇರೆ ದೇಶ ಬೇರೆ ಧರ್ಮ ತಾನು ಉಸಿರು ನೀರು ಅನ್ನ ತಿಂದು ಬೆಳೆದ
ಮನೆಯನ್ನು ತೊರೆದು ಹೋಗುವ ಸಂದರ್ಭದಲ್ಲಿ
ನಮ್ಮ ಅಂಗಳದ ಚಂದ್ರ ನಮ್ಮ ಕೈಬೀಡೊಲ್ಲ ಎಂಬ ನಂಬಿಕೆ.
ಗಡಿ ದೇಶ ಗಳ ದಾಟಿದರೂ ಪ್ರೀತಿ ಪ್ರೇಮ ಒಂದೇ.. ಜಾತಿ ಜಾತಿಗಳ ನಡುವೆ… ಮನಸು ಮನಸ್ಸುಗಳಿಂದ ಕಲೆತಾಗ ಯಾವ ಧರ್ಮ ,ಕಟ್ಟುಪಾಡುಗಳು ಅಡ್ಡಿಯಾಗದು.ಭಾವೈಕ್ಯತೇ ಭಾತೃತ್ವ ಮಾನವರೆಲ್ಲಾ ಒಂದೇ ಎಂಬ ಸಂದೇಶ ಸಾರುವ
ಜತೇಗಿರುವನು ಚಂದಿರ
ಅಧ್ಬುತ ಭಾವಾರ್ಥ ಸಂಭಾಷಣೆ ಹಾಡು ಗಳ ಮುಖೇನ ಹಳ್ಳಿ ಯಾದರೂ
ವಿಧ್ವಾವಂತ ಹಿರಿಯ, ರೈತರ ಯುವಜನರಲ್ಲಿ ಜಾತಿ ಎಲ್ಲೆ ಮೀರಿ ವಿಭಿನ್ನ ಭಾವೈಕ್ಯತೆಯ
ಸಂದೇಶ ಪ್ರಸ್ತುತ ಪಡಿಸಿದ ಸಾಣೇಹಳ್ಳಿ ಶಿವಸಂಚಾರ ತಂಡ
ನಿಜಕ್ಕೂ ಶ್ಲಾಘನೀಯ ಕಾರ್ಯ.
ಹೆಸರಾಂತ ಚಿತ್ರ ಸಾಹಿತಿ ಜಯಂತ್ ಕಾಯ್ಕಿಣಿ ಕೃತಿ ಆಧಾರಿತ ಹುಲುಗಪ್ಪ ಕಟ್ಟಿಮನಿ ನಿರ್ದೇಶನದಲ್ಲಿ ಮೂಡಿ ಬಂದ ನಾಟಕ ವಿಭಿನ್ನ ರೀತಿಯ ನಮ್ಮ ಹಳ್ಳಿಯ ಬದುಕಿನ
ದೃಶ್ಯ ಗಳ ಕಟ್ಟಿಕೊಟ್ಟ ಭಾಸ
ನಮ್ಮ ಜಿಲ್ಲೆಯ ಸುತ್ತ ಮುತ್ತಲಿನ ಹಳ್ಳಿಗಳ ಯುವ ಉತ್ಸಾಹಿ ತರುಣ ತರುಣಿಯರ
ಕಲಾವಿದ ತಂಡ ನುರಿತ ತಾಲೀಮು ಸಹಜ ಶೈಲಿ ಸಂಭಾಷಣೆ… ಮುಸ್ಲಿಂ ಸಮುದಾಯ ಥೇಟ್ ನುಡಿ ಭಾಷೆ ಡೈಲಾಗ್ ಡೆಲಿವರಿ ಅಧ್ಬುತ…
ಜಾತಿ ಮತ ಧರ್ಮ ಭಾಷೆ ಸಂಸ್ಕೃತಿಯ ವೈವಿಧ್ಯ ಮೀರಿ
ಮನುಷ್ಯ ಸಂಭಂದಗಳೇ ಮುಖ್ಯ ಅಲ್ಲಿ ಯಾವತ್ತೂ ಚಂದಿರ ಜತೇಗಿರುವನು
ಎಂದು ನೋಡುಗರ ಮನದಲ್ಲಿ ಮೂಡಿಸಿದ ಸಂಚಾರ ಕಲಾವಿದರ ಅಭಿನಯ ನಿಜಕ್ಕೂ ಪ್ರಶಂಮನರ್ಹ.
-ಪುರಂದರ್ ಲೋಕಿಕೆರೆ.