ದಾವಣಗೆರೆ – ಇದೇ ನವಂಬರ್ 18 ಶನಿವಾರದಂದು ರಾಷ್ಟ್ರೀಯ ಮಹಿಳಾ ಒಕ್ಕೂಟದ NFIW ದಾವಣಗೆರೆ ಜಿಲ್ಲಾ ಸಮ್ಮೇಳನ ನಡೆಯಲಿದೆ ಎಂದು NFIW ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್ ಎಸ್ ಮಲ್ಲಮ್ಮ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 11:30ಕ್ಕೆ ದಾವಣಗೆರೆ ಅಶೋಕ ರಸ್ತೆಯಲ್ಲಿರುವ ಕಾಂ ಪಂಪಾಪತಿ ಭವನದಲ್ಲಿ ನಡೆಯುವ NFIW ಮಹಿಳಾ ಜಿಲ್ಲಾ ಸಮ್ಮೇಳನವನ್ನು ರಾಜ್ಯಾಧ್ಯಕ್ಷರಾದ ಕಾಂ ಎ. ಜ್ಯೋತಿ ಉದ್ಘಾಟಿಸುವರು.
NFIW ಜಿಲ್ಲಾ ಮುಖಂಡರುಗಳಾದ ಎಂ ಬಿ ಶಾರದಮ್ಮ, ವಿಶಾಲಾಕ್ಷಿ, ಗಾಯತ್ರಿ, ಉಮಾ, ಸರೋಜಾ ರುದ್ರಮ್ಮ ಜ್ಯೋತಿಲಕ್ಷ್ಮಿ , ವಿಮಲಾಕ್ಷಿ, ಚೆನ್ನಮ್ಮ,ಯಶೋಧ ,ಅಕ್ಕಮ್ಮ ಸೇರಿದಂತೆ ಇತರೆ ಮುಖಂಡರು ಭಾಗವಹಿಸುವರು. ಸಿಪಿಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಆವರೆಗೆರೆ ಚಂದ್ರು , ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್ ಜಿ ಉಮೇಶ್ ಹಿರಿಯ ಕಾರ್ಮಿಕ ಮುಖಂಡರಾದ ಕಾಂ ಆನಂದರಾಜ್ ಅಥಿತಿಗಳಾಗಿ ಆಗಮಿಸಿ ಮಹಿಳಾ ಜಿಲ್ಲಾ ಸಮ್ಮೇಳನಕ್ಕೆ ಶುಭ ಕೋರುವರು.ಇಪ್ಟಾ ಸಂಗಾತಿಗಳು ಜಾಗೃತಿ ಗೀತೆಗಳನ್ನು ಹಾಡುವುದರ ಮೂಲಕ ಸಮ್ಮೇಳನಕ್ಕೆ ಶುಭ ಕೋರುವರು.
ಸಮ್ಮೇಳನದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದ ಬಗ್ಗೆ , ದುಡಿಯುವ ಮಹಿಳೆಯರ ಸಮಸ್ಯೆಗಳ ಬಗ್ಗೆ ಮತ್ತು ಕುಟುಂಬಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ಬಗ್ಗೆ ಮತ್ತಿತರ ಸಮಸ್ಯೆಗಳ ಕುರಿತು ದೀರ್ಘವಾಗಿ ಚರ್ಚಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ನವೆಂಬರ್ 18 ಶನಿವಾರ NFIW ಮಹಿಳೆಯರ ದಾವಣಗೆರೆ ಜಿಲ್ಲಾ ಸಮ್ಮೇಳನ.
RELATED ARTICLES