ಮೂಡಲಗಿ:ನ,18-ತಾಲೂಕಿನ ಕುಲಗೋಡ ಗ್ರಾಮದ ಶ್ರೀ ಕರೆಮ್ಮದೇವಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾದರ ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಸಬಲ ಮತ್ತು ಬಲಿಷ್ಟ ಶಿಕ್ಷಿತ ಸಮಾಜವಾಗಿ ಬೆಳೆಯಬೇಕು.ಪಾಲಕರು ಶಿಕ್ಷಣ ಕಲಿಸುವ ಸಮಯದಲ್ಲಿ ಮಕ್ಕಳನ್ನು ಕೂಲಿಗೆ ಕಳಿಸಬೇಡಿ. ಕುಲಗೋಡ ಗ್ರಾಮದಲ್ಲಿ ಜಾತಿ ಬೇದಭಾವವಿಲ್ಲದೇ ಸರ್ವರೂ ಸೇರಿ ದೇವಸ್ಥಾನಗಳ ಅಭಿವೃದ್ಧಿ ಮಾಡುತ್ತಿರುವುದು ಸಂತಸದ ವಿಷಯ.ಈ ಪರಂಪರೆ ಸದಾಕಾಲ ಹೀಗೆಯೇ ಇರಲಿ ಎಂದು ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮಿಗಳು ಹೇಳಿದರು.
ಆರ್.ಎಸ್.ಎಸ್.ಮುಖಂಡ ಅರವಿಂದ ದೇಶಪಾಂಡೆ, ಜಿಲ್ಲಾ ಪಂಚಾಯತ ಸದಸ್ಯರಾದ ಗೋವಿಂದ ಕೊಪ್ಪದ ಇವರುಗಳು ಮಾದರ ಚನ್ನಯ್ಯನ ಬಗ್ಗೆ ಮಾತನಾಡಿದರು.
ಮಾದರ ಚನ್ನಯ್ಯ ಗ್ರಾಮೀಣ ಅಭಿವೃದ್ಧಿ ಸಂಘದಿಂದ ಡಾllಮಹೇಶ ಕಂಕಣವಾಡಿ,ಜಾನಪದ ಗಾಯಕ ಪರಸು ಕೋಲೂರು,ಇವರಿಗೆ ಜನಪದ ಗಾನ ಕೋಗಿಲೆ ಪ್ರಶಸ್ತಿ ನೀಡಲಾಯಿತು.
ಟಿ ಎ ಪಿ ಸಿ ಎಮ್ ಎಸ್ ಅಧ್ಯಕ್ಷ ಅಶೋಕ ನಾಯಿಕ,ತಾಲೂಕಾ ಪಂಚಾಯತ ಮಾಜಿ ಸದಸ್ಯರಾದ ಸುಭಾಸ ವಂಟಗೂಡಿ,ಸುರೇಶ ಐಹೊಳೆ,ಸತ್ತೆಪ್ಪ ಸೋಮಕ್ಕನವರ,ಸತೀಶ ವಂಟಗೂಡಿ, ಅಶೋಕ ಉದ್ದಪ್ಪನವರ ಇನ್ನು ಅನೇಕರು ಉಪಸ್ಥಿತರಿದ್ದರು.
ರಮೇಶ ಬುದ್ನಿ ನಿರೂಪಿಸಿದರು, ಅನಿಲ ಹಾದಿಮನಿ ಸ್ವಾಗತಿಸಿದರು ಮತ್ತು ಬಸವರಾಜ ಬಿಲಕುಂದಿ ವಂದಿಸಿದರು.