Saturday, December 21, 2024
Homeಸಂಸ್ಕೃತಿತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಘಟಕ ಉದ್ಘಾಟನೆ

ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಘಟಕ ಉದ್ಘಾಟನೆ

ಮೂಡಲಗಿ:ನ, 21-ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಉದ್ಘಾಟನೆ ನಡೆಯಿತು.
ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ಆರ್.ಸೋನವಾಲಕರ ನಾಡದೇವಿಗೆ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಲ್.ಎಸ್.ಶಾಸ್ತೀ ಅವರು ಮೂಡಲಗಿ ತಾಲೂಕಾ ಅಧ್ಯಕ್ಷರಾದ ಚಿದಾನಂದ ಹೂಗಾರ ಅವರಿಗೆ ಸನ್ಮಾನಿಸಿ ಶುಭ ಕೋರಿದರು.
ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಈಗ 25 ನೆಯ ವರ್ಷದಲ್ಲಿ ಮುನ್ನಡೆದಿದ್ದು ಸಂಸ್ಥೆಯ ಬೆಳ್ಳಿ ಹಬ್ಬದ ನೆನಪಿನಲ್ಲಿ ಪ್ರತಿ ವರ್ಷ ಉತ್ತಮ ತಾಲೂಕಾ ಘಟಕಕ್ಕೆ ಪ್ರಶಸ್ತಿ ನೀಡಿ ಪ್ರೊತ್ಸಾಹಿಸಲಾಗುವುದು ಎಂದು ಚುಸಾಪ ಜಿಲ್ಲಾಧ್ಯಕ್ಷರಾದ ಎಲ್.ಎಸ್.ಶಾಸ್ತೀ ಅವರು ಹೇಳಿದರು.
ಮೂಡಲಗಿ ತಾಲೂಕಾ ಘಟಕದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಬೆಳ್ಳಿಹಬ್ಬವನ್ನು ಎರಡು ದಿನಗಳ ಕಾಲ ರಾಜ್ಯ ಮಟ್ಟದಲ್ಲಿ ಆಚರಿಸಲಾಗುವುದು, ಸ್ಮರಣ ಸಂಚಿಕೆ ಮತ್ತು ಪ್ರಾತಿನಿಧಿಕ ಜಿಲ್ಲಾ ಚುಟುಕು ಸಂಕಲನ ಹೊರತರಲಾಗುವುದೆಂದು ತಿಳಿಸಿದರು.
ಹೊಸದಾಗಿ ಚುಟುಕು ಬರೆಯುವವರಿಗಾಗಿ ಚುಟುಕು ತರಬೇತಿ ಕಾವ್ಯ ಕಮ್ಮಟವನ್ನು ಏರಪಡಿಸಿ ಕಾವ್ಯದ ಗುಣಲಕ್ಷಣಗಳನ್ನು ತಿಳಿಸುವ ಕೆಲಸ ಆಗಬೇಕು.ಸಾಹಿತ್ಯದಲ್ಲಿ ಜಾತಿ ಧರ್ಮಗಳನ್ನು ತರದೆ ಎಲ್ಲರೂ ಒಂದಾಗಿ ಸಮಾಜಹಿತವನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ರಚನೆ ಮಾಡಬೇಕೆಂದು ಚುಸಾಪ ಜಿಲ್ಲಾಧ್ಯಕ್ಷರಾದ ಎಲ್.ಎಸ್.ಶಾಸ್ತ್ರೀ ಹೇಳಿದರು.
ಜಿಲ್ಲಾ ಚುಸಾಪ ಸಮಿತಿಯ ನಿರ್ದೇಶನದಂತೆ ಮತ್ತು ತಾಲೂಕಾ ಘಟಕವು ನಿರಂತರ ಚಟುವಟಿಕೆಗಳನ್ನು ನಡೆಸುವುದಾಗಿ ಎಂದು ಮೂಡಲಗಿ ತಾಲೂಕಾ ಘಟಕದ ನೂತನ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಿದಾನಂದ ಹೂಗಾರ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷರಾದ ಡಾllಸಿ.ಕೆ.ಜೋರಾಪುರ,ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ,ಆನಂದ ಪುರಾಣಿಕ,ಪ್ರೊ-ಸಂಗಮೇಶ ಗುಜಗೋಂಡ,ಕಸಾಪ ಮೂಡಲಗಿ ತಾಲೂಕಾಧ್ಯಕ್ಷರಾದ ಡಾllಸಂಜಯ ಶಿಂಧಿಹಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ ಮನ್ನಿಕೇರಿ, ಡಾllಮಹಾದೇವ ಜಿಡ್ಡಿಮನಿ,ಸಿದ್ರ ದ್ಯಾಗಾನಟ್ಟಿ,ಗೋಕಾಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಯಾನಂದ ಮಾದರ,ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಇನ್ನು ಅನೇಕರು ಉಪಸ್ಥಿತರಿದ್ದರು.
ಶ್ರೀಮತಿ ಪೂರ್ಣಿಮಾ ಯಲಿಗಾರ ಅವರ ರಚಿಸಿದ “ನಿರ್ಮಲ ಕಾವ್ಯ”ಕವನ ಸಂಕಲನ ಬಿಡುಗಡೆ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments