ಜಗಳೂರು:ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಜಗಳೂರು ಹಾಗೂ ಸರ್ಕಾರಿ ಪ್ರೌಢಶಾಲೆ ತಮಲೇಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ತಮಲೆಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯ ಕ್ರಮದಲ್ಲಿ “ಸರ್ವಜ್ಞ” ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಬದುಕಿಗೆ ಬೇಕಾದ ಅಕ್ಷರ ಜ್ಞಾನ, ಇಂದ್ರಿಯ, ಪಂಚೇಂದ್ರಿಯಗಳ ಕುರಿತು ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಸಮಾಜವನ್ನು ಶುದ್ಧಗೊಳಿಸುವ, ತಿದ್ದುವ ಕೆಲಸ ಮಾಡಿದ್ದಾರೆ.
ನಾವು ಪಡೆಯುವ ಶಿಕ್ಷಣ ನಮ್ಮನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ನಮಗೆ ಸರ್ವಜ್ಞನ ತ್ರಿಪದಿಗಳು ಸಹಕಾರಿಯಾಗಬಲ್ಲವು.
ಹಾಗಾಗಿ ವಿದ್ಯಾರ್ಥಿಗಳಲ್ಲಿ ವಿದ್ಯಾವಂತರಾಗಬೇಕೆಂಬ ಹಂಬಲಕ್ಕೆ ಸರ್ವಜ್ಞನ ತ್ರಿಪದಿಗಳು ದಾರಿ ದೀಪವಾಗಬಲ್ಲವು ಎಂದು ನುಡಿದರು.
ಶಿಕ್ಷಕರಾದ ಮಂಜಪ್ಪನವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಶಾಲಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮದ ಉಪನ್ಯಾಸವನ್ನು ಶ್ರದ್ಧೆಯಿಂದ ಆಲಿಸಿ ಅಳವಡಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯದನ್ನು ಕಲಿಯುತ್ತಾ ಸಾಗಬೇಕು ಎಂದು ಶುಭ ಹಾರೈಸಿದರು.
ಯುವ ಸಾಹಿತಿ ಚಂದ್ರಕಾಂತ.ಹೆಚ್. ರವರು ಮಾತನಾಡಿ ಈ ಶಾಲಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಕನ್ನಡ ಹಬ್ಬದ ರೀತಿ ನಡೆಸಿಕೊಟ್ಟು ವಿದ್ಯಾರ್ಥಿಗಳಲ್ಲಿ ಕನ್ನಡದ ಜಾಗೃತಿ ಮೂಡಿಸಲು ಸಹಕರಿಸಿದ ತಮಲೆಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಅಭಿನಂದನೆ ಸಲ್ಲಿಸಿದರು.
ವಿದ್ಯಾರ್ಥಿ ಸಂದೀಪ್ ಪಾರ್ಥಿಸಿದರೆ , ಶಿಕ್ಷಕ ಶಾಂತ ಕುಮಾರ್ ಸ್ವಾಗತಿಸಿದರು.
ಶಿಕ್ಷಕಿ ಧನಲಕ್ಷ್ಮಿಯವರು ಕಾರ್ಯ ಕ್ರಮದ ನಿರೂಪಣೆ ಮಾಡಿದರು.ಶಿಕ್ಷಕ ಭರತ್ ಕುಮಾರ್ ವಂದಿಸಿದರು.
ಮುಖ್ಯ ಶಿಕ್ಷಕರಾದ ನರೇಂದ್ರ ನಾಯ್ಕ ಅವರು ಈ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕರಾದ ಲಂಕೇಶ್, ಹಿರಿಯ ಶಿಕ್ಷಕಿ ಸಾವಿತ್ರಮ್ಮ, ಶಿಕ್ಷಕಿ ಶಾಲಿನಿ ಮುಂತಾದವರಿದ್ದರು.