ದಾವಣಗೆರೆ :`ಭಾರತದಲ್ಲೀಗ ಬೆತ್ತಲೆ ಎಂಬುದು
ಸಾಮಾನ್ಯ’ ವಿಷಯವಾಗಿದ್ದು, ಅತ್ಯಾಚಾರ, ಕೊಲೆ, ಸಾಮಾಜಿಕ ಹಿಂಸೆಗಳು ರಾಜಕೀಯ ಹೂಡಿಕೆಯ ಮಾಧ್ಯಮಗಳಾಗಿವೆ,” ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಪಾಪುಗುರು ಅವರ ಮಣ್ಣೇ ಮೊದಲು' ಕವನ ಸಂಕಲನ ಜನಾರ್ಪಣೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದರು. ``ಈ ರೀತಿಯ ರಾಜಕೀಯ ಹೂಡಿಕೆಗಳ ವಿರುದ್ಧ ಧ್ವನಿ ಆಗಬೇಕಿರುವುದು ಕವಿತೆಗಳ ಕೆಲಸವಾಗಬೇಕು. ಒಬ್ಬ ಪತ್ರಕರ್ತರಾಗಿರುವ ಕಾರಣಕ್ಕೆ ಗುರು ಅವರ ಕವಿತೆಗಳಲ್ಲಿ ಪತ್ರಿಕಾ ಭಾಷೆ ಪ್ರಭಾವ ಕಾಣುತ್ತದೆ. ಹೀಗಾಗಿ ಕವಿತೆಗಳು ಹೆಚ್ಚು ಜನರನ್ನು ತಲುಪುವಷ್ಟು ಸರಳವಾಗಿವೆ. ಜಾತಿ, ಧರ್ಮ, ರಾಜಕೀಯ, ಲಿಂಗ ರಾಜಕಾರಣ, ಜಾತಿ ರಾಜಕಾರಣ ಸೇರಿ ಸಮಕಾಲೀನ ವಿದ್ಯಮಾನಗಳ ಬಗ್ಗೆ
ಮಣ್ಣೇ ಮೊದಲು’ ಸಂಕಲನದಲ್ಲಿನ ಕವನಗಳು ಬೆಳಕು ಚೆಲ್ಲುತ್ತವೆ” ಎಂದು ಹೇಳಿದರು.
ಕವನ ಸಂಕಲನ ಜನಾರ್ಪಣೆ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, “ಕನ್ನಡ ಸಾಹಿತ್ಯ ಉಳಿಸಿ ಬೆಳೆಸುವಲ್ಲಿ ಪತ್ರಿಕೆಗಳ ಕೊಡುಗೆ ಮಹತ್ವದ್ದಾಗಿದೆ. ಬರವಣಿಗೆಯ ಗೀಳು ಇರುವವರು ಮಾತ್ರ ಅಕ್ಷರ ಲೋಕದೊಂದಿಗೆ ಗುರುತಿಸಿಕೊಂಡು ಸಾಹಿತ್ಯ ರಚನೆ ಹುಚ್ಚು ಹಚ್ಚಿಕೊಳ್ಳಲು ಸಾಧ್ಯ” ಎಂದರು.
ಸಾಹಿತಿ, ಸಂಶೋಧಕ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಫಕೃದ್ದೀನ್, ಸಾಹಿತಿಗಳಾದ ಪಾಪುಗುರು, ಸಂತೆಬೆನ್ನೂರು ಫೈಜ್ನಟ್ರಾಜ್, ವೇದಮೂರ್ತಿ ಇತರರಿದ್ದರು.
`ಮಣ್ಣೇ ಮೊದಲು’ ಕವನ ಸಂಕಲನ ಜನಾರ್ಪಣೆ.ಅತ್ಯಾಚಾರವೂ ರಾಜಕೀಯ ಹೂಡಿಕೆ:ದಾದಾಪೀರ್ ನವಿಲಿಹಾಳ್
RELATED ARTICLES