ಮೂಡಲಗಿ:ನ,22-ಪಟ್ಟಣದ ಕುರುಹಿನಶಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಬೆಳಗಾವಿ ಜಿಲ್ಲಾ ಸಹಕಾರ ಯುನಿಯನ್ ಮತ್ತು ಮೂಡಲಗಿಪಟ್ಟಣದ ಸಹಕಾರ ಒಕ್ಕೂಟ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ 70ನೆಯ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಜರುಗಿತು. ಇಂದಿನ ದಿನ ಮಾನಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಇರುವ ಶಿಕ್ಷಣ ಪದ್ಧತಿ ಹಾಗೂ ಸಿಬ್ಬಂದಿಗೆ ಬದಲಾಗುತ್ತಿರುವ ಸನ್ನಿವೇಶಗಳನ್ನು ಅರ್ಥೈಸಿಕೊಂಡು ಮತ್ತು ಅವರಿಗೆ ತರಬೇತಿ ನೀಡಿ ಸಿದ್ಧಗೊಳಿಸುವುದು ಅತೀ ಅವಶ್ಯಕವಾಗಿದೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾದ್ಯಾಪಕ ಪ್ರೊ,ಜಿ.ವ್ಹಿ.ನಾಗರಾಜ ಹೇಳಿದರು.ಮಾಹಿತಿ ತಂತ್ರಜ್ಞಾನ ಡಿಜಿಟಲಿಕರಣ,ಹಣಕಾಸಿನ ವ್ಯವಸ್ಥೆ ಗೆ ಸಹಕಾರಿ ಸಂಸ್ಥೆಗಳು ಹೊಂದಿಕೊಳ್ಳವುದರ ಮೂಲಕ ಸಪ್ತಾಹದ ಮುಖ್ಯ ಧ್ಯೇಯವಾದ 5 ಟ್ರೆಲಿಯನ್ ಡಾಲರ ಆರ್ಥಿಕ ಸಾಧನೆಯಲ್ಲಿ ಸಹಕಾರ ಸಂಘಗಳು/ ಸಂಸ್ಥೆ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಪ್ರತಿಬಬಿಸುವುದು ಅತೀ ಅವಶ್ಯ,ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಸಮನ್ವಯದೊಂದಿಗೆ ಕೆಲಸಮಾಡಿ ಸುಸ್ಥಿರವಾಗಿ ಅಭಿವೃದ್ಧಿ ಹೊಂದಬೇಕಾಗಿದೆ.ಇದರೊಂದಿಗೆ ಸಂಸ್ಥೆಯ ಎಲ್ಲಾ ಸದಸ್ಯರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಸಬಲರನ್ನಾಮಾಡಿ ಅವರ ಜೀವನ ಮಟ್ಟವನ್ನು ಎತ್ತರಿಸಬೇಕಾಗಿದೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾದ್ಯಪಕ ಪ್ರೊ.ಜಿ.ವಿ.ನಾಗರಾಜ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳ ನಿರ್ದೇಶಕರಾದ ಡಾllಸಂಜಯ ಹೊಸಮಠ ಮತ್ತು ಉಮೇಶ ಬಾಳಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪಟ್ಟಣದ ಶ್ರೀ ಜಗದ್ಗುರು ಪಂಚಾರ್ಯ ವಿ.ಉ.ಸಂಘದ ಅಧ್ಯಕ್ಷ ಮಹೇಶ ಹಿರೇಮಠ ವಹಿಸಿದರು.
ದಿ.ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಸನಗೌಡ ಪಾಟೀಲ, ಬಿಡಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳ ನಿರ್ದೇಶಕ ತಮ್ಮಣ್ಣ ಕೆಂಚರಡ್ಡಿ,ದಿ.ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಬಸವರಾಜ ಸಂತಿ,ಗುರುನಾಥ ಕಂಕಣವಾಡಿ,ಕುರುಹಿಶಟ್ಟಿ ಸೊಸಾಯಿಟಿಯ ನಿರ್ದೇಶಕ ಸುಭಾಸ ಬೆಳಕೂಡ ಮೂಡಲಗಿ ಪಟ್ಟಣ ಹಾಗೂ ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು,ಪ್ರಧಾನ ಕಾರ್ಯದರ್ಶಿ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.