ದಾವಣಗೆರೆ:ಲೋಕಿಕೆರೆ ರಸ್ತೆಯಲ್ಲಿರುವ ಕೈಗಾರಿಕಾಪ್ರದೇಶ ವ್ಯಾಪ್ತಿಯಲ್ಲಿರುವ ಎಸ್.ಓ.ಜಿ.ಕಾಲೋನಿಯಲ್ಲಿ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳು ಕನ್ನಡ ದ್ವಜಾರೋಹಣ ನೆರವೇರಿಸಿದರು.
‘ಎ’ ಬ್ಲಾಕ್ ಎಸ್.ಓ.ಜಿ ಕಾಲೋನಿಯಲ್ಲಿ ಕನ್ನಡಿಗರ ಹೆಮ್ಮೆಯ ಪುತ್ರ ಕರ್ನಾಟಕ ರತ್ನ ” ಅಪ್ಪು” ಅಭಿಮಾನಿಗಳ ಸಂಘ ಹಮ್ಮಿಕೊಂಡ ಕನ್ನಡ ಧ್ವಜಾರೋಹಣ ಕಾರ್ಯಕ್ರಮವನ್ನು ಚಿಕ್ಕ ಮಕ್ಕಳಿಂದ ನೆರವೇರಿಸಲಾಯಿತು. ಸಂಘದ ಗೌರವಾಧ್ಯಕ್ಷ ಕೆ.ಎಚ್.ಹನುಮಂತಪ್ಪ, ಅಧ್ಯಕ್ಷ ಕೆ.ಪಿ.ಲೋಕೇಶಾಚಾರ್ಯ, ಉಪಾಧ್ಯಕ್ಷ ಡಿ.ಶಿವಕುಮಾರ, ಕಾರ್ಯದರ್ಶಿ ಜಿ.ಎಸ್.ನಿಂಗಪ್ಪ ಪದಾಧಿಕಾರಿಗಳಾದ ಎಚ್.ತಿಪ್ಪೇಸ್ವಾಮಿ, ಬಸನಗೌಡ, ಹಾಗೂ ರುದ್ರೇಶ, ಶ್ರೀಮತಿ ನಾರಾಯಣಮ್ಮಾ, ಸನಾವುಲ್ಲಾ ಮುಂತಾದವರು ಉಪಸ್ಥಿತರಿದ್ದರು.