ವಿಜಯಪುರ : ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಅನೇಕರೀತಿ ಹೋರಾಟ ಮಾಡಿದರು, ಆಡಳಿತ ನಡೆಸಿದ ಯಾವುದೇ ಸರ್ಕಾರ ಸರಿಯಾಗಿ ಸ್ಪಂಧಿಸಿಲ್ಲ. ನಮ್ಮ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಇನ್ನು ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ ೨ ಮೀಸಲಾತಿ ಕೇಂದ ್ರ ಸರ್ಕಾರ ಲಿಂಗಾಯತ ಸಮಾಜದ ವಿವಿಧ ಪಂಗಡಗಳಿಗೆ ಓಬಿಸಿ ಪಟ್ಟಿಯಲ್ಲಿ ಸೇರಿಸದಿದ್ದರೆ ಯಾವುದೇ ತ್ಯಾಗಕ್ಕೂ ಸಿದ್ದ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಮಹಾಸ್ವಾಮೀಜಿಯವರು ಫಣತೊಟ್ಟರು. ಪ ್ರಥಮ ಜಗದ್ಗುರು ಶ್ರೀ ತಿಕೋಟಾ ತಾಲೂಕಿನ ಶ್ರೀ ಧರಿದೇವರ ಪುಣ್ಯಕ್ಷೇತ ್ರ ಗಡಿಭಾಗ ಕನಮಡಿಯ ಪ್ರೌಢಶಾಲೆಯ ಆವರಣದಲ್ಲಿ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶ ಇಷ್ಟಲಿಂಗ ಪೂಜೆಯೊಂದಿಗೆ ರಾಷ್ಟಿçÃಯ ಹೆದ್ದಾರಿ ತಡೆ ಚನ್ನಮ್ಮ ಜಯಂತಿ ಹಾಗೂ ವಿಜಯೋತ್ಸವ ಕಾರ್ಯಕ ್ರಮದ ಬಹಿರಂಗ ಸಭೆಯನ್ನು ಉದ್ದೇಶಿಸಿ ಸಸಿಗೆ ನೀರರೆರೆದು ಉದ್ಘಾಟಿಸಿ ಮಾತನಾಡಿದ ಅವರು ಪಂಚಮಸಾಲಿ ಸಮಾಜ ಬಾಂಧವರು ಸ್ವಾಭಿಮಾನಿಗಳು ಮತ್ತು ಅಷ್ಟೇ ಮುಗ್ಧರು. ಅನ್ನ ನೀಡುವ ರೈತರು ಮಣಿ ್ಣನ ಮಕ್ಕಳು ಕೃಷಿ ಕಾರ್ಮಿಕ ಕುಲ ಕಸಬನ್ನು ಹೊಂದಿದ ಇವರು ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದರು ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರಿಗೆ ಸರ್ಕಾರ ೨ ಎ ಮೀಸಲಾತಿ ನೀಡದ ಕಾರಣ ಸಮಾಜದ ವಿದ್ಯಾರ್ಥಿಗಳು, ವಿದ್ಯಾವಂತ ಯುವಕರು ಸರ್ಕಾರದ ಯೋಜನೆಗಳು ಮತ್ತು ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ. ಕಾರಣ ನಾಡಿನಲ್ಲಿ ಸಮಾಜ ಬಾಂಧವರು ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ಜಾಗೃತರಾಗಿ ಸಂಘಟಿತರಾಗಿ ಸರ್ಕಾರವನ್ನು ಜನಪ ್ರತಿನಿಧಿಗಳನ್ನು ೨ ಎ ಮೀಸಲಾತಿಗಾಗಿ ಹಕ್ಕೊತ್ತಾಯ ಮಾಡಬೇಕೆಂದು ಕರೆ ನೀಡಿದರು. ಮೀಸಲಾತಿಗಾಗಿ ನಾನಾ ಹಂತದ ಹೋರಾಟಗಳನ್ನು ಮಾಡಲಾಗಿದೆ ಬೆವರು ರಕ್ತ, ಹರಿಸಿ ಕೂಡಲ ಸಂಗಮ ಧರ್ಮಕ್ಷೇತ ್ರದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಬಿಸಿಲು, ಮಳೆ, ಗಾಳಿ ಲೆಕ್ಕಿಸದೆ ಪಾದಯಾತೆ ್ರ ಕೈಗೊಳ್ಳಲಾಗಿದೆ. ಸುಮಾರು ೧೦ ಲಕ್ಷ ಜನರನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ ಸಮಾವೇಶ ಮಾಡಿ ಸರ್ಕಾರಕ್ಕೆ ಮನವಿ ಅರ್ಪಿಸಲಾಗಿದೆ. ಈ ಹೋರಾಟದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸದನದ ಬಾವಿಗಿಳಿದು ಸರ್ಕಾರಕ್ಕೆ ಮೀಸಲಾತಿ ಕಲ್ಪಿಸಲು ಗುಡುಗಿದ್ದಾರೆ. ಕೇಂದ ್ರ ಸರ್ಕಾರದ ಹಿರಿಯ ನಾಯಕರು ತಮ್ಮ ಪಕ್ಷದವರು ಮಂತ್ರಿಗಿರಿ ಅಧಿಕಾರ ಮುಂತಾದ ಆಮಿಷ ಒಡ್ಡಿ ಅವರಿಗೆ ಹೋರಾಟ ಕೈ ಬಿಡಲು ಒತ್ತಾಯಿಸಿದರು ಎಲ್ಲವನ್ನು ತ್ಯಾಗಗೈದು ಸಮಾಜದ ಒಳಿತಿಗಾಗಿ ಮೀಸಲಾತಿ ಕಲ್ಪಿಸಲು ಒತ್ತಾಯ ಪಡಿಸಿದಾಗ ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಕೊನೆಯ ಹಂತದಲ್ಲಿ ಕೇಂದ ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿದರು. ಪ ್ರಧಾನಿ ಸನ್ಮಾನ್ಯ ನರೇಂದ ್ರ ಮೋದಿಯವರು ಪಂಚಮಸಾಲಿ ಸಮಾಜಕ್ಕೆ ೨ಡಿ ಮೀಸಲಾತಿಯನ್ನು ಘೋಷಿಸಿದರು ಅದು ಅನಿವಾರ್ಯವಾಗಿ ಅನುಷ್ಠಾನಕ್ಕೆ ಬರಲಿಲ್ಲ. ಅದಕ್ಕೆ ನಾವು ಎದೆಗುಂದುವುದು ಬೇಡ ಮತ್ತೆ ೨ನೇ ಹಂತದ ಹೋರಾಟ ಸುಮಾರು ೭ ಜಿಲ್ಲೆಗಳಲ್ಲಿ ಕೈಗೊಳ್ಳಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಸಮಾಜ ಸಂಘಟಿಸಿ ಈಗಿನ ಕಾಂಗೆ ್ರÃಸ್ ಸರ್ಕಾರಕ್ಕೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ಧರಾಮಯ್ಯನವರಿಗೆ ೨ಎ ಮೀಸಲಾತಿಗಾಗಿ ಮನವಿ ಅರ್ಪಿಸಲಾಗುವುದು. ಪಂಚಮಸಾಲಿ ಸಮಾಜದ ಎಲ್ಲ ಶಾಸಕರು ಪಕ್ಷಾತೀತವಾಗಿ ಸರ್ಕಾರಕ್ಕೆ ಒತ್ತಾಯಿಸಬೇಕೆಂದರು. ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಕನಮಡಿ ಗ್ರಾಮದ ಸಮಾಜದ ಹಿರಿಯರಾದ ಬೀರನಗೌಡ ಕಲ್ಲನಗೌಡ ಪಾಟೀಲ ಅವರಿಗೆ ಶ ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಎಮ್. ಪಾಟೀಲ ದೇವರಹಿಪ್ಪರಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎ.ಪಿ.ಎಂ.ಸಿಮಾಜಿ ಅಧ್ಯಕ್ಷರಾದ ಸುಭಾಸಗೌಡ ಪಾಟೀಲ, ಬಿಜೆಪಿ ಧುರೀಣರಾದ ವಿಜುಗೌಡ ಪಾಟೀಲ, ಎಮ್.ಎಸ್. ರುದ ್ರಗೌಡ, ಸುಭಾಸಗೌಡ ಎಸ್.ಪಾಟೀಲ, ನಿಂಗಪ್ಪ ಪಿರೋಜಿ ಬೆಳಗಾವಿ, ಉಪನ್ಯಾಸಕಿ ಡಾ.ಮೈತ್ರಾಯಿಣಿ ಗದಿಗೆಪ್ಪಗೌಡರ, ಪ ್ರಥಮ ದರ್ಜೆ ಗುತ್ತಿಗೆದಾರರಾದ ಬಿ.ಎಸ್. ಬಿರಾದಾರ, ಶ್ರೀ ಬಾಬುರಾವ್ ಮಹಾರಾಜರು (ಹೊನವಾಡ) ಎಂ.ಪಿ. ಪಾಟೀಲ, ಬಾಬುಗೌಡ ಪಾಟೀಲ, ಎಮ್.ಆರ್. ತುಂಗಳ, ಶಂಕರಗೌಡ ಬಿರಾದಾರ (ಕನಮಡಿ), ಪಂಚಸೇನೆ ರಾಜ್ಯಾಧ್ಯಕ್ಷ ರುದ ್ರಗೌಡ ಸೋಲದಗೌಡರು (ಬಂಡಿ), ಜಿಲ್ಲಾಧ್ಯಕ್ಷ ಶರಣಬಸಪ್ಪ ಗಂಗಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಸಿಳ್ಳಿನ, ಸುನೀಲಗೌಡ ಅಶೋಕ ಬಿರಾದಾರ, ಸಿದಗೊಂಡ ಬಾಬಾನಗರ, ರಾಷ್ಟಿçÃಯ ಯುವ ಘಟಕದ ಪ ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ (ಬ.ಬಾಗೇವಾಡಿ) ಸೊಮಶೇಖರ ದೇವರ, ಉಮಾ ಪಾಟೀಲ, ನ್ಯಾಯವಾದಿ ದಾನೇಶ ಅವಟಿ, ಶಿವಾನಂದ ಮರೋಳ, ಶ್ರೀಕಾಂತ ಕೊಟ್ಟರಶೇಟ್ಟಿ, ಡಾ. ಮಹಾಂತೇಶ ಜಾಲಗೇರಿ, ಡಾ. ಗಜಾನನ ಮೈಸಾಳೆ, ಅಪ್ಪಾಸಾಬ ಯರನಾಳ, ಸಿದ್ಧನಗೌಡ ಬಿರಾದಾರ, ಬಾಬುಗೌಡ ಪಾಟೀಲ, ನಿಂಗೊAಡಗೌಡ ಸೊಲ್ಲಾಪುರ, ಗೌರೇಶ ಪಾಟೀಲ, ಅಶೋಕ ನಿಂಗನಗೌಡ ಬಿರಾದಾರ, ಸಿದ್ಧನಗೌಡ ರುದ ್ರಗೌಡ, ಹರೀಶಗೌಡ ಬಿರಾದಾರ, ಬಾಬುಗೌಡ ಪಾಟೀಲ, ಪ ್ರಶಾಂತಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ ಇನ್ನು ಸುತ್ತಮುತ್ತಲಿನ ಗ್ರಾಮದ ಮುಖಂಡರು ಗಡಿ ಭಾಗದ ಜತ್, ಚಡಚಣ, ಬಡಚಿ, ಬಾಬಾನಗರ, ಹೊನವಾಡ, ಕೋಟ್ಯಾಳ, ದಂಧರಗಿ, ಟಕ್ಕಳಕಿ ಮುಂತಾದ ಗ್ರಾಮಗಳ ಸಮಾಜ ಬಾಂಧವರು ಉಪಸ್ಥಿತರಿದ್ದರು. ವಿರೇಶ ವಾಲಿ ಹಾಗೂ ತಂಡದವರಿAದ ಭಕ್ತಿಗೀತೆ, ಭಾವಗೀತೆ, ವಚನಗಳನ್ನು ಪ್ರಾರ್ಥಿಸಿದರು. ಮಹೇಶ ಭಂಡರಕೋಟೆ ಕೊಟ್ಟಲಗಿ ನಿರೂಪಿಸಿದರು. ಶಂಕರಗೌಡ ಬಿರಾದಾರ ಶರಣುಸಮರ್ಪಣೆ ಗೈದರು. ಬೆಳಿಗ್ಗೆ ಗ್ರಾಮದ ಪ ್ರಮುಖ ಬೀದಿಗಳಲ್ಲಿ ಚನ್ನಮ್ಮನ ಭಾವಚಿತ ್ರವನ್ನು ಅಲಂಕರಿಸಿದ ಆನೆಯ ಮೇಲೇರಿಸಿ ಪಂಚಮಸಾಲಿ ಪೀಠದ ಪ ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿಯವರನ್ನು ರಥದಲ್ಲಿ ಕೂಡ್ರಿಸಿ ಸಕಲ ವಾಧ್ಯ ವೃಂಧದೊAದಿಗೆ ಮಹಿಳೆಯರ ಪೂರ್ಣ ಕುಂಭದೊAದಿಗೆ ಸಂಚರಿಸಲಾಯಿತು. ಮಧ್ಯಾಹ್ನ ಇಷ್ಟಲಿಂಗ ಪೂಜ್ಯೆಯೊಂದಿಗೆ ರಾಷ್ಟಿçÃಯ ಹೆದ್ದಾರಿ ಕೆಲವುಗಂಟೆಗಳ ಕಾಲ ತಡೆ ಮಾಡಲಾಯಿತು. ರಾತ್ರಿ ವಿವಿಧ ಹಾಡು ಚನ್ನಮ್ಮನ ಕುರಿತು ಭಕ್ತಿಗೀತೆ ಲಾವಣಿಗೀತೆಗಳನ್ನು ಹಾಡಲಾಯಿತು. ವರದಿ: ದಾನೇಶ ಅವಟಿ .
ಪಂಚಮಸಾಲಿ ೨ಎ ಮೀಸಲಾತಿ ಸಿಗುವವರೆಗೆ ಯಾವುದೇ ತ್ಯಾಗಕ್ಕೂ ಸಿದ್ದ : ಬಸವಜಯಮೃತ್ಯುಂಜಯ ಮಹಾಸ್ವಾಮೀಜಿ
RELATED ARTICLES