ಮೂಡಲಗಿ:ಡಿ,01-ಪಟ್ಟಣದ ಶ್ರೀ ಶಿವಬೋಧರಂಗ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ “ಮಹಿಳಾ ಸಬಲೀಕರಣ” ಎಂಬ ವಿಷಯದ ಕುರಿತು ಮಾತನಾಡುತ್ತಾ ಅನಾದಿಕಾಲದಿಂದಲೂ ನಾಲ್ಕು ಗೋಡೆಗಳ ನಡುವಿನ ಜೀವನಕ್ಕೆ ಸೀಮಿತವಾಗಿದ್ದ ಮಹಿಳೆ, ಇಂದು ಮಹಾ ಸಾಧಕಿ ಎಲ್ಲ ಕ್ಷೇತ್ರಗಳಲ್ಲಿಯೂ ಗಣನೀಯವಾಗಿ ಸಾಧನೆ ಮಾಡಿದ್ದಾಳೆ ಎಂದು ಎಸ್. ಎಸ್.ಆರ್. ಪ.ಪೂ. ಕಾಲೇಜಿನ ಉಪನ್ಯಾಸಕಿಯಾದ ಡಾll ಆರ್. ಪಿ. ಬಿರಾದಾರ ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾದ ಶ್ರೀಮತಿ ಶೈಲಾ ಎಚ್. ಹತ್ತರಕಿ, ಹೆಣ್ಣು ಅಬಲೆ ಅಲ್ಲ, ಸಬಲೆ. ಹೆಣ್ಣು ಮನಸ್ಸು ಮಾಡಿದ್ರೆ ಯಾವುದು ಅಸಾಧ್ಯವನ್ನು ಸಾದ್ಯವನ್ನಾಗಿಸುವ ಸಾಮರ್ಥ್ಯ ಹೊಂದಿದ್ದಾಳೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಬಿ.ಎಚ್. ರಡ್ಡಿಯವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಎಂ.ಇ.ಎಸ್. ಸಂಸ್ಥೆಯ ನಿರ್ದೇಶಕರುಗಳಾದ ವಿ. ಟಿ. ಸೋನವಾಲ್ಕರ, ಪಿ.ಆರ್.ಲಂಕೆಪ್ಪನವರ ವಹಿಸಿಕೊಂಡಿದ್ದರು. ಉಪನ್ಯಾಸಕರಾದ ಎಚ್. ಎಂ. ಹತ್ತರಕಿ ಸ್ವಾಗತಿಸಿದರು, ಬಿ. ಜಿ. ಗಡಾದ ವಂದಿಸಿದರು, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಎಸ್. ಕೆ. ಹಿರೇಮಠ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಲ್ ಆರ್ ಧರ್ಮಟ್ಟಿ, ಎಚ್.ಡಿ.ಚಂದರಗಿ ಹಾಗೂ ಲವಾ ಶೆಕ್ಕಿ, ಎನ್.ಎಸ್.ಎಸ್. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು