ಮೂಡಲಗಿ:ಡಿ,04-ಪಟ್ಟಣದ ಕಾಶೀಮಲಿ ಅರ್ಬನ್ ಸೊಸಾಯಿಟಿಯಲ್ಲಿ ಮೂಡಲಗಿ ತಾಲೂಕ ಘಟಕದ ಪದಾಧಿಕಾರಿಗಳ ಸಭೆ ಜರುಗಿತು.
ಕರ್ನಾಟಕ ರಾಜ್ಯ ನದಾಪ್/ ಪಿಂಜಾರ ಸಂಘದ ಮೂಡಲಗಿ ತಾಲೂಕಿನ ಪದಾಧಿಕಾರಿಗಳ ಸಭೆ ನಡೆಯಿತು, ಅದರ ಅಧ್ಯಕ್ಷತೆ ಮೂಡಲಗಿಯ ಅನ್ವರ ನದಾಪ್,ಉಪಾಧ್ಯಕ್ಷರಾಗಿ ರಾಜಾಪೂರದ ಮಲಿಕಜಾನ್ ನದಾಪ್,ಕಾರ್ಯದರ್ಶಿಯಾಗಿ ಮೂಡಲಗಿ ಮೀರಾಸಾಬ ನದಾಪ್,ಸಹ ಕಾರ್ಯದರ್ಶಿ ಮಸಗುಪ್ಪಿಯ ಅಮೀನಸಾಬ ನದಾಪ್,ಖಜಾಂಚಿಯಾಗಿ ಜಾಕೀರಹುಸೇನ ನದಾಪ್,ಸಂಘಟನಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಿಳಾ ಉಪಾಧ್ಯಕ್ಷರಾಗಿ ತಬ್ಬಸುಮ ನದಾಪ್,ರೋಶಮಬಿ ನದಾಪ್ ಹಾಗೂ 40 ಸದಸ್ಯರು ಆಯ್ಕೆ ಆದರು.
ಮೂಡಲಗಿ ತಾಲೂಕಾ ಅಧ್ಯಕ್ಷ ಅನ್ವರ ನದಾಪ್ ಆಯ್ಕೆಯಾದ ನಂತರ ನದಾಪ್/ ಪಿಂಜಾರ ಸಮಾಜ ಬಾಂಧವರಿಗೆ ಸರ್ಕಾರ ಸಹಾಯ,ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಹೇಳಿದ ಅವರು ಸಂಘದ ಉದ್ದೇಶಗಳನ್ನು ವಿವರಿಸಿದರು.
ಸಂಘಟನಾ ಕಾರ್ಯದರ್ಶಿ ಜಾಕೀರಹುಸೇನ ಸರ್ಕಾರಿ ಸೌಲಭ್ಯಗಳ ಬಗ್ಗೆ ಮತ್ತು ಸಂಘದ ಸದಸ್ಯತ್ವದ ಬಗ್ಗೆ ಮಾಹಿತಿ ನೀಡಿದರು ಸಂಘದ ಸದಸ್ಯರಿಗೆ.
ಇದೇ ಸಮಯದಲ್ಲಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಅಭಿಮಾನದಿಂದ ಸತ್ಕರಿಸಿದರು.
ಬೆಳಗಾವಿ ಜಿಲ್ಲಾಧ್ಯಕ್ಷ ಹಾಜಿ ನಜೀರ ಅಹ್ಮದ ಶೇಖ,ಗೋಕಾಕದ ಹಾಗೂ ಮೂಡಲಗಿ ತಾಲೂಕಿನ ನಾದಪ್ ಸಂಘದ ಹಿರಿಯರು ಪಾಲ್ಗೊಂಡಿದ್ದರು.
ಮೀರಾಸಾಬ ನದಾಪ್ ನಿರೂಪಿಸಿದರು, ಸೈಯದ ಮದಾಪ್ ಸ್ವಾತಿಸಿದರು ಮತ್ತು ಜಾಕೀರಹುಸೇನ ನದಾಪ್ ವಂದಿಸಿದರು.
ನದಾಪ್/ಪಿಂಜಾರ ಸಂಘಕ್ಕೆ ಅವಿರೋಧವಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
RELATED ARTICLES