ವಿಜಯಪುರ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 6 ರಿಂದ 8ರವರೆಗೆ ಮೂರು ದಿನಗಳ ಕಾಲ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಛಾಯಾಚಿತ್ರ ಪ್ರದರ್ಶಿಸಿದ ನಿಪ್ಪಾಣಿಯ ದೀಪಕ್ ಮದಾಳೆ ಮತ್ತು ಅವರ ಸಹಕಾರಿ ಗ್ಯಾನಬಾ ಕಾಂಬಳೆ ಅವರನ್ನು ಬುದ್ಧವಿಹಾರ ನಿರ್ಮಾಣ ಸಮಿತಿಯ ನಿರ್ದೇಶಕ ಮಂಡಳಿ ವತಿಯಿಂದ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.
ಸಮಿತಿಯ ಅಧ್ಯಕ್ಷ ರಾಜಶೇಖರ ಯಡಹಳ್ಳಿ, ಕಾರ್ಯದರ್ಶಿ ನಾಗರಾಜ ಲಂಬು, ನಿರ್ದೇಶಕರಾದ ಅನಿಲ ಹೊಸಮನಿ, ರಾಜೇಶ ತೊರವಿ, ಕೆ.ಎಂ. ಕೂಡಲಗಿ, ಚಿದಾನಂದ ನಿಂಬಾಳ, ಎಂ.ಬಿ. ಹಳ್ಳದಮನಿ, ದಿಲೀಪ ಯಂಭತ್ನಾಳ, ಲಕ್ಷ್ಮಿ ಯಂಭತ್ನಾಳ, ಶಾರದಾ ಹೊಸಮನಿ, ಸಂಘರ್ಷ ಹೊಸಮನಿ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.