ದಾವಣಗೆರೆ:ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದ ಬಡರೈತ ಶ್ರೀ ಭೀಮಪ್ಪ ತಾಳೇದರ್ ಇವರ ಮನೆಯು ರಾತ್ರಿ ಸುಮಾರು ಒಂಭತ್ತು ಗಂಟೆಯಸಮಯದಲ್ಲಿ ಶಿವಪ್ಪ ಮತ್ತು ಅವರಪತ್ನಿ ಶ್ರೀ ಮತಿ ಸುಮಿತ್ರಮ್ಮ ಮಗ ತಿಪ್ಪೇಶಿ ಇವರು ರಾತ್ರಿ ಊಟಮಾಡಿ ಇನ್ನೇನು ಮಲಗಲು ಸಿದ್ದರಾಗುತಿದ್ದಂತೆ ಇದ್ದಕಿದ್ದಹಾಗೆ ಮನೆ ಗೋಡೆ ಕುಸಿದು ಬಿದ್ದಿದೆ. ಆ ಕುಟುಂಬ ಅದೃಷ್ಟವಶಾತ್ ಇನ್ನೂ ಮಲಗದೇ ಇರುವುದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆಯೆಂದು ಗ್ರಾಮಸ್ಥರು ನೆಮ್ಮದಿಯನಿಟ್ಟುಸಿರು ಬಿಟ್ಟಿದ್ದಾರೆ. ಆ ದಂಪತಿಗಳು ಮಲಗಿ ನಿದ್ದೆಗೆ ಜಾರಿದಮೇಲೇನಾದರೂ ಮನೆ ಕುಸಿದು ಬಿದ್ದಿದ್ದರೆ ಕುಟಬ ಜೀವಂತ ಸಮಾದಿಯಾಗಬೇಕಾಗಿತ್ತು.ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಗ್ರಾಮಪಂಚಾಯತಿಯ ಅಧಿಕಾರಿ,ಕಂದಾಯ ಅಧಿಕಾರಿಗಳಾಗಲಿ ಗ್ರಾಮದ ರಸ್ತೆ, ಚರಂಡಿಗಳಲ್ಲಿಯ ನೀರು,ಕಸ,ಕಡ್ಡಿಯನ್ನು ಸುಚಿಗೊಳಿಸದೇ ನಿರ್ಲಕ್ಷವಹಿದ್ದರಿಂದ ಚರಂಡಿಯ ನೀರು ನಿಂತು ಗೋಡೆಗಳಿಗೆ ತನಿಸಿ ಹಿಡಿದು ಮನೆಗೋಡೆ ಕುಸಿದಿರಬಹುದೆಂದು ಗ್ರಾಮಸ್ತರ ಅಭಿಪ್ರಾಯವಾಗಿದೆ.
ರಾತ್ರಿ ಕುಟುಂಬ ಮಲಗಿದ್ದಾ ಅಥವಾ ಹಗಲು ಹೊತ್ತಲ್ಲಿ ಜನರು ತಿರುಗಾಡುವಾಗ ಮಕ್ಕಳು ರಸ್ತೆಯಲ್ಲಿ ಆಟವಾಡುವಾಗ ಈ ಘಟನೆ ಸಂಭವಿಸಿದ್ದರೆ ದೊಡ್ಡ ಅನಾಹುತವಾಗುತಿತ್ತು.ಅಂಥ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲದಿರುವುದು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಕೂಡಲೇ ಸಂಬಂದಪಟ್ಟ ಕಂದಾಯಾಧಿಕಾರಿಗಳು ಮತ್ತು ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಬಡರೈತ ಕುಟುಂಬಕ್ಕೆ ಆದ ಹಾನಿಯನ್ನು ಸರಿಪಡಿಸಿ ವಸತಿಗೆ ವ್ಯವಸ್ಥೆ ಮತ್ತು ನೆರವು ಒದಗಿಸಲು ಈ ಮೂಲಕ ಗ್ರಾಮಸ್ತರ ಒತ್ತಾಯವಾಗಿದೆ.
ಲೋಕಿಕೆರೆ ಗ್ರಾಮದ ತಾಳೇದರ ಭೀಮಪ್ಪ ಎಂಬುವರಿಗೆ ಸೇರಿದ ಕರಿ ಹೆಂಚಿನ ಮನೆ ಅತಿ ತೇವಾಂಶ ದಿಂದ ಮಣ್ಣಿನ ಗೋಡೆ ಕುಸಿದು ಇದೀಗ ೯.೪೫ ಸುಮಾರು ನೆಲಕ್ಕೆ ಕುಸಿದಿದೆ
ಮನೆಯ ಮರದ ಹಲಗು …ತೀರು ತೊಲೆಗಳು ಕೊಂಚ ಶಬ್ದ ಬಂದಿದ್ದರಿಂದ
ಅಪಾಯ ಮುನ್ಸೂಚನೆ ಅರಿತ
ಕುಟುಂಬದವರು… ತಕ್ಷಣ ಮನೆಯಿಂದ ಹೊರಗೆ ಓಡೋಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ರಾತ್ರಿ ಯಾಗಿದ್ದರಿಂದ ಪಂಚಾಯತ್ ಅಧಿಕಾರಿಗಳು
ಕಾರ್ಯದರ್ಶಿ ಗಳು ಬೆಳಿಗ್ಗೆ ಬರುವ ಸಾಧ್ಯತೆ ಇದೆ
ಪಂಚಾಯತ್ ಅಧ್ಯಕ್ಷ ಶಿಲ್ಪಾ ಶಿವಮೂರ್ತಿ ಸದಸ್ಯ ರಾದ ಉಮೇಶ್ ಉಪಾಧ್ಯಕ್ಷ ಪಾರ್ವತಮ್ಮ ಅಡಿವೆಪ್ಪ ಗ್ರಾಮದ ಹಿರಿಯರು ಮುಖಂಡರು ಹಾಜರಿದ್ದರು