ಬೆಳಗಾವಿ:ಮೂಡಲಗಿ ಹಾಗೂ ತಾಲೂಕಿನ ಬಹುತೇಕ ಒಳಚರಂಡಿ,ರಸ್ತೆ ಮತ್ತು ಮೂಲ ಭೂತ ಸೌಕರ್ಯದಿಂದ ವಂಚಿತವಾಗಿದೆ ಎಂದು ಗಂಭೀರ ಆರೂಪ ಮಾಡುತ್ತಿದ್ದಾರೆ ಹೊಳೆಪ್ಪ ಶಿವಾಪೂರ ಪಂಚಮಸಾಲಿ ಮುಖಂಡ ಹಾಗೂ ಕಾಂಗ್ರೆಸ್ ಕಾರ್ಯಕರ್ತ. ಸುಮಾರು ನಾಲ್ಕು ವರ್ಷವಾಯಿತು ಮೂಡಲಗಿ ತಾಲೂಕಾ ಕೇಂದ್ರವಾಗಿ ಮುಖ್ಯ ರಸ್ತೆಗಳು ಹದಿಗೆಟ್ಟಿವೆ ಮತ್ತು ಬಸ್ಟ್ಯಾಂಡ್ ಹತ್ತಿರ ಇರುವ ಹಳೆಯ ಸೇತುವೆ ಬಗ್ಗೆ ದುರಸ್ತಿ ಇಲ್ಲದೇ ವಾಹನ ಸವಾರರು ಪರದಾಡುತ್ತಿದ್ದಾರೆ ದಿನನಿತ್ಯ.ತಾಲೂಕಿನ ಕೆಲ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ,ಅಮಾಯಕರಿಗೆ ಸರಿಯಾಗಿ ಮಾಹಿತಿ ನೀಡುವುದಿಲ್ಲ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಾರೆ. ಭೂಮಾಪನ ಇಲಾಖೆಯಲ್ಲಿ ಗೋಲ್-ಮಾಲ್ ನಡೆಯುತ್ತಿದ್ದರು ಯಾರು ಇವರನ್ನು ಕೇಳುವವರಿಲ್ಲ ಎಂದು ಹೇಳುತ್ತಾರೆ.ಸಾಮಾನ್ಯ ಜನರಿಗೆ ಅನ್ಯಾಯ ಎಸಗುತ್ತಿದ್ದಾರೆ.ಇನ್ನು ಕೆಲ ಗ್ರಾಮದಲ್ಲಿ ಪಿಡಿಒಗಳ ಧರ್ಬಾರ! ಇವರಿಂದನು ಅನಕ್ಷರತರಿಗೆ ಅನ್ಯಾಯ ಅಂತೂ ಕಟ್ಟಿಟ್ಟ ಬುತ್ತಿ.ಇನ್ನು ಕೃಷಿ ಇಲಾಖೆಯಲ್ಲಿ ಬರುವ ಸೌಲತ್ತಗಳನ್ನು ಬಡವರಿಗೆ ಸಿಗುತ್ತಿಲ್ಲ, ರಾಜಕೀಯ ಹಿಂಬಾಲಕರ ಪಾಲಾಗುತ್ತಿರುವುದು.ಇದರ ಬಗ್ಗೆ ಮಾನ್ಯ ಶಾಸಕರು ಗಮನ ಹರಿಸಬೇಕೆಂದು ನಾಗರಿಕರ ಪರವಾಗಿ ನಾನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ಮೂಲಭೂತ ಸೌಲಭ್ಯಗಳಿಂದ ಮೂಡಲಗಿಭಾಗ ವಂಚಿತ ಹೊಳೆಪ್ಪ ಶಿವಾಪೂರ್ ಆರೋಪ
RELATED ARTICLES