Saturday, December 21, 2024
Homeಸಾಧನೆಪ್ರತಿಭೆಗಳನ್ನು ಹುಡುಕುವುದು ಸುಲುಭದ ಕೆಲಸವಲ್ಲ-ಶ್ರೀಮತಿ ರಜನಿ ಅಶೋಕ ಜೀರಗ್ಯಾಳ.

ಪ್ರತಿಭೆಗಳನ್ನು ಹುಡುಕುವುದು ಸುಲುಭದ ಕೆಲಸವಲ್ಲ-ಶ್ರೀಮತಿ ರಜನಿ ಅಶೋಕ ಜೀರಗ್ಯಾಳ.

ದಾವಣಗೆರೆ:.ಪ್ರತಿಭೆಗಳನ್ನು ಹುಡುಕುವುದು ಅಷ್ಟು ಸುಲುಭದ ಕೆಲಸವಲ್ಲ,ಈ ಒಂದು ಕೆಲಸ ದಾವಣಗೆರೆ ಜಿಲ್ಲಾ ಸಿರಿಗನ್ನಡ ಮಹಿಳಾ ವೇದಿಕೆ ಮಾಡುತ್ತಿರುವುದು ಬಹಳ ಸಂತೋಷ ಎಂದು ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ರಜನಿ ಅಶೋಕ ಜೀರಗ್ಯಾಳ ಇವರು ಸಿರಿಗನ್ನಡ ಮಹಿಳಾ
ವೇದಿಕೆ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಇವರು,
ಗೃಹಕಾಮಿ೯ಕರ ಮಕ್ಕಳು-ಅಂಗವಿಕಲರನ್ನು ಗುರುತಿಸಿರುವುದು ನನಗೆ ಬಹಳ ಸಂತೋಷ ತಂದಿದೆ
ಎಂದರಲ್ಲದೆ,ಮುಂದುವರಿದು ಮಾತನಾಡಿದ ಇವರು
ನಾವು ಕನ್ನಡಿಗರು,ಕನ್ನಡ ನಾಡಿನಲ್ಲಿ ಹುಟ್ಟಿದ್ದಕ್ಕಾಗಿ ಕನ್ನಡದ ಋಣ ತೀರಿಸುವುದು ನಮ್ಮೇಲ್ಲರ ಕತ೯ವ್ಯ‌.ಆದರೆ ನಾವು ಬೇರೆ ಭಾಷೆಯನ್ನು ಬೇಗನೆ ಅಪ್ಪಿಕೊಳ್ಳುತ್ತೇವೆ.ಇದು ನಮ್ಮ ದೌಬಾ೯ಗ್ಯ.ಕನ್ನಡ ನಮ್ಮ ನಾಡ ಭಾಷೆ,ಹೃದಯ ಭಾಷೆ,ಅದಕ್ಕಾಗಿ ಕನ್ನಡ ಭಾಷೆ ,ಉಳಿಸಿ,ಬೆಳಸಿ ಪೋಷಿಸಬೇಕಾಗಿದೆ.ತಮಿಳರು ಕನ್ನಡ ಮಾತನಾಡಲು ಬಂದರೂ ಸಹ ಅವರು ತಮ್ಮ ಭಾಷೆ ಬಿಟ್ಟು ಕೊಡುವುದಿಲ್ಲ,ಕಾರಣ ಅವರ ಭಾಷೆಯ ಮೇಲೆ ಅಷ್ಟು ಅಭಿಮಾನ.ಆದ್ದರಿಂದ ನಮ್ಮ ನಾಡಿನ ಹೆಮ್ಮೆಯ ಭಾಷೆ,ನಲ್ಮೆಯ ಭಾಷೆ ನಾವೇಲ್ಲರು ಉಳಿಸಿ ಬೆಳೆಸಬೇಕಾಗಿದೆ ಎಂದು
ಮನದಾಳದ ಮಾತುಗಳಿಂದ
ಮಾತನಾಡಿದ ಇವರು ಸಿರಿಗನ್ನಡ ಮಹಿಳಾ ವೇದಿಕೆ ಸಿರಿಗನ್ನಡ ಮಹಿಳಾ ವೇದಿಕೆ,ರಿ.ಬೆಂಗಳೂರು, ಕರ್ನಾಟಕ ರಾಜ್ಯ ಮತ್ತು ಸಿರಿಗನ್ನಡ ಮಹಿಳಾ ವೇದಿಕೆ.ರಿ. ದಾವಣಗೆರೆ ಜಿಲ್ಲೆ ಹಾಗೂ ತಾಲ್ಲೂಕು ಘಟಕಗಳು, ಕನಾ೯ಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ದಕ್ಷಿಣ ವಲಯ,ದಾವಣಗೆರೆ ಇಮೇಜ್ ಪತ್ರಿಕಾ ಬಳಗದ ಸಹಯೋಗದೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮ, ೬೮ನೇ ಕನ್ನಡ ರಾಜ್ಯೋತ್ಸವ,ಗೃಹ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕವಿಗೋಷ್ಠಿ ಕಾಯ೯ಕ್ರಮ ದಿನಾಂಕ 17ನೇ ಡಿಸೆಂಬರ್,2023 ರ ಭಾನುವಾರ ವನಿತಾ ಸಮಾಜ, ಪಿ.ಜೆ ಬಡಾವಣೆ, ದಾವಣಗೆರೆ ಇಲ್ಲಿ ಆಯೋಜಿಸಲಾಗಿದ್ದ
ಕಾರ್ಯಕ್ರಮದ ಉದ್ಘಾಟನೆ

ಕನ್ನಡ ರಾಜ್ಯೋತ್ಸವ,ಕನಾ೯ಟಕ ಸುವಣ೯ ಸಂಭ್ರಮೋತ್ಸವ,
ಸಿರಿಗನ್ನಡ ಮಹಿಳಾ ವೇದಿಕೆ ೬ನೇ ವಾಷಿ೯ಕೋತ್ಸವ
ಸಮಾರಂಭದಲ್ಲಿ ಇಂತಹ ಕಾಯ೯ಕ್ರಮಗಳನ್ನು ಆಯೋಜಿಸಿ,ಪ್ರತಿಭಾ ಪುರಸ್ಕಾರ, ಪ್ರತಿಭಾ ಕಾರಂಜಿ,ಚಿತ್ರಕಲೆ,ಕೋಲಾಟ,ಭರತನಾಟ್ಯ, ಕನ್ನಡ ಗೀತೆಗಳು,ಹೀಗೆ ಹಲವಾರು ಕಾಯ೯ಕ್ರಮಗಳು ವೇದಿಕೆಯಲ್ಲಿ ವಿಜೃಂಭಣೆಯಿಂದ
ನಡೆಯುತ್ತಿವೆ.ಇಂತಹ ಕನ್ನಡಪರ ಸೇವೆ ಈ ವೇದಿಕೆಯಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜರುಗಲಿ, ನಮ್ಮ ಸಹಕಾರ ಸದಾ ಇರುತ್ತದೆ,ಇದು ಒಂದು ಉತ್ತಮವಾದ ಕೆಲಸ
ಈ ವೇದಿಕೆ ಮಾಡುತ್ತಿದೆ ಎಂದು ಶ್ಲಾಘಿಸಿ ಹಾರೈಸಿದರು.
ಮತ್ತೋವ೯ ವಿಶೇಷ ಆಹ್ವಾನಿತರಾದ ಬದರಿನಾಥ್,ಜಿಲ್ಲಾ ಖಜಾಂಚಿ,ಕನಾ೯ಟಕ ಕಾಯ೯ನಿರತ ಪತ್ರಕತ೯ ಸಂಘ,ದಾವಣಗೆರೆ ಇವರು ಇಂತಹ ಉತ್ತಮ ಕಾಯ೯ಕ್ರಮಗಳು
ಈ ವೇದಿಕೆಯಿಂದ ಸದಾ ಹೀಗೆ ಮುಂದುವರಿಯಲಿ,
ಇಲ್ಲಿ ವಿವಿಧ ರೀತಿ ಕಾಯ೯ಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷ ತಂದಿದೆ ಎಂದು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದು,ನಮ್ಮಿಂದಾದ ಸಹಕಾರ ನಾವು ಇಂತಹ ಸದುದ್ದೇಶದ ಕೆಲಸಗಳಿಗೆ ಸದಾ ಇದ್ದೆ ಇರುತ್ತದೆಂದು ಆಶಯ ವ್ಯಕ್ತಪಡಿಸಿದರು.
.ವಿಶೇಷ ಆಹ್ವಾನಿತರಾಗಿ,ಶ್ರೀಮತಿ.ಜಿ.ಸಿ.ನೀಲಾಂಭಿಕೆ. ಮಾ.ಸ.ಬ.ಕಲಾ ಮತ್ತು ವಾಣಿಜ್ಯ ಕಾಲೇಜು,ದಾವಣಗೆರೆ ಇವರು ಭಾಗವಹಿಸಿದ್ದರು.ಏ‌.ಬಿ.ರುದ್ರಮ್ಮ,ಜಿಲ್ಲಾಧ್ಯಕ್ಷರು ಸಿರಿಗನ್ನಡ ಮಹಿಳಾ ವೇದಿಕೆ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾಯ೯ಕ್ರಮದಲ್ಲಿ,
ಮಹಿಳೆಯರ ಕೋಲಾಟ ಎಲ್ಲರ ಮನ ಸೆಳೆದವು,40-45 ರಷ್ಟು ಕವಿ,ಕವಯಿತ್ರಿಯರು ಭಾಗವಹಿಸಿ ತಮ್ಮ ಸುಂದರ ನಾಡು ನುಡಿಗಳ ಬಗ್ಗೆ ಕವನಗಳನ್ನು ವಾಚಿಸಿ
ಎಲ್ಲರ ಮನತಣಿಸಿದರು.
ಪ್ರಾಥ೯ನೆ ಶ್ರೀಮತಿ ಸುನಂದ ಮಳಗಿ,ಸ್ವಾಗತ ಗೀತಾಮಂಜು,ಶಿಕ್ಷಕಿ,ಸಾಹಿತಿ,ಜಗಳೂರು,ನಿರೂಪಣೆ ಚೈತ್ರಾ ತಿಪ್ಪೇಸ್ವಾಮಿ,ಶಿಕ್ಷಕಿ,ಸಾಹಿತಿ,ರಾಜ್ಯ ಮಟ್ಟದ ನಿರೂಪಕರು,ವಂದನಾಪ೯ಣೆ ಶ್ರೀಮತಿ.ಗಿರಿಜಾ ಸಿದ್ದಲಿಂಗಪ್ಪ ಇವರಿಂದ ಕಾಯ೯ಕ್ರಮ ಸಾಂಗೋಪನಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments